Film News

ನನ್ನನ್ನು ಕ್ಷಮಿಸಿಬಿಡಿ ಎಂದು ಗಳಗಳನೆ ಅತ್ತ ವಿಜಯ ರಂಗರಾಜು

ಬೆಂಗಳೂರು: ಖ್ಯಾತ ಕನ್ನಡದ ಮೇರು ನಟ ವಿಷ್ಣುವರ್ಧನ್ ರವರ ಬಗ್ಗೆ ತೆಲುಗು ನಟ ವಿಜಯ ರಂಗರಾಜು ಕೆಲವು ದಿನಗಳ ಹಿಂದೆ ಯೂಟೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವಮಾನಕಾರಿಯಾಗಿ ಮಾತನಾಡಿದ್ದರು. ಇದಕ್ಕಾಗಿ ಎಲ್ಲರೂ ತರಾಟೆಗೆ ತೆಗೆದುಕೊಂಡ ನಂತರ ಅಳುತ್ತಾ ಮಂಡಿಯೂರಿ ಕ್ಷಮಾಪಣೆ ಕೇಳಿದ್ದಾರೆ ವಿಜಯ ರಂಗರಾಜು.

ಈ ಕುರಿತು ವಿಡಿಯೋ ಮೂಲಕ ಕ್ಷಮಾಪಣೆ ಕೇಳಿದ ವಿಜಯ ರಂಗರಾಜು, ನಾನು ಅಷ್ಟು ದೊಡ್ಡ ನಟನೂ ಅಲ್ಲ, ನಾನೊಬ್ಬ ಸಣ್ಣಪುಟ್ಟ ಪಾತ್ರಗಳನ್ನು ಮಾಡುವಂತಹ ಕಲಾವಿದನಷ್ಟೆ. ನನ್ನನ್ನು ಬಿಟ್ಟುಬಿಡಿ, ನನ್ನಬಳಿ ದುಡ್ಡು ಇಲ್ಲ, ಏನೂ ಇಲ್ಲ. ನಾನು ವಿಷ್ಣುವರ್ಧನ್ ರವರ ಬಗ್ಗೆ ಹೇಳಿದ್ದು ಸುಳ್ಳು. ಅವರು ನಿಧನರಾಗುವುದಕ್ಕೂ ಮುನ್ನಾ ನನಗೆ ದೊರಕಬೇಕಿದ್ದ ಪಾತ್ರವೊಂದನ್ನು ಬೇರೆಯವರಿಗೆ ಕೊಡಿಸಿದ್ದರು. ಆ ಕೋಪದಲ್ಲಿ ನಾನು ಬಾಯಿಗೆ ಬಂದಂತೆ ಮಾತನಾಡಿದ್ದೇನೆ. ವಿಷ್ಣು ಅವರ ಬಗ್ಗೆ ನಾನು ಹೇಳಿದಂತೆ ನಡೆದುಕೊಂಡಿದ್ದರೇ, ಅಂದು ಸಿನೆಮಾ ಯೂನಿಟ್ ರವರೇ ನನ್ನನ್ನು ಸಾಯಿಸಿಬಿಡುತ್ತಿದ್ದರು. ನನಗೆ ತಪ್ಪಿನ ಅರಿವಾಗಿದೆ, ನನ್ನ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ನನಗೆ ಕೊರೋನಾ ಬಂದಿದೆ. ನಾನು ಮಾಡಿದ ತಪ್ಪಿಗೆ ದೇವರು ತಕ್ಕ ಶಿಕ್ಷೆ ನೀಡಿದ್ದಾರೆ.

ನಾನು ವಿಷ್ಣು ದಾದಾ ಅವರ ಅಭಿಮಾನಿಗಳಲ್ಲಿ, ಅವರ ಕುಟುಂಬದವರಲ್ಲಿ, ನಟರಾದ ಸುದೀಪ್, ಪುನೀತ್ ರಾಜಕುಮಾರ್, ಉಪೇಂದ್ರ, ಜಗ್ಗೆಶ್, ಯಶ್, ಅನಿರುದ್ದ್ ಸೇರಿದಂತೆ ಎಲ್ಲರಿಗೂ ಕೇಳಿಕೊಳ್ಳಿತ್ತಿದ್ದೇನೆ. ಭಾರತಿ ಅಮ್ಮನವರ ಕಾಲು ಹಿಡಿದು ಕ್ಷಮೆ ಕೇಳಿಕೊಳ್ಳುತ್ತೇನೆ. ನಾನು ಮಾಡಿದ ತಪ್ಪು ಮುಂದೆ ಎಂದಿಗೂ ಮಾಡುವುದಿಲ್ಲ. ನನಗೆ ಅವಕಾಶಗಳು ಕಡಿಮೆಯಿದ್ದ ವೇಳೆಯಲ್ಲಿ ನಾನು ಕೆಲವು ವರ್ಷಗಳ ಕಾಲ ಲಂಡನ್ ನಲ್ಲಿ ಶೌಚಾಲಯಗಳನ್ನು ಸ್ವಚ್ಚ ಮಾಡಿದ್ದೇನೆ. ರಸ್ತೆಗಳನ್ನು ಗೂಡಿಸಿದ್ದೇನೆ. ನನಗೆ ನಟರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಅಹಂಕಾರದಲ್ಲಿ ವಿಷ್ಣುದಾದಾ ಬಗ್ಗೆ ಮಾತನಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ಗಳಗಳನೇ ಅಳುತ್ತಾ ಮಂಡಿಯೂರಿ ಕ್ಷಮೆ ಕೋರಿದ್ದಾರೆ.

Trending

To Top