ಸಂಸಾರದ ಕಷ್ಟ ಗಳು ಯಾರ್ ನ ಬಿಟ್ಟಿವೆ ಹೇಳಿ ಸಾರ್ ತ್ರೇತಾಯುಗ ದ್ವಾಪರಯುಗ ದಿಂದಲೂ ಜನಗಳು ಸಂಸಾರದ ಕಷ್ಟಗಳಿಗೆ ತುತ್ತಾಗುತ್ತ ಬಂದಿದ್ದಾರೆ ಇನ್ನು ದೇವಾನು ದೇವತೆಗಳೇ ಇಂತ ಕೌಟುಂಬಿಕ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಅಲ್ಲವೇ ಅಂತದ್ದರಲ್ಲಿ ಸಿನಿಮಾ ನಟರು ಏನ್ ಸ್ಪೆಷಲ್ ಅಲ್ಲ. ಇದೀಗ ತೆಲುಗು ನಟ ವಿಜಯ್ ಕುಮಾರ್ ತಮ್ಮ ಮಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ತಮಿಳು ನಟನಾದ ಟಾಲಿವುಡ್ ಹಾಗೂ ಕನ್ನಡ ಪ್ರೇಕ್ಷಕರಿಗೆ ಕೂಡಾ ಚಿರಪರಿಚಿತ ಇದ್ದ ವಿಜಯ್ ಕುಮಾರ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಇನ್ನು ಅವರ ಪುತ್ರಿ ವನಿತಾ ಸಹ ನಟಿಯೇ. ಈ ಹಿರಿಯ ನಟ ಇದೀಗ ತಮ್ಮ ಮಗಳ ವಿರುದ್ಧವೇ ದೂರು ನೀಡಿದ್ದಾರೆ. ವಿಜಯ್, ಮಗಳ ವಿರುದ್ಧ ಹೀಗೆ ದೂರು ನೀಡುತ್ತಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿ.
ವರ್ಷದ ಪ್ರಾರಂಭದಲ್ಲಿ ವನಿತಾ ಚೆನ್ನೈನ ಪೆಣಂಬೂರಿನಲ್ಲಿ ವಿಜಯ್ ಕುಮಾರ್ ಅವರಿಗೆ ಸೇರಿದ ಮನೆಯೊಂದನ್ನು ಶೂಟಿಂಗ್ಗಾಗಿ ಬಾಡಿಗೆ ಪಡೆದಿದ್ದರು. ಆದರೆ ಶೂಟಿಂಗ್ ಮುಗಿದ ಮೇಲೂ ವನಿತಾ ಆ ಮನೆಯನ್ನು ಖಾಲಿ ಮಾಡಿರಲಿಲ್ಲ. ಇದು ನನ್ನ ಮನೆ ಎಂದು ವನಿತಾ ವಾದ ಮಾಡಿದ್ದರು. ಈ ಸಮಯದಲ್ಲಿ ವಿಜಯ್ ಕುಮಾರ್ ಪೊಲೀಸರ ಮೊರೆ ಹೋಗಿದ್ದಕ್ಕೆ ಪೊಲೀಸರು ವನಿತಾ ಅವರನ್ನು ಮನೆಯಿಂದ ಖಾಲಿ ಮಾಡಿಸಿದ್ದರು.
ಆದರೆ ಮತ್ತೆ ವನಿತಾ ಅದೇ ಮನೆಗೆ ಹೋಗಿ ಸೇರಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವನಿತಾ ಅವರನನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಈಗ ಅದು ಕೇಸ್ ದಾಖಲಾಗಿದೆ. ಕೆಲವು ವರ್ಷಗಳಿಂದ ಅಪ್ಪ-ಮಗಳ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
