Film News

ಸಲಾರ್ ಚಿತ್ರದಲ್ಲಿ ಇವರೇನಾ ವಿಲನ್?

ಹೈದರಾಬಾದ್: ಈಗಾಗಲೇ ಟಾಲಿವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಸಲಾರ್ ಚಿತ್ರದಲ್ಲಿ ನಾಯಕ ಪ್ರಭಾಸ್ ಬಿಟ್ಟರೇ, ಬೇರೆ ಯಾರೆಲ್ಲಾ ಕಲಾವಿದರು ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗದಿದ್ದರೂ, ಇದೀಗ ಬಂದ ಸುದ್ದಿ ಪ್ರಕಾರ ತಮಿಳು ಖ್ಯಾತ ನಟನೊಬ್ಬ ವಿಲನ್ ಪಾತ್ರ ಪೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಲಾರ್ ಚಿತ್ರದ ನಾಯಕಿ ವಿಚಾರ ಚಿತ್ರರಂಗದಲ್ಲಿ ದೊಡ್ಡದಾಗಿ ಚರ್ಚೆ ನಡೆಯುತ್ತಿದ್ದು, ಇದೀಗ ಮತ್ತೊಂದು ಪಾತ್ರದ ಕುರಿತಂತೆ ಚರ್ಚೆ ಪ್ರಾರಂಭವಾಗಿದೆ. ಅದರಂತೆ ಸಲಾರ್ ಚಿತ್ರದಲ್ಲಿ ಪ್ರಭಾಸ್ ರನ್ನು ಎದುರು ಹಾಕಿಕೊಳ್ಳಲಿದ್ದಾರೆ ಕಾಲಿವುಡ್ ನಟ ವಿಜಯ್ ಸೇತುಪತಿ. ಈ ವಿಚಾರ ಸಿನಿರಂಗದಲ್ಲಿ ಹರಿದಾಡುತ್ತಿದ್ದು, ಚಿತ್ರತಂಡದಿಂದ ಯಾವುದೇ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಈಗಾಗಲೇ ತಮಿಳಿನ ಮಾಸ್ಟರ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ, ಖ್ಯಾತಿ ಪಡೆಯುತ್ತಿರುವ ನಟ ವಿಜಯ್ ಸೇತುಪತಿ ಸಲಾರ್ ಚಿತ್ರದಲ್ಲೂ ಸಹ ವಿಲನ್ ಪಾತ್ರದಲ್ಲಿ ನಟಿಸಲು ಚಿತ್ರತಂಡ ಮಾತುಕತೆ ಸಹ ನಡೆಸಿದೆಯಂತೆ. ಆದರೆ ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಸೇತುಪತಿ ಒಪ್ಪಿಗೆ ಕೊಟ್ಟರೇ ಸಲಾರ್ ಚಿತ್ರದ ಮೇಲಿನ ನಿರೀಕ್ಷೆ ಮತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಇನ್ನೂ ಸಲಾರ್ ಚಿತ್ರದಲ್ಲಿ ನಾಯಕಿಯ ಪಾತ್ರದ ಕುರಿತಂತೆಯೂ ಚರ್ಚೆ ನಡೆಯುತ್ತಿದ್ದು, ಬಾಲಿವುಡ್ ನ ಸ್ಟಾರ್ ನಟಿಯರಾದ ಕತ್ರಿನಾ ಕೈಫ್ ಹಾಗೂ ದಿಶಾ ಪಟಾನಿ ರವರ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಈ ಕುರಿತು ಸಹ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಚಿತ್ರದ ಮೂಹೂರ್ತ ಕಾರ್ಯಕ್ರಮ ನೆರವೇರಿದ್ದು, ಫೆಬ್ರವರಿ ಮಾಹಿತಿಯಿಂದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆಯಂತೆ.

Trending

To Top