Film News

ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಜೊತೆ ನಟಿಸಲಿದ್ದಾರೆ ಕಾಲಿವುಡ್ ಸ್ಟಾರ್ ನಟ!

ಚೆನೈ: ಶ್ರೀರಾಮ್ ರಾಘವನ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವೊಂದರಲ್ಲಿ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಕಾಲಿವುಡ್ ಸ್ಟಾರ್ ನಟ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಲಿವುಡ್ ಸ್ಟಾರ್ ನಟರಾದ ವಿಜಯ್ ಸೇತುಪತಿ ಕತ್ರಿನಾ ಕೈಫ್ ಜೊತೆ ನಟಿಸಲಿದ್ದಾರಂತೆ.

ಬಾಲಿವುಡ್ ನ ಮುಂಚೂಣಿಯಲ್ಲಿರುವ ನಟಿಯರಲ್ಲೊಬ್ಬರಾದ ಕತ್ರಿನಾ ಕೈಫ್, ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ ಕತ್ರಿನಾ. ಈಗಾಗಲೇ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ ರವರೊಂದಿಗಿನ ಸೂರ್ಯವಂಶಿ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಕೊರೋನಾ ದಿಂದಾಗಿ ಬಿಡುಗಡೆ ತಡವಾಗಿತ್ತು. ಶೀಘ್ರದಲ್ಲಿಯೇ ಈ ಚಿತ್ರವೂ ಸಹ ತೆರೆಮೇಲೆ ಬರಲಿದೆ. ಇನ್ನೂ ಕತ್ರಿನಾ ’ಪೋನ್ ಭೂತ್’ ಎಂಬ ಕಾಮಿಡಿ ಹಾರರ್ ಚಿತ್ರದಲ್ಲೂ ಸಹ ನಟಿಸಲಿದ್ದಾರೆ. ಇದರ ಬೆನ್ನಲ್ಲೇ ಕಾಲಿವುಡ್ ನಟ ವಿಜಯ್ ಸೇತುಪತಿ ರವರೊಂದಿಗೆ ಮತ್ತೊಂದು ಚಿತ್ರದಲ್ಲೂ ನಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಶ್ರೀರಾಮ್ ರಾಘವನ್ ಅಂಧಾದುನ್ ಎಂಬ ಸೂಪರ್ ಹಿಟ್ ಚಿತ್ರದ ಬಳಿಕ ವರುಣ್ ಧವನ್ ಜೊತೆ ಎಕ್ಕಿಸ್ ಎಂಬ ಸಿನೆಮಾ ನಿರ್ದೇಶನ ಮಾಡಬೇಕಿತ್ತು. ಕೆಲವು ಕಾರಣಾಂತರಗಳಿಂದ ಈ ಸಿನೆಮಾ ಹಿಂದೆ ಬಿತ್ತು. ಇದೀಗ ಕತ್ರಿನಾ ರವರೊಂದಿಗೆ ಹೊಸ ಸಿನೆಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ನಾಯಕನಾಗಿ ನಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂದಹಾಗೆ ನಟ ವಿಜಯ್ ಸೇತುಪತಿ ಈಗಾಗಲೇ ಮುಂಬೈಕರ್ ಎಂಬ ಸಿನೆಮಾ ಒಪ್ಪಿಕೊಳ್ಳುವ ಮೂಲಕ ಬಾಲಿವುಡ್ ರಂಗಕ್ಕೂ ಕಾಲಿಟ್ಟಿದ್ದಾರೆ.

ಇನ್ನೂ ನಟ ವಿಜಯ್ ಸೇತುಪತಿ ಅಮೀರ್ ಖಾನ್ ರವರ ಜೊತೆ ಲಾಲ್ ಸಿಂಗ್ ಛಡ್ಡಾ ಎಂಬ ಸಿನೆಮಾದಲ್ಲಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಈ ಚಿತ್ರ ಸಾಧ್ಯವಾಗಲಿಲ್ಲ. ನಟ ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪರಿ ಕಾಂಬಿನೇಷನ್ ನಲ್ಲಿ ಸಿನೆಮಾ ಯಾವ ರೀತಿ ನಿರ್ಮಾಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Trending

To Top