News

(video)ಅಂಬಿಯನ್ನು ನೆನೆದು ಹಾಡನ್ನು ಹಾಡಿ ಭಾವುಕರಾದ ವಿಜಯ್ ಪ್ರಕಾಶ್, ಅನುಶ್ರೀ! ವಿಡಿಯೋ ವೈರಲ್

zee1

ಅಂಬಿ ಅವರು ನಮ್ಮನ್ನು ಆಗಲಿ ಈಗ ಸುಮಾರು ಒಂದು ವಾರ ಕಳೆದಿದೆ. ಅಂಬಿ ಅವರ ನೆನಪುಗಳು, ಅಂಬಿ ಅವರ ಸಿನಿಮಾಗಳು, ಅವರ ನಟನೆ, ಅವರ ಹಾಡುಗಳು, ಅವರ ಡೈಲಾಗ್ ಗಳು ಮರೆಯುವುದಕ್ಕೆ ಹೇಗೆ ಸಾಧ್ಯ ನೀವು ಹೇಳಿ ಫ್ರೆಂಡ್ಸ್. ಝೀ ಕನ್ನಡದಲ್ಲಿ ಬರುವ ಸ ರೇ ಗ ಮ ಪ ಕನ್ನಡ ಹಾಡಿನ ರಿಯಾಲಿಟಿ ಶೋನಲ್ಲಿ ನಿಮಗೆಲ್ಲ ಗೊತ್ತಿರೋ ಹಾಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗು ರಾಜೇಶ್ ಕೃಷ್ಣ ಅವರು ತೀರ್ಪು ಗಾರರು. ನೆನ್ನೆ ಸ ರೇ ಗ ಮ ಪ ದಲ್ಲಿ ವಿಜಯ್ ಪ್ರಕಾಶ್ ಅವರು ಅಂಬರೀಷ್ ಅನ್ನು ನೆನೆದು ಅವರ “ಬೋಂಬೆ ಆಡ್ಸೋನು, ಮೇಲೆ ಕುಂತವನೋ, ಪರಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ , ಅವನಿರದೆ ಹೋದರೂನು ತಿರುಗುತಪ್ಪ ಈ ಭೂಮಿ !” ಹಾಡನ್ನು ಹಾಡಿ ಎಲ್ಲರನ್ನು ಮೂಖ ಸ್ತಬ್ದರಾನ್ನಾಗಿ ಮಾಡಿದ್ದಾರೆ. ಈ ಕೆಳಗಿನ ವಿಡಿಯೋ ನೀವು ಒಮ್ಮೆ ನೋಡಿರಿ!
ಪರಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ , ಅವನಿರದೆ ಹೋದರೂನು ತಿರುಗುತಪ್ಪ ಈ ಭೂಮಿ, ಈ ಹಾಡು ಅಂಬರೀಷ್ ಅವರ ಡ್ರಾಮಾ ಚಿತ್ರದ ಹಾಡು. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ , ಸತೀಶ್ ನೀನಾಸಂ , ಸಿಂಧು ಲೋಕನಾಥ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ವಿಶೇಷ ಪಾತ್ರವನ್ನು ಮಾಡಿದ್ದರು. ಡ್ರಾಮಾ ಚಿತ್ರವನ್ನು ಕನ್ನಡದ ಅದ್ಭುತ ನಿರ್ದೇಶಕ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದು.
ಕನ್ನಡ ಚಿತ್ರ ಡ್ರಾಮಾ ಕ್ಕೆ ಹರಿ ಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಚಿತ್ರದ ” ಬೋಂಬೆ ಆಡ್ಸೋನು” ಹಾಡನ್ನು ಸ್ವತಃ ಹರಿ ಕೃಷ್ಣ ಅವರೇ ಹಾಡಿದ್ದರು. ನಿಜಕ್ಕೂ ಈ ಹಾಡನ್ನು ಕೇಳಿದ್ರೆ ಅಂಬಿ ಅವರು ಕಣ್ಣು ಮುಂದೆ ಬರುತ್ತಾರೆ ಕಣ್ರೀ! ನಿಜಕ್ಕೂ ಇಷ್ಟು ಬೇಗ ಅಂಬರೀಷ್ ಅವರು ನಮ್ಮನೆಲ್ಲ ಬಿಟ್ಟು ಹೋಗಬಾರದಿತ್ತು.

ಜಿ ಕನ್ನಡದಲ್ಲಿ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಒಂದು ಎಪಿಸೋಡ್ ಅಂಬರೀಷ್ ಅವರಿಗೆ ಅರ್ಪಣೆ ಮಾಡಿದ್ದರು. ಎಲ್ಲಾ ಸ್ಪರ್ಧಿಗಳು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹಾಡುಗಳನ್ನು ಹಾಡಿ ಮನೋರಂಜನೆ ನೀಡಿದರು. ಅಂಬಿ ಅವರ ಎಲ್ಲಾ ಹಾಡನ್ನು ಕೇಳಿ ಅಲ್ಲಿದ್ದ ಜನರು ಭಾವುಕರಾದರು. ವಿಜಯ್ ಪ್ರಕಾಶ್ ಹಾಡಿರುವ ಬೋಂಬೆ ಆಡ್ಸೋನು ಹಾಡನ್ನು ಕೇಳಿ ನಿರೂಪಕಿ ಅನುಶ್ರೀ ಅವರು ಕೂಡ ಭಾವುಕರಾದರು.

Trending

To Top