Film News

ಅದ್ದೂರಿಯಾಗಿ ನಡೆದ ಬಾಲಿವುಡ್ ಲವ್ ಕಪಲ್ ಮದುವೆ!

ಮುಂಬೈ: ಬಾಲಿವುಡ್ ನ ಖ್ಯಾತ ಲವ್ ಬರ್ಡ್ಸ್ ಎಂದೇ ಬಾಲಿವುಡ್ ವರುಣ್ ಧವನ್ ಹಾಗೂ ನತಾಶಾ ದಲಾಲ್ ರವರ ಮದುವೆ ಮಹಾರಾಷ್ಟ್ರದ ಅಲಿಬಾಗ್ ನ ಐಷಾರಾಮಿ ಹೊಟೆಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ.

ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ಹಾಗೂ ಗೆಳತಿ ನತಾಶಾ ದಲಾಲ್ ತುಂಬಾ ದಿನಗಳಿಂದ ಲವ್‌ನಲ್ಲಿದ್ದು, ಇದೀಗ ಹಸೆಮಣೆ ಏರಿದ್ದಾರೆ. ಮಹಾರಾಷ್ಟ್ರದ ಅಲಿಭಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ದಿ ಮ್ಯಾನ್ಷನ್ ಹೌಸ್ ನಲ್ಲಿ ನೆರವೇರಿದ್ದು, ಕೇವಲ ೨೦೦ ಮಂದಿ ಮಾತ್ರ ಮದುವೆಯಲ್ಲಿ ಹಾಜರಾಗಿದ್ದರು. ಕುಟುಂಬದವರ ಜೊತೆಗೆ ತೀರ ಆಪ್ತರ ಸಮ್ಮುಖದಲ್ಲಿ ವರುಣ್-ನತಾಶಾ ದಂಪತಿಗೆ ಶುಭ ಹಾರೈಸಿದ್ದಾರೆ.

ಇನ್ನೂ ಬಣ್ಣದ ಉಡುಪಿನಲ್ಲಿ ಮಿಂಚಿದ ನವ ಜೋಡಿ ಮೂರು ದಿನಗಳ ಹಿಂದೆಯೇ ಮದುವೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇನ್ನೂ ವರುಣ್ ನೀಲಿ ಮತ್ತು ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದು, ನತಾಶಾ ಬಿಳಿ ಬಣ್ಣದ ಎಂಬ್ರಾಯಿಡರಿ ಲೆಹಾಂಗದಲ್ಲಿ ಮಿಂಚುತ್ತಿದ್ದರು. ಕಳೆದ ಎರಡು ದಿನಗಳಿಂದ ಇವರಿಬ್ಬರ ಮದುವೆ ಸಂಭ್ರಮ ಅದ್ದೂರಿಯಾಗಿ ನಡೆದಿದ್ದು, ಮದುವೆ ಶಾಸ್ತ್ರಗಳು ಹಿಂದೂ ಸಂಪ್ರದಾಯದಂತೆ ನಡೆದವು.

ಇನ್ನೂ ಇವರಿಬ್ಬರ ಮದುವೆ ಪೊಟೋಗಳಾಗಲಿ ಅಥವಾ ವಿಡಿಯೋಗಳಾಗಲಿ ಎಲ್ಲೂ ಲೀಕ್ ಆಗದಂತೆ ನೋಡಿಕೊಂಡಿದ್ದರು. ಭಾನುವಾರ ದಂಪತಿ ಕ್ಯಾಮೆರಾ ಮುಂಭಾಗ ಪೋಸ್ ಕೊಟ್ಟಿದ್ದರು. ಜೊತೆಗೆ ವರುಣ್ ಮದುವೆ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ನಮ್ಮ ಪ್ರೀತಿ ಜೀವನ ಪರ್ಯಂತ ಅಧಿಕೃತವಾಯಿತು ಎಂದು ಟೈಟಲ್ ಸಹ ಹಾಕಿದ್ದಾರೆ.

ಇನ್ನೂ ವರುಣ್ ಹಾಗೂ ನತಾಶಾ ದಂಪತಿಗೆ ಬಾಲಿವುಡ್ ಸ್ಟಾರ್‌ಗಳಾದ ಪರಿಣಿತಿ ಚೋಪ್ರಾ, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ಕರಿಶ್ಮಾ ಕಪೂರ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಪ್ರೀತಿಯ ಶುಭಾಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೋರುತ್ತಿದ್ದಾರೆ.

Trending

To Top