ವಿವಾದಗಳನ್ನು ಬದಿಗಿಟ್ಟು ತಮ್ಮ ಮುದ್ದಿನ ಮಕ್ಕಳೊಂದಿಗೆ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆ…!

ಇತ್ತೀಚಿಗೆ ಸಿನಿರಂಗದಲ್ಲಿ ಸದಾ ಸುದ್ದಿಯಲ್ಲೇ ಇದ್ದಂತಹ ಜೋಡಿ ಎಂದರೇ ಅದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ. ಕಳೆದ ಜೂನ್ 9 ರಂದು ಚೆನ್ನೈನಲ್ಲಿ ನಯನ್ ಅಂಡ್ ವಿಕ್ಕಿ ಮದುವೆ ಅದ್ದೂರಿಯಾಗಿಯೇ ನಡೆಯಿತು. ಬಳಿಕ ಅವರು ಅನೇಕ ವಿವಾದಗಳಲ್ಲಿ ಸಿಲುಕಿಕೊಂಡರು. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡಿದ್ದು, ಈ ವಿಚಾರ ಹೊರ ಬರುತ್ತಿದ್ದಂತೆ ಅನೇಕ ವಿವಾದಗಳೂ ಸಹ ಹುಟ್ಟಿಕೊಂಡವು. ಜೊತೆಗೆ ತಮಿಳುನಾಡು ಸರ್ಕಾರ ಸಹ ಈ ಕುರಿತು ವಿಚಾರಣೆ ನಡೆಸುವಂತೆ ಆದೇಶ ಮಾಡಿತ್ತು. ನಯನತಾರಾ ಹಾಗೂ ವಿಘ್ನೇಶ್ ರವರ ಈ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ನಿರ್ದೇಶಕ ವಿಘ್ನೇಶ್ ಶಿವನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ತಾವು ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡ ಬಗ್ಗೆ ಘೋಷಣೆ ಮಾಡಿದ್ದರು. ಈ ಸುದ್ದಿ ಹೊರಬರುತ್ತಿದ್ದಂತೆ ಅನೇಕ ವಿವಾದಗಳೂ ಸಹ ಹುಟ್ಟಿಕೊಂಡವು. ಇನ್ನೂ ಈ ಎಲ್ಲಾ ವಿವಾದಗಳನ್ನು ಬದಿಗೊತ್ತಿ ನಯನತಾರಾ ಹಾಗೂ ವಿಘ್ನೇಶ್ ಜೋಡಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಮಕ್ಕಳೊಂದಿಗೆ ಹಬ್ಬವನ್ನು ಮೊದಲ ಬಾರಿಗೆ ಆಚರಣೆ ಮಾಡಿದ್ದಾರೆ. ವಿಘ್ನೇಶ್ ತಮ್ಮ ಮಕ್ಕಳನ್ನು ಎತ್ತಿಕೊಂಡು ಇರುವ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ವಿಡಿಯೋ ದಲ್ಲಿ ನಯನತಾರಾ, ವಿಘ್ನೇಶ್ ಜೊತೆಗೆ ತಮ್ಮ ಮುದ್ದಿನ ಮಕ್ಕಳು ಸಹ ಇದ್ದಾರೆ. ಆದರೆ ವಿಡಿಯೋದಲ್ಲಿ ಎಲ್ಲೂ ಸಹ ತಮ್ಮ ಮಕ್ಕಳ ಮುಖವನ್ನು ತೋರಿಸಿಲ್ಲ. ಆದರೆ  ದಂಪತಿ ತಮ್ಮ ಮಕ್ಕಳೊಂದಿಗೆ ತುಂಬಾ ಸಂತೋಷವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳೂ ಸಹ ದೀಪಾವಳಿ ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ವಿಘ್ನೇಶ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್‍ ಮಾಡಿ ಸಂದೇಶವೊಂದನ್ನು ಸಹ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು. ಎಲ್ಲಾ ಸಂದರ್ಭದಲ್ಲೂ ನೀವೆಲ್ಲಾ ಸಂತೋಷದಿಂದ ಇರಬೇಕು. ನಿಮ್ಮ ಜೀವನದಲ್ಲಿ ಎಂತಹುದೇ ಅಡ್ಡಿ ಆತಂಕಗಳು ಬಂದರೂ ಸಹ ಅವುಗಳ ವಿರುದ್ದ ಹೋರಾಟ ನಡೆಸಬೇಕು. ಪ್ರೀತಿ ಮಾತ್ರ ನಮ್ಮ ಜೀವನವನ್ನು ಸಂತೋಷದಿಂದ ಬದಲಿಸುತ್ತದೆ. ಪ್ರೀತಿಯಲ್ಲಿ ವಿಶ್ವಾಸ, ಒಳ್ಳೆಯತನ ಸದಾ ಇರಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ವಿಘ್ನೇಶ್ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅಭಮಾನಿಗಳೂ ಸಹ ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸುತ್ತಾ ದೀಪಾವಳಿ ಹಬ್ಬದ ಶುಭಾಷಯಗಳನ್ನು ಸಹ ಕೋರಿದ್ದಾರೆ.

Previous articleಮುಠಾಮೇಸ್ತ್ರಿ ಚಿರಂಜೀವಿಯನ್ನು ನೆನಪಿಸಿದ ವಾಲ್ತೇರು ವೀರಯ್ಯ ಪೋಸ್ಟರ್….!
Next articleಅರೆಬೆತ್ತಲಾಗಿ ದೀಪಾವಳಿಯಂದು ಲಡ್ಡು ತಿನ್ನುತ್ತಾ ಶುಭಾಷಯ ಜೋರಿದ ಉರ್ಫಿ, ರೋಸಿಹೋದ ನೆಟ್ಟಿಗರು…!