Film News

ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಾಸ್ಟರ್ ರಿಲೀಸ್ ದಿನಾಂಕ ಘೋಷಣೆ

ಚೆನೈ: ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ ನಟನೆಯ ಮಾಸ್ಟರ್ ಸಿನೆಮಾ ರಿಲೀಸ್ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ ಚಿತ್ರ ತಂಡ.

ಕೊರೋನಾ ಲಾಕ್ ಡೌನ್ ಸಡಿಲಿಕೆಯ ನಂತರ ಮೊದಲ ಬಾರಿಗೆ ಬಿಗ್ ಸ್ಟಾರ್ ನಟನೋರ್ವನ ಚಿತ್ರ ರಿಲೀಸ್ ಆಗುತ್ತಿದೆ. ದಳಪತಿ ವಿಜಯ್ ಹಾಗೂ ಸೇತುಪತಿ ಅಭಿನಯದ ಮಾಸ್ಟರ್ ಚಿತ್ರ ಜನವರಿ 13 ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇನ್ನೂ ಈ ನ್ಯೂಸ್ ಕೇಳಿದ ದಳಪತಿ ಅಭಿಮಾನಿಗಳು ಕೇಕೆ ಹಾಕಿದ್ದಾರೆ. 2020 ರಲ್ಲಿ ತೆರೆಕಾಣ ಬೇಕಾಗಿದ್ದ ಚಿತ್ರಗಳಲ್ಲಿ ಮಾಸ್ಟರ್ ಸಿನೆಮಾ ಕೂಡ ಒಂದು. ಆದರೆ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ತಡೆಯಾಗಿತ್ತು.

ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದಿಂದ ಚಿತ್ರಮಂದಿರಗಳಲ್ಲಿ ಶೇ.50 ಮಂದಿಗೆ ಮಾತ್ರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಸಿನೆಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಿಲ್ಲಿ ಮಾಸ್ಟರ್ ಚಿತ್ರತಂಡ ಗಟ್ಟಿ ನಿರ್ಧಾರ ತೆಗೆದುಕೊಂಡು ಚಿತ್ರವನ್ನು ರಿಲೀಸ್ ಮಾಡಲು ಮುಂದೆ ಬಂದಿದೆ. ಈ ಚಿತ್ರ ತಮಿಳು ಸೇರಿದಂತೆ ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲಿದೆ. ಜೊತೆಗೆ ಜನವರಿ 7 ರಿಂದ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಲಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

Trending

To Top