ಬಿಡುಗಡೆಯಾಯ್ತು ವಕೀಲ್ ಸಾಭ್ ಟೀಸರ್: ವೈರಲ್

ಹೈದರಾಬಾದ್: ಟಾಲಿವುಡ್ ಸ್ಟಾರ್ ಜನಸೇನ ಪಕ್ಷದ ಮುಖ್ಯಸ್ಥ ನಟ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಟೀಸರ್ ಬಿಡುಗಡೆಯಾಗಿದ್ದು, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ನಿಜವಾದ ಸಂಕ್ರಾಂತಿ ಹಬ್ಬ ಬಂದಿರುವ ಹಾಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮದ ಜೊತೆಗೆ ವಕೀಲ್ ಸಾಭ್ ಟೀಸರ್ ಬಿಡುಗಡೆ ನಿಜವಾಗಿ ಪವನ್ ಅಭಿಮಾನಿಗಳಿಗೆ ಹಬ್ಬವನ್ನು ಮತಷ್ಟು ಮೆರುಗು ಗೊಳಿಸಿದೆ ಎನ್ನಲಾಗುತ್ತಿದೆ. ಇನ್ನೂ ವಕೀಲ್ ಸಾಬ್ ಟೀಸರ್ ರೆಕಾರ್ಡ್ ಮೇಲೆ ಚರ್ಚೆಗಳು ಶುರವಾಗಿದೆ. ಭಾರಿ ನಿರೀಕ್ಷೆಗಳನ್ನಿಟ್ಟುಕೊಂಡಿರುವ ವಕೀಲ್ ಸಾಬ್ ಚಿತ್ರ ಪವನ್ ಕಲ್ಯಾಣ್ ರವರ ಮೂರು ನಾಲ್ಕು ವರ್ಷಗಳ ನಂತರ ಬರುತ್ತಿರುವ ಚಿತ್ರ ಇದಾಗಿದೆ. ಇನ್ನೂ ಈ ಚಿತ್ರದ ಪೋಸ್ಟರ್ ಹಾಗೂ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ವೈರಲ್ ಸಹ ಆಗಿದೆ.

ಇತ್ತೀಚಿಗಷ್ಟೆ ವಕೀಲ್ ಸಾಭ್ ಶೂಟಿಂಗ್ ಮುಕ್ತಾಯಗೊಂಡಿದ್ದು, ಈ ವಿಚಾರವನ್ನು ಚಿತ್ರದ ನಿರ್ಮಾಪಕರಾದ ದಿಲ್ ರಾಜು ಹಾಗೂ ಬೋನಿ ಕಪೂರ್ ಟ್ವೀಟ್ ಮೂಲಕ ಸಂತಂಸ ಹಂಚಿಕೊಂಡಿದ್ದರು. ಟಾಲಿವುಡ್ ನಲ್ಲಿ ಸಂಕ್ರಾಂತಿ ಹಬ್ಬದಂದೇ ಅನೇಕ ಚಿತ್ರಗಳು, ಟೀಸರ್ ಗಳು, ಪೋಸ್ಟರ್ ಗಳು, ಟ್ರೈಲರ್‌ಗಳು ಇಂತಹ ಅಪ್ಡೇಟ್ ಗಳನ್ನು ನೀಡುವ ಮೂಲಕ ಹಲ್ ಚಲ್ ಎಬ್ಬಿಸುತ್ತಾರೆ. ಇದರ ಹಾದಿಯಲ್ಲೇ ವಕೀಲ್ ಸಾಭ್ ಟೀಸರ್ ಬಿಡುಗಡೆ ಮಾಡಿದ್ದು, ಸಂಕ್ರಾಂತಿ ಸಂಭ್ರಮ ಮತಷ್ಟು ಮೆರಗು ಪಡೆದುಕೊಂಡಿದೆ.

ಟೀಸರ್ ವಿಷಯಕ್ಕೆ ಬಂದರೇ, ವಕೀಲ್ ಸಾಭ್ ಟೀಸರ್ ನಲ್ಲಿ ಪವನ್ ಕಲ್ಯಾಣ್ ರನ್ನು ಇನಷ್ಟು ಸ್ಪೆಷಲ್ ಆಗಿ ತೋರಿಸಿದ್ದಾರೆ. ಮಾಸ್ ಅಭಿಮಾನಿಗಳಿಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ಟೀಸರ್ ನಲ್ಲಿ ತೋರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳನ್ನು ಸಹ ವಿಶೇಷವಾಗಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಟೀಸರ್ ನಲ್ಲಿ ಬಹಿರಂಗವಾದ ಕೋರ್ಟ್‌ಲೋ ವಾದಿಚಡಂ ತೆಲುಸು.. ಕೋಟ್ ತೀಸಿ ಕೊಟ್ಟಡಂ ಕೂಡ ತೆಲುಗು ಅನ್ನುವ ಡೈಲಾಗ್ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.

Previous articleಸಂಕ್ರಾಂತಿ ಶುಭಾಷಯಗಳನ್ನು ಕನ್ನಡದಲ್ಲಿ ತಿಳಿಸಿ ಮನಗೆದ್ದ ನಟಿ
Next articleನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದಂದು ರೈಡರ್ ಟ್ರೈಲರ್!