Film News

ಹಿರಿಯ ನಟಿ ಜಯಂತಿ ಅವರಿಗೆ ಉಸಿರಾಟದ ತೊಂದರೆ ಇಂದ ಆಸ್ಪತ್ರೆಗೆ ದಾಖಲು

ಕನ್ನಡ ಚಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿಯವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಬೆಂಗಳೂರು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಲವು ದಿನಗಳಿಂದ ಹಿರಿಯ ನಟಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ, ನಿನ್ನೆ ರಾತ್ರಿ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಕೂಡ ಜಯಂತಿಯವರಿಗೆ ಅಸ್ತಮಾ ಸಮಸ್ಯೆ ಹೆಚ್ಚಾಗಿ, ಆಸ್ಪತ್ರೆಗೆ ಸೇರಿಸಲಾಗಿತ್ತು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಹಿರಿಯ ನಟಿ, ಈಗ ಮತ್ತೊಮ್ಮೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಂತಿಯವರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು, ರಿಪೋರ್ಟ್ ನೆಗಟಿವ್ ಬಂದಿದೆ.

ಲಾಕ್ ಡೌನ್ ಸಮಯದಲ್ಲಿ ಹಂಪಿಯಲ್ಲಿ ಲಾಕ್ ಆಗಿದ್ದ ಹಿರಿಯ ನಟಿ, ಬರೊಬ್ಬರಿ ಎರಡು ತಿಂಗಳ ಕಾಲ ಹಂಪಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡು ನಂತರ ಬೆಂಗಳೂರಿಗೆ ಬಂದಿದ್ದರು.

Trending

To Top