News

(video)ಕನ್ನಡ ಸಿನಿಮಾ ನೋಡಲ್ಲ ಅನ್ನೋರಿಗೆ ಕೆಜಿಎಫ್​ ತೋರಿಸಿ! ಖಡಕ್ ಆಗಿ ಮಾತಾಡಿದ ವಶಿಷ್ಠ

KGF111

ಕನ್ನಡದ ಹೆಮ್ಮೆಯ ಚಿತ್ರ KGF ವಿಶ್ವದೆಲ್ಲೆಡೆ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿ ಸಕತ್ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ KGF ಚಿತ್ರ ತಂಡ ಆಂಧ್ರ ಪ್ರದೇಶದಲ್ಲಿ ತನ್ನ ವಿಜಯ ಯಾತ್ರೆ ಶುರು ಮಾಡಿದ್ದರು. ಈ ವಿಜಯ ಯಾತ್ರೆಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. KGF ಚಿತ್ರದಲ್ಲಿ ಕನ್ನಡ ನಟ ವಶಿಷ್ಠ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವಶಿಷ್ಠ ಅವರು KGF ಚಿತ್ರದ ಬಗ್ಗೆ ಮಾತನಾಡುತ್ತ ಕನ್ನಡ ಚಿತ್ರ ನೋಡಲ್ಲ ಅಂದೋರಿಗೆ ಮೊದಲು KGF ತೋರಿಸಿ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ.
KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ.

Trending

To Top