Film News

ಪ್ರವೈಟ್ ಪಾರ್ಟಿಯಲ್ಲಿ ಕಾಣಿಸಿಕೊಂಡ ವರುಣ್ ಅಂಡ್ ಲಾವಣ್ಯ, ಡೇಟಿಂಗ್ ನಲ್ಲಿದ್ದಾರೆಯೇ?

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ರವರ ಡೇಟಿಂಗ್ ಬಗ್ಗೆ ರೂಮರ್‍ ಹುಟ್ಟಿಕೊಂಡಿದೆ. ಪಾರ್ಟಿ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಇವರಿಬ್ಬರು ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಸುಮಾರು ವರ್ಷಗಳಿಂದಲೂ ಈ ಜೋಡಿ ಪ್ರೇಮ ಪಯಣ  ಸಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಲಾವಣ್ಯ ರವರನ್ನು ಭೇಟಿಯಾಗಲು ಹೋಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಸಹ ಹೊರಬರಲಿದೆ ಎಂಬ ಮಾತುಗಳು ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ.

ಸಿನಿರಂಗದಲ್ಲಿ ಇಂತಹ ರೂಮರ್‍ ಗಳು ಬೇಜಾನ್ ಸುದ್ದಿಯಾಗುತ್ತಿರುತ್ತದೆ. ಮದುವೆ, ಬ್ರೇಕ್ ಅಪ್, ಮರು ಮದುವೆ ಈ ವಿಚಾರಗಳು ಸಿನಿರಂಗದಲ್ಲಿ ಸಾಮಾನ್ಯವಾಗಿರುತ್ತದೆ. ಇದೀಗ ಟಾಲಿವುಡ್ ನ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ರವರ ಬಗ್ಗೆ ರೂಮರ್‍ ಗಳು ಹುಟ್ಟಿಕೊಂಡಿದೆ. ಇತ್ತೀಚಿಗೆ ಲಾವಣ್ಯ ಹಾಗೂ ವರುಣ್ ತೇಜ್ ಖಾಸಗಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ವರುಣ್ ಹಾಗೂ ಲಾವಣ್ಯ ಇಬ್ಬರಿಗೂ ಕಾಮನ್ ಫ್ರೆಂಡ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವರುಣ್, ಲಾವಣ್ಯ, ಸಾಯಿ ಧರಮ್ ತೇಜ್, ನಿತಿನ್ ಹೆಂಡತಿ ಷಾಲಿನಿ ಸಹ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಲಾವಣ್ಯ ಹಾಗೂ ವರುಣ್ ತೇಜ್ ರವರ ರೂಮರ್‍ ಗಳ ಬಗ್ಗೆ ಲಾವಣ್ಯ ಅಲ್ಲಗೆಳೆದಿದ್ದು, ಇದೆಲ್ಲಾ ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದಾರೆ.

ಲಾವಣ್ಯ ಹಾಗೂ ವರುಣ್ ಈ ಹಿಂದೆ ಮಿಸ್ಟರ್‍, ಅಂತರಿಕ್ಷಂ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳ ಶೂಟಿಂಗ್ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಕೆಲವು ವರ್ಷಗಳ ಹಿಂದೆ ನಡೆದ ವರುಣ್ ತಂಗಿ ನಿಹಾರಿಕಾ ಮದುವೆಯಲ್ಲೂ ಲಾವಣ್ಯ ಕಾಣಿಸಿಕೊಂಡಿದ್ದರು. ರಾಜಾಸ್ಥಾನದಲ್ಲಿ ನಿಹಾರಿಕಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಜೊತೆಗೆ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಾಗಿದ್ದರು. ಸಿನಿರಂಗದ ಅನೇಕ ಪ್ರಮುಖರಿಗೆ ಈ ಮದುವೆ ಸಮಾರಂಭದಲ್ಲಿ ಆಹ್ವಾನ ಇಲ್ಲದೇ ಇದ್ದರೂ ಲಾವಣ್ಯ ಹಾಜರಾಗಿದ್ದು ವರುಣ್ ಲಾವಣ್ಯ ಲವ್ ರೂಮರ್‍ ಗೆ ಮತಷ್ಟು ಬಲ ತಂದಿತ್ತು. ಇದೀಗ ಮತ್ತೊಮ್ಮೆ ಅವರ ಡೇಟಿಂಗ್ ಬಗ್ಗೆ ರೂಮರ್‍ ಗಳು ಹರಿದಾಡುತ್ತಿದ್ದು, ಇದನ್ನು ಲಾವಣ್ಯ ತಳ್ಳಿಹಾಕಿದ್ದಾರೆ.

ಸದ್ಯ ಲಾವಣ್ಯ ಸಿನಿರಂಗದಲ್ಲಿ ಸಾಲು ಸಾಲು ಪ್ಲಾಪ್ ಗಳನ್ನು ಕಾಣುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಹ್ಯಾಪಿ ಬರ್ತ್ ಡೇ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇನ್ನೂ ವರುಣ್ ತೇಜ್ ಸಹ ಸಾಲು ಸಾಲು ಪ್ಲಾಪ್ ಗಳನ್ನು ಕಾಣುತ್ತಿದ್ದಾರೆ. ಬಹುನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಗನಿ ಸಿನೆಮಾ ಸಹ ದೊಡ್ಡ ಸೋಲನ್ನು ಕಂಡಿತು. ಜೊತೆಗೆ ಎಫ್-3 ಸಿನೆಮಾ ಹಿಟ್ ಆದರೂ ಕಲೆಕ್ಷನ್ ನಲ್ಲಿ ವೀಕ್ ಆಗಿತ್ತು. ಮತ್ತೊಂದು ಸಿನೆಮಾದಲ್ಲಿ ವರುಣ್ ಬ್ಯುಸಿಯಾಗಿದ್ದು, ಈ ಸಿನೆಮಾವನ್ನು ನಿರ್ದೇಶಕ ಪ್ರವೀಣ್ ಸತ್ತಾರ್‍ ನಿದೇಶಿಸುತ್ತಿದ್ದಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಕೀರ್ತಿ ಸುರೇಶ್, ಅವಕಾಶ ಸಿಗದಿದ್ದರೇ ಕೆಲಸ ಮಾಡಿಕೊಳ್ಳುತ್ತೇನೆ ಎಂದ ನಟಿ….!

ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರಾಗಿದ್ದಾರೆ. ಮಹಾನಟಿ ಎಂಬ ಸಿನೆಮಾಗಾಗಿ ಆಕೆ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಮಲಯಾಳಂ…

1 hour ago

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ತೆಲುಗು ನಟಿ ಅನಸೂಯ…!

ಕೆಜಿಎಫ್ ಸಿನೆಮಾದ ಬಳಿಕ ಇಡೀ ದೇಶದಾದ್ಯಂತ ಅನೇಕರ ಮೆಚ್ಚುಗೆಗೆ ಪಾತ್ರವಾದ ಸಿನೆಮಾ ಕಾಂತಾರ ಎಂದೇ ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕ…

2 hours ago

ಮತ್ತೊಮ್ಮೆ ಮದುವೆ ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ…!

ಸೌತ್ ನಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಸದಾ ಗ್ಲಾಮರ್‍ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸೋಷಿಯಲ್…

3 hours ago

ವಿಜಯ್ ದೇವರಕೊಂಡ ತಾಯಿಯೊಂದಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್, ವೈರಲ್ ಆದ ಪೊಟೋ…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿಯರಲ್ಲಿ ಜಾನ್ವಿ ಕಪೂರ್‍ ಸಹ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನಟಿ ಜಾನ್ವಿಗೆ…

6 hours ago

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

18 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

19 hours ago