Film News

ವಿಜಯ ದೇವರಕೊಂಡ-ಅನನ್ಯಪಾಂಡೆ ಪೊಟೋಸ್ ವೈರಲ್!

ಹೈದರಾಬಾದ್: ಟಾಲಿವುಡ್‌ನ ಯಂಗ್ ಹಿರೋ ವಿಜಯ ದೇವರಕೊಂಡ ಬಿಗ್ ಬಜೆಟ್ ಚಿತ್ರವಾದ ಲೈಗರ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಇದೀಗ ವಿಜಯದೇವರಕೊಂಡ ಹಾಗೂ ಅನನ್ಯ ಪಾಂಡೆ ಇಬ್ಬರ ರೊಮ್ಯಾಂಟಿಕ್ ಪೊಟೋಗಳು ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡಿಂಗ್ ಆಗುತ್ತಿದೆ.

ನಿರ್ದೇಶಕ ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರಲಿರುವ ಈ ಲೈಗರ್ ಚಿತ್ರ ಈಗಾಗಲೇ ಪೋಸ್ಟರ್ ಗಳ ಮೂಲಕ ಸಖತ್ ಹೈಪ್ ಬೆಳೆಸಿಕೊಂಡಿದೆ. ಇನ್ನೂ ಈ ಸಿನೆಮಾದ ಅಪ್ಡೇಟ್‌ಗಳನ್ನು ಆಗಾಗ ನಿರ್ಮಾಪಕಿ ಚಾರ್‍ಮಿ ತಮ್ಮ ಸೊಷಿಯಲ್ ಮಿಡೀಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಲೈಗರ್ ಸಿನೆಮಾ ಶೂಟಿಂಗ್ ಅಜ್ಞಾತ ಸ್ಥಳದಲ್ಲಿ ನಡೆಯುತ್ತಿದ್ದು, ಚಿತ್ರದ ನಾಯಕ ವಿಜಯದೇವರಕೊಂಡ ಹಾಗೂ ಅನನ್ಯ ಪಾಂಡೆ ತುಂಬಾ ಹತ್ತಿರವಾದಂತಹ ರೊಮ್ಯಾಂಟಿಕ್ ಪೊಟೋಗಳು ಟ್ರೆಂಡಿಗ್ ಆಗುತ್ತಿದೆ.

ವಿಜಯ್ ದೇವರಕೊಂಡ ಅನನ್ಯ ಪಾಂಡೆ ಆಲಂಗಿಸಿಕೊಳ್ಳುವ ಪೊಟೋವೊಂದನ್ನು ಮಿಡೀಯಾವೊಂದರ ಪೊಟೋಗ್ರಾಫರ್ ತೆಗೆದಿದ್ದಾರೆ. ನಂತರ ಇಬ್ಬರೂ ಕೂಡ ಮಿಡಿಯಾಗೆ ಪೋಸ್‌ಗಳನ್ನು ಕೊಟ್ಟಿದ್ದಾರೆ. ಇನ್ನೂ ಲೈಗರ್ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತೀಚಿಗಷ್ಟೆ ಶೂಟಿಂಗ್ ಮುಗಿಸಿರುವ ಬಗ್ಗೆ ವಿಜಯದೇವರಕೊಂಡ, ಚಾರ್‍ಮಿ, ರಮ್ಯಕೃಷ್ಣ, ಪೂರಿಜಗನ್ನಾಥ್ ಸೇರಿದಂತೆ ಹಲವರ ಪೊಟೋ ಒಂದು ಸಹ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

Trending

To Top