Film News

ರಾಮನಗರದಲ್ಲಿ ಕನ್ನಡಾಭಿಮಾನ ಮೆರೆದ ನಟ ವಿಜಯ್ ಸೇತುಪತಿ

ದಕ್ಷಿಣ ಭಾರತ ಚಿತ್ರರಂಗದ ಬಹಳ ಜನಪ್ರಿಯ ನಟರಲ್ಲಿ ಒಬ್ಬರು ವಿಜಯ್ ಸೇತುಪತಿ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಬಹಳ ಕಷ್ಟ ಪಟ್ಟು ಯಶಸ್ಸು ಪಡೆದ ನಟರಲ್ಲಿ ಇವರು ಒಬ್ಬರು.

ಇತ್ತೀಚೆಗೆ ವಿಜಯ್ ಸೇತುಪತಿ ಅವರು ಬೆಂಗಳೂರಿನ ರಾಮನಗರಕ್ಕೆ ಬಂದಿದ್ದರು. ತಮಿಳಿನಲ್ಲಿ ಶುರು ಆಗಬೇಕಿರುವ ಮಾಸ್ಟರ್ ಚೆಫ್ ಕಾರ್ಯಕ್ರಮದ ಆರಂಭಕ್ಕಾಗಿ ವಿಜಯ್ ಸೇತುಪತಿ ಅವರು ರಾಮನಗರದಲ್ಲಿರುವ ಇನೋವೇಟಿವ್ ಫಿಲ್ಮ್ ಸಿಟಿಗೆ ಬಂದಿದ್ದರು. ಆಗ ಕನ್ನಡದಲ್ಲಿ ಒಂದು ಡೈಲಾಗ್ ಹೊಡೆದು ಕನ್ನಡಾಭಿಮಾನ ಮೆರೆದಿದ್ದಾರೆ.

ಪತ್ರಕರ್ತರು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ, ನನಗೆ ಕನ್ನಡ ಅರ್ಥ ಆಗುತ್ತೆ ಎಂದಿದ್ದಾರೆ. ಕರ್ನಾಟಕದಲ್ಲಿ ಮೈಸೂರು ಮತ್ತು ಕೂರ್ಗ್ ಗೆ ಬಂದಿರುವುದಾಗಿ, ಮೈಸೂರು ಅರಮನೆ ನಾನು ನೋಡಿದ್ದೇನೆ, ಬಹಳ ಸುಂದರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಟ ಸುದೀಪ್ ಅವರ ಅಭಿನಯವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಮಾತ್ರವಲ್ಲದೆ, ಕನ್ನಡಕ್ಕೆ ಡಬ್ ಆಗಿರುವ ಅವರ ಸಿನಿಮಾದ ಕನ್ನಡ ಡೈಲಾಗ್ ಸಹ ಹೇಳಿದ್ದಾರೆ.

Trending

To Top