Film News

ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್ ಫರ್ನಾಂಡಿಸ್!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಕಿಚ್ಚ ಸುದೀಪ್ ಅವರು ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಈ ನಟಿ ಸಿನಿಮಾಗಾಗಿ ಕನ್ನಡವನ್ನು ಕಲಿತು ಸುದ್ದಿಯಾಗಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈ ನಿಂದ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದಲ್ಲಿ ಜಾಕ್ವಾಲಿನ್ ಒಂದು ಹಾಡಿಗೆ ಮಾತ್ರ ನೃತ್ಯವನ್ನು ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು, ಆದರೆ ಇವರು ಕೆಲವು ಧೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರಂತೆ ಅದಕ್ಕೆ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ವಿಕ್ರಾಂತ್ ರೋಣ ಸೆಟ್ ನಿಂದ ಸಿಕ್ಕಿದೆ.

ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವ ಕಥೆಯಾಗಿದೆ, ನಾವು ಈ ಸಿನಿಮಾ ಭಾಗವಾಗಿದ್ದು ಖುಷಿಯ ವಿಚಾರವಾಗಿದೆ. ಸಿನಿಮಾದಲ್ಲಿ ನಾನು ಇರುವ ಹಾಡು ಮತ್ತು ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಸಿನಿಮಾದಲ್ಲಿ ಕಾಣಿದಿಕೊಂಡಿದ್ದು ಬಹಳ ವಿಶೇಷ ಎಂದು ನಮಗೆ ಅನಿಸುತ್ತದೆ. ಈ ಹಾಡು ಮತ್ತು ಅವರು ಮಾಡಿರುವ ಅಷ್ಟು ದೃಶ್ಯಗಳು ನೋಡುಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ.ಜಾಕ್ಕ್ಲಿನ್ 6 ದಿನಗಳ ಕಾಲ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಅವರಿಗೆ ನೀಡಿರುವ ಅಷ್ಟು ಡೈಲಾಗ್ ಗಳನ್ನು ಪ್ರಾಕ್ಟಿಸ್ ಮಾಡುಕೊಂಡು ಬಂದು ಹೇಳಿದ್ದಾರೆ.ಅವರು ಇರುವ ದೃಶ್ಯಗಳಿಗೆ ಅವರಿಂದಲೇ ಡಬ್ಬಿಂಗ್ ಮಾಡಿಸಬೇಕು ಎಂಬ ಪ್ಲಾನ್ ಇದೆ ಚಿತ್ರತಂಡಕ್ಕೆ.

https://www.instagram.com/p/CRao3cOpz_2/?utm_medium=copy_link

Trending

To Top