Kannada Reality Shows

ಡ್ರಾಮಾ ಜೂನಿಯರ್ಸ್ ಪುಟಾಣಿ ಮಹತಿ ವೈಷ್ಣವಿ ಭಟ್ ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ!

ಡ್ರಾಮಾ ಜೂನಿಯರ್ಸ್ ಕನ್ನಡದಲ್ಲಿ ಬಹಳ ಫೇಮಸ್ ಆದ ಮಕ್ಕಳ ರಿಯಾಲಿಟಿ ಶೋಗಳಲ್ಲಿ ಒಂದು! 2016 ರಲ್ಲಿ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಝೀ ಕನ್ನಡ ದಲ್ಲಿ ಪ್ರಸಾರವಾಗಿತ್ತು. TRP ವಿಷ್ಯದಲ್ಲಿ ಅತೀ ಹೆಚ್ಚಿನ TRP ಯನ್ನು ಪಡೆದು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಷೋ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿತ್ತು. ಡ್ರಾಮಾ ಜೂನಿಯರ್ಸ್ ಶೋನಲ್ಲಿ ಸಕತ್ ಫೇಮಸ್ ಆದ ಸ್ಪರ್ದಿಗಳೆಂದರೆ, ಅದು ಅಚಿಂತ್ಯ, ವೈಷ್ಣವಿ ಭಟ್, ಪುಟ್ಟರಾಜು ಹೂಗಾರ್, ಚಿತ್ರಾಲಿ ಅವರು. ಇವರ ಅದ್ಭುತ ನಟನೆಯಿಂದ, ಪರ್ಫಾರ್ಮೆನ್ಸ್ ಇಂದ ಕರ್ನಾಟಕದ ಮನೆ ಮಾತಾಗಿದ್ದರು. ಹಾಗಾದ್ರೆ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟಾಣಿ ವೈಷ್ಣವಿ ಭಟ್ ಈಗ ಎಲ್ಲಿದ್ದಾರೆ, ಏನ್ ಮಾಡ್ತಾ ಇದ್ದಾರೆ! ಈ ಸುದ್ದಿ ಪೂರ್ತಿ ಓದಿರಿ

ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಷೋ ಸುಮಾರು ಮೂರು ವರ್ಷಗಳ ಕಾಲ ನಡೆಯಿತು. ನಂತರ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಎಲ್ಲೂ ಕಾಣಿಸಿಕೊಳ್ಳದೆ, ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದಾರೆ. ಅದಾದಮೇಲೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರಿಗೆ ಕಳೆದ ವರ್ಷ ಗಟ್ಟಿಮೇಳ ಎಂಬ ಧಾರಾವಾಹಿಗೆ ಆಫರ್ ಬಂದಿದೆ. ಖ್ಯಾತ ನಟರು ಇರುವ ಧಾರಾವಾಹಿ ಆದರಿಂದ ಪುಟಾಣಿ ಮಹತಿ ವೈಷ್ಣವಿ ಭಟ್ ಹಾಗು ಅವರ ಕುಟುಂಬದವರು ಇದನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಅಂಜು ಎಂಬ ಪಾತ್ರವನ್ನು ಮಾಡುತ್ತಿದ್ದು, ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ! ಗಟ್ಟಿಮೇಳ ಧಾರಾವಾಹಿಯಲ್ಲಿ ಪುಟಾಣಿ ಮಹತಿ ವೈಷ್ಣವಿ ಭಟ್ ಅವರ ಫೋಟೋಗಳನ್ನು ಇಲ್ಲಿ ನೋಡಬಹುದು

ಗಟ್ಟಿಮೇಳ ಧಾರಾವಾಹಿಯ ಜೊತೆಗೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಝೀ ಕನ್ನಡದಲ್ಲಿ ಪ್ರಸಾರವಾಗುವ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಸಿನಿಮಾಗಳಲ್ಲಿ ಹಾಗು ಬೇರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ! ಸದ್ಯ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಇವೆಲ್ಲದರ ನಡುವೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಒಬ್ಬ ಒಳ್ಳೆಯ ಹಾಡುಗಾರ್ತಿ ಕೂಡ! ತಮ್ಮ ಹಾಡುಗಳನ್ನು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿ ಕೊಂಡಿದ್ದಾರೆ!

ಪುಟಾಣಿ ಮಹತಿ ವೈಷ್ಣವಿ ಭಟ್ ಸದ್ಯ ತನ್ನ ವಿದ್ಯಾಭ್ಯಾಸದ ಜೊತೆಗೆ ಧಾರಾವಾಹಿಯಲ್ಲಿ ಕೂಡ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ! ಇನ್ನೂ ಹೆಚ್ಚಿನ ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಇವರು ಕಾಣಿಸಿಕೊಳ್ಳಲಿ ಎಂದು ನಮ್ಮ ಅನಿಸಿಕೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಶೇರ್ ಮಾಡಿ, ಲೈಕ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಕನ್ನಡದ ಎಲ್ಲಾ ಟ್ರೆಂ’ಡಿoಗ್ ವಿಡಿಯೋಗಳಿಗಾಗಿ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ!

Trending

To Top