ಕೆಜಿಎಫ್-3 ಸಿನೆಮಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಸಿನೆಮಾ ತೆರೆಗೆ ಬರುತ್ತಾ ಇಲ್ಲವಾ ಎಂಬ ಗೊಂದಲ ಸಹ ಇದ್ದಾಗ ಕಳೆದೆರಡು ದಿನಗಳ ಹಿಂದೆ ನಿರ್ಮಾಪಕ ವಿಜಯ್ ಕಿರಂಗದೂರ್ ಅಕ್ಟೋಬರ್ ಮಾಹೆಯಿಂದ ಕೆಜಿಎಫ್-3 ಸಿನೆಮಾ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಿದ್ದರು. ಆದರೆ ಇದೀಗ ಪುನಃ ಕೆಜಿಎಫ್-3 ಸಿನೆಮಾ ಶೂಟಿಂಗ್ ಸದ್ಯಕ್ಕಿಲ್ಲ ಎಂದು ಹೊಂಬಾಳೆ ಫಿಲಂಸ್ ನ ಕಾರ್ಯಕಾರಿ ನಿರ್ಮಾಪಕರ ಕಾರ್ತಿಕ್ ಗೌಡ ಎಂದು ಟ್ವೀಟ್ ಮಾಡುವ ಮೂಲಕ ಕೆಜಿಎಫ್-3 ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ನಿರ್ಮಾಪಕ ವಿಜಯ್ ಕಿರಂಗದೂರ್ ಇತ್ತೀಚಿಗೆ ಸುದ್ದಿವಾಹಿಯೊಂದರ ಸಂದರ್ಶನದಲ್ಲಿ ಕೆಜಿಎಫ್-3 ಸಿನೆಮಾ ಶೂಟಿಂಗ್ ಕೆಲಸಗಳು ಇನ್ನೇನೂ ಶುರುವಾಗಲಿದೆ. ಅಕ್ಟೋಬರ್ ಮಾಹೆಯಿಂದ ಸಿನೆಮಾದ ಶೂಟಿಂಗ್ ನಡೆಯಲಿದ್ದು, ಸಿನೆಮಾ 2024 ರಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಹೊಂಬಾಳೆ ಫಿಲಂಸ್ ನ ಮತ್ತೋರ್ವ ನಿರ್ಮಾಪಕ ಕಾರ್ತಿಕ್ ಗೌಡ ಎಂಬುವರು ಕೆಜಿಎಫ್-3 ಸಿನೆಮಾ ಸದ್ಯಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದು, ಈ ಇಬ್ಬರೂ ನಿರ್ಮಾಪಕರ ವಿಭಿನ್ನ ಹೇಳಿಕೆಗಳಿಂದ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.
ಇನ್ನೂ ಕೆಜಿಎಫ್-3 ಸಿನೆಮಾ ಅಪ್ಡೇಟ್ ಸಿಕ್ಕಿದೆ ಎಂಬ ಖುಷಿಯಲ್ಲಿ ಅಭಿಮಾನಿಗಳಿದ್ದರು. ಆದರೆ ಈ ಖುಷಿ ಕೇವಲ ಎರಡು ದಿನಕ್ಕೆ ಮುಗಿದಂತಾಗಿದೆ. ವಿಜಯ್ ಕಿರಂಗದೂರ್ ಡಿಸೆಂಬರ್ ನಲ್ಲಿ ಸಿನೆಮಾ ಶೂಟಿಂಗ್ ಎಂದು ಹೇಳಿದ್ದು, ಮತ್ತೊರ್ವ ನಿರ್ಮಾಪಕ ಕಾರ್ತಿಕ್ ಗೌಡ್ ಕೆಜಿಎಫ್-3 ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಈ ಕುರಿತು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ. ಸದ್ಯ ಕೆಜಿಎಫ್-3 ಬಗ್ಗೆ ಹರಿದಾಡುತ್ತಿರುವ ಎಲ್ಲಾ ಸುದ್ದಿ ಬರೀ ರೀಲ್. ಇನ್ನೂ ನಾವು ಇನ್ನೂ ಅದ್ಬುತ ಪ್ರಾಜೆಕ್ಟ್ಗಳನ್ನು ಹೊಂದಿದ್ದೇವೆ. ಸದ್ಯಕ್ಕಂತೂ KGF 3 ಸಿನೆಮಾ ಮಾಡುವ ಉದ್ದೇಶವಿಲ್ಲ. ಇನ್ನೂ ಕೆಜಿಎಫ್-3 ಆರಂಭವಾಗುವ ಕುರಿತು ದೊಡ್ಡ ಮಟ್ಟದಲ್ಲೇ ಪ್ರಚಾರ ಮಾಡುತ್ತೇವೆ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.
ಇನ್ನೂ ಈ ಕುರಿತು ಚಂದನವನದಲ್ಲಿ ದೊಡ್ಡದಾಗಿಯೇ ಚರ್ಚೆಗಳು ಶುರುವಾಗಿದೆ. ಕೆಜಿಎಫ್-3 ಸಿನೆಮಾದ ಬಗ್ಗೆ ನಿರ್ಮಾಪಕರುಗಳು ವಿಭಿನ್ನ ಹೇಳಿಕೆ ನೀಡಿದ್ದ್ಯಾಕೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಅಭಿಮಾನಿಗಳಂತೂ ಈ ಸುದ್ದಿಯಿಂದ ತುಂಬಾನೆ ನಿರಾಸೆಯಾಗಿದ್ದಾರೆ. ಇನ್ನೂ ನಿರ್ದೇಶಕ ನರ್ತನ್ ಹಾಗೂ ಯಶ್ ಸಿನೆಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಆದ್ದರಿಂದ ಅಕ್ಟೋಬರ್ ನಲ್ಲಿ ಕೆಜಿಎಫ್-3 ಶೂಟಿಂಗ್ ಪ್ರಾರಂಭ ಆಗೋದು ಡೌಟ್ ಎಂದು ಹೇಳಲಾಗುತ್ತಿದ್ದು, ಇದೇ ಕಾರಣದಿಂದಲೇ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-3 ಸದ್ಯಕ್ಕಿಲ್ಲ ಎಂಬ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.