ಮುಂಬೈ: ಬಾಲಿವುಡ್ ನ ಸ್ಟಾರ್ ನಟ ವರುಣ್ ಧವನ್ ತಮ್ಮ ಬಹುಕಾಲದ ಗೆಳಗಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದವಾಗಿದ್ದು, ಇದೇ ಜನವರಿ 24 ರಂದು ಇವರಿಬ್ಬರ ಮದುವೆ ನಡೆಯಲಿದೆ ಎನ್ನಲಾಗಿದೆ.
ಸುಮಾರು ವರ್ಷಗಳಿಂದ ವರುಣ್ ಧವನ್ ಮದುವೆ ವಿಚಾರ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿತ್ತು. ಇದೀಗ ವರುಣ್ ಧವನ್ ಮದುವೆ ಡೇಟ್ ಫಿಕ್ಸ್ ಆಗಿದ್ದು, 2021 ರ ಪ್ರಾರಂಭದಲ್ಲಿ ಮದುವೆ ನಡೆಯುತ್ತಿರುವುದು ಬಾಲಿವುಡ್ ಹಾಗೂ ಅಭಿಮಾನಿಗಳಿಗೆ ಶುಭ ಸುದ್ದಿಯಾಗಿದೆ. ಕೆಲವೊಂದು ಮೂಲಗಳ ಪ್ರಕಾರ ವರುಣ್ ಧವನ್ ನತಾಶಾ ದಲಾಲ್ ಜ.24 ರಂದು ಮದುವೆ ನಡೆಯಲಿದ್ದು, 5 ದಿನಗಳ ಕಾಲ ಮದುವೆ ಸಂಭ್ರಮ ನಡೆಯಲಿದೆಯಂತೆ. ಜೊತೆಗೆ ಈ ಮದುವೆಗೆ ಇಬ್ಬರ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.
ಇನ್ನೂ ವರುಣ್-ನತಾಶಾ ಮದುವೆ ನಡೆಯಲಿರುವುದು ಮುಂಬೈನಿಂದ ಸುಮಾರು 90 ಕಿ.ಮೀ ದೂರವಿರುವ ಆಲಿಗಡ್ ಎಂಬ ಪ್ರದೇಶದಲ್ಲಿ. ಜ.22 ಮದುವೆ ಸಂಭ್ರಮ ಪ್ರಾರಂಭವಾಗಿ ೫ ದಿನಗಳ ಕಾಲ ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರದೊಂದಿಗೆ ಪಂಜಾಬಿ ಸಂಪ್ರದಾಯಗಳೊಂದಿಗೆ ವರುಣ್ ಹಾಗೂ ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಅಷ್ಟೇ ಅಲ್ಲದೇ ಈಗಾಗಲೇ ಈ ಜೋಡಿ ಮದುವೆ ತಯಾರಿಯಲ್ಲಿ ಬ್ಯುಸಿಯಿದ್ದು, ವರುಣ್ ಹಾಗೂ ನತಾಶಾ ದಲಾಲ್ ಮದುವೆಯಲ್ಲಿ ಯಾರೆಲ್ಲಾ ಬಾಲಿವುಡ್ ಸ್ಟಾರ್ ಗಳು ಭಾಗಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
