ಹೈದರಾಬಾದ್: ತೆಲುಗು ಸಿನಿರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಚಿತ್ರದ ಎರಡನೇ ಸಾಂಗ್ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗುತ್ತಿದೆ. ವಕೀಲ್ ಸಾಭ್ ಚಿತ್ರದ ಸತ್ಯಮೇವ ಜಯತೆ ಎಂಬ ಸಾಂಗ್ ಯೂಟೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಕಳೆದ ವರ್ಷದ ಮಹಿಳಾ ದಿನಾಚರಣೆಯ ದಿನದಂದು ವಕೀಲ್ ಸಾಬ್ ಚಿತ್ರದ ಮಗುವ ಮಗುವ ಎಂಬ ಗೀತೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸೂಪರ್ ಹಿಟ್ ಆಯಿತು. ಇನ್ನೂ ವಕೀಲ್ ಸಾಭ್ ಚಿತ್ರದ ಮೇಲಿನ ಕ್ರೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಚಿತ್ರದ ಎರಡನೇ ಗೀತೆಯನ್ನು ಸಹ ಬಿಡುಗಡೆ ಮಾಡುವುದಾಗಿ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಪೋಸ್ಟ್ ಸಹ ಮಾಡಿದ್ದರು. ಅದರಂತೆ ಇದೀಗ ವಕೀಲ್ ಸಾಭ್ ಚಿತ್ರದ ಸತ್ಯಮೇವ ಜಯತೆ ಎಂಬ ಎರಡನೇ ಗೀತೆ ಬಿಡುಗಡೆಯಾಗಿದ್ದು, ಯೂಟೂಬ್ನಲ್ಲಿ ಟ್ರೆಂಡಿಂಗ್ ಆಗಿದೆ.
ವಕೀಲ್ ಸಾಭ್ ಚಿತ್ರದ ಒಂದೊಂದು ಗೀತೆಯನ್ನು ಹಂತ ಹಂತವಾಗಿ ಮಾರ್ಚ್ ಮಾಹೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿತ್ತು. ಜೊತೆಗೆ ಈ ಕುರಿತು ಪಕ್ಕಾ ಪ್ಲಾನ್ ಸಹ ಹಾಕಿಕೊಂಡಿರುವುದಾಗಿ ಸಹ ಚಿತ್ರತಂಡ ತಿಳಿಸಿತ್ತು. ಅದರಂತೆ ಸತ್ಯಮೇವ ಜಯತೆ ಸಾಂಗ್ ರಿಲೀಸ್ ಆಗಿದೆ.
ಇನ್ನೂ ಈ ಗೀತೆಯನ್ನು ಲೇಖಕ ರಾಮಜೋಗಯ್ಯ ಶಾಸ್ತ್ರಿ ರಚನೆ ಮಾಡಿದ್ದಾರೆ. ಇಷ್ಟ, ಗೌರವಗಳೊಂದಿಗೆ ಈ ಚಿತ್ರವನ್ನು ಬರೆದಿರುವುದಾಗಿಯೂ ಸಹ ರಾಮಜೋಗಯ್ಯ ಶಾಸ್ತ್ರಿ ತಿಳಿಸಿದ್ದಾರೆ. ಜೊತೆಗೆ ಸಂಗೀತ ನಿರ್ದೆಶಕ ತಮನ್ ಕೆಲವು ವರ್ಷಗಳ ಕಾಲ ಈ ಹಾಡು ನಿಮ್ಮನ್ನು ಬಿಟ್ಟು ಹೋಗಲ್ಲ ಎಂದು ಹೇಳಿದ್ದರು. ಅಂದಹಾಗೆ ವಕೀಲ್ ಸಾಬ್ ಚಿತ್ರ ಏಪ್ರಿಲ್ 9 ರಂದು ತೆರೆಗೆ ಬರಲಿದೆ.
