Film News

ಮಾರ್ಚ್ ಮಾಹೆಯಲ್ಲಿ ವಕೀಲ್ ಸಾಭ್ ಆಡಿಯೋ ರಿಲೀಸ್!

ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಇದೀಗ ಚಿತ್ರತಂಡದಿಂದ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ. ಮಾರ್ಚ್ ಮಾಹೆಯಲ್ಲಿ ವಕೀಲ್ ಸಾಭ್ ಚಿತ್ರದ ಸಾಂಗ್ಸ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವಕೀಲ್ ಸಾಭ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿರುವ ತಮನ್, ರಾಮ್‌ ಜೋಗಯ್ಯ, ದಿಲ್‌ ರಾಜು ಸೇರಿದಂತೆ ಹಲವರು ಪ್ಲಾನ್ ಮಾಡಿದ್ದು, ಇದನ್ನು ತಮನ್ ಪೋಸ್ಸ್ ಒಂದನ್ನು ಸಹ ಮಾಡಿದ್ದಾರೆ. ಅದರಂತೆ ಮಾರ್ಚ್ ಮಾಹೆಯಲ್ಲಿ ವಕೀಲ್ ಸಾಭ್ ಚಿತ್ರದ ಆಡಿಯೋ ಲಾಂಚ್ ಕುರಿತು ಅಪ್ಡೇಟ್ ನೀಡುವುದಾಗಿ ತಿಳಿಸಿದ್ದು, ಮಾರ್ಚ್ ಮಾಹೆಯಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಪವನ್ ಕಲ್ಯಾಣ್ ಸಿನೆಮಾ ಅಂದರೇ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸುಮಾರು ಮೂರ್‍ನಾಲ್ಕು ವರ್ಷಗಳಿಂದ ಪವನ್ ಸಿನೆಮಾಗಳು ಯಾವುದು ತೆರೆಗೆ ಬಂದಿಲ್ಲ. ಇದೀಗ ವಕೀಲ್ ಸಾಬ್ ಮೂಲಕ ತೆರೆ ಮೇಲೆ ಬರಲಿದ್ದಾರೆ. ಕೊರೋನಾ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ತಡವಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ನಿರತವಾಗಿದೆ.

ಅಷ್ಟೇ ಅಲ್ಲದೇ ಈಗಾಗಲೇ ವಕೀಲ್ ಸಾಭ್ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಿದ್ದು, ಏಪ್ರಿಲ್ 9 ರಂದು ಚಿತ್ರ ಅದ್ದೂರಿಯಾಗಿ ತೆರೆಗೆ ಬರಲಿದೆ. ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ಟೀಸರ್ ಸಹ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಡೈಲಾಗ್‌ ಗಳು ಹೈಪ್ ಹೆಚ್ಚಿಸುತ್ತಿವೆ. ವಕೀಲ್ ಸಾಭ್ ರಿಲೀಸ್ ಆದ ನಂತರ ಬಾಕ್ಸ್ ಆಫೀಸ್ ಉಡೀಸ್ ಮಾಡಲಿದೆ ಎನ್ನಲಾಗುತ್ತಿದೆ.

Trending

To Top