Film News

ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಮೂವಿ ರಿಲೀಸ್ ಡೇಟ್ ಫಿಕ್ಸ್!

ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ನಟರೊಲ್ಲಬ್ಬರಾದ ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮೇ.14, 2021 ರಂದು ತೆರೆಮೇಲೆ ಅಬ್ಬರಿಸಲಿದೆ ನಾರಪ್ಪ ಚಿತ್ರ.

ನಟ ವಿಕ್ಟರಿ ವೆಂಕಟೇಶ್ ಟಾಲಿವುಡ್‌ನ ಬಿಗ್ ಪ್ರೊಡ್ಯೂಸರ್ ರಾಮಾನಾಯುಡು ರವರ ಮಗನಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದಾರೆ. ಜೊತೆಗೆ ಯಂಗ್ ಹಿರೋಗಳಂತೆ ತನ್ನ ಸಿನೆಮಾಗಳಲ್ಲಿನ ಪಾತ್ರಗಳನ್ನು ಪೋಷಣೆ ಮಾಡುತ್ತಾರೆ. ಇನ್ನೂ ಇತ್ತೀಚಿಗೆ ಕೆಲವೇ ಸಿನೆಮಾಗಳಲ್ಲಿ ನಟಿಸುತ್ತಿದ್ದು, ಇದೀಗ ಟಾಲಿವುಡ್ ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಸಾರಥ್ಯದಲ್ಲಿ ಮೂಡಿಬರುವ ನಾರಪ್ಪ ಎಂಬ ಸಿನೆಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಇನ್ನೂ ನಾರಪ್ಪ ಚಿತ್ರ ತಮಿಳಿನಲ್ಲಿ ಧನುಷ್ ನಾಯಕನಾಗಿ ನಟಿಸಿದ್ದ ಅಸುರನ್ ಎಂಬ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಪ್ರಿಯಮಣಿ ನಾಯಕಿಯಾಗಿ ನಟಿಸುತ್ತಿದ್ದು, ಸುರೇಶ್ ಪ್ರೊಡಕ್ಷನ್ ಪ್ರೈ.ಲಿ, ಪೈಡಿ ಸುರೇಶ್‌ಬಾಬು, ಕಲೈಪುಲಿ ಎಸ್ ಧಾನು ರವರುಗಳು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವೆಂಕಟೇಶ್ ಪುಲ್ ಪವರ್‌ಪುಲ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ನಟ ವೆಂಕಟೇಶ್ ನಾರಪ್ಪ ಸಿನೆಮಾ ಜೊತೆಗೆ ಎಫ್-3 ಎಂಬ ಸಿನೆಮಾದಲ್ಲೂ ಸಹ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಟಾಲಿವುಡ್ ಪ್ರೊಡ್ಯೂಸರ್ ದಿಲ್ ರಾಜು ಹಾಗೂ ನಿರ್ದೇಶಕ ಅನಿಲ್ ರಾವಿಪೂಡಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಈ ಚಿತ್ರ ಸೆಟ್ಟೇರುತ್ತಿದೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಕೆಲಸಗಳು ಸಹ ನೆರವೇರಿದ್ದು, ಈ ಚಿತ್ರವನ್ನೂ ಸಹ ಆ.27, 2021 ರಂದು ಬಿಡುಗಡೆಯಾಗಲಿದೆಯಂತೆ.

Trending

To Top