health-Kannada

Health Tips: ಸಬ್ಬಸಿಗೆ ಸೊಪ್ಪಿನ ಉತ್ತಮ ಉಪಯೋಗಗಳು…

ಸಬ್ಬಸಿಗೆ ಸೊಪ್ಪಿನ ಉಪಯೋಗಗಳು …

ಸಬ್ಬಸಿಗೆ ಸೊಪ್ಪು ರುಚಿಗೂ ಸವಿ ಆರೋಗ್ಯಕ್ಕೂ ಸರಿ
ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು,ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ c ಜೀವಸತ್ವವನ್ನೊಳಗೊಂಡಿದೆ.

ಸಬ್ಬಸಿಗೆ ಸೊಪ್ಪಿನ ಕೆಲವೊಂದು
ಔಷದೀಯ ಗುಣಗಳು ಹಾಗೂ ಪಾಕ ವಿಧಾನಗಳು ಇಲ್ಲಿವೆ.

1.ಸಬ್ಬಸಿಗೆ  ಸೊಪ್ಪನ್ನು  ಒಣಗಿಸಿ ಚಟ್ನಿಪುಡಿ ತಯಾರಿಸಿ
ಸೇವಿಸುವದರಿಂದ ಜೀರ್ಣಶಕ್ತಿ ಸುಧಾರಿಸುತ್ತದೆ.

2 .ಸಬ್ಬಸಿಗೆ ಸೊಪ್ಪನ್ನು ಅರೆದು ಮೊಸರಿನಲ್ಲಿ ಬೆರೆಸಿ
ಸೇವಿಸುವದರಿಂದ ಮಲಬದ್ದತೆ ಕಾಡದು.

3. ಸಬ್ಬಸಿಗೆ ಸೊಪ್ಪನ್ನು ನಿಯಮಿತವಾಗಿ ದಾಲ್ ಮತ್ತು
ಸಾಂಬಾರನಲ್ಲಿ ಉಪಯೋಗಿಸುವದರಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

4. ಸಬ್ಬಸಿಗೆ ಬೀಜಗಳನ್ನು ಅಗೆಯುವದರಿಂದ ಬಾಯಿಯ ದುರ್ಗಂಧ ಕದಿಮೆಯಾಗುತ್ತದೆ.

5. ಬಾಣಂತಿಯರು ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ,ಚಿಟಿಕೆ ಉಪ್ಪು, ಕಾಲು ಚಮಚ ಮೆಣಸಿನ ಪುಡಿಯೊಂದಿಗೆ, ಸೇವಿಸಿದರೆ, ಶೀತದ ಭಾದೆ ಇರದು.

6.ಸಬ್ಬಸಿಗೆ ಸೊಪ್ಪನ್ನು ಅರೆದು, ಸಾಸಿವೆ ಎಣ್ಣೆಯೊಂದಿಗೆ
ಕುದಿಸಿ, ಲೇಪಿಸಿದರೆ, ಕೀಲುನೋವು ವಾಸಿಯಾಗುತ್ತದೆ.

7.ಸಬ್ಬಸಿಗೆ ಸೊಪ್ಪನ್ನು ಅರೆದು, ಅರಿಷನದೊಂದಿಗೆ ಬೆರೆಸಿ ಲೇಪಿಸುವದರಿಂದ ಗಾಯ ವಾಸಿಯಾಗುತ್ತದೆ.

8.ಸಬ್ಬಸಿಗೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವದರಿಂದ ನಿದ್ರಾಹೀನತೆ ದೂರವಾಗುತ್ತದೆ.

9. ಮಹಿಳೆಯರನ್ನು ಕಾಡುವ ಮಾಸಿಕ ಧರ್ಮದ ನೋವಿಗೆ, ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ, ಸ್ವಲ್ಪ ಉಪ್ಪಿನೊಂದಿಗೆ  ಸೇವಿಸಬೇಕು.

10. ಸಬ್ಬಸಿಗೆ ಸೊಪ್ಪನ್ನು ಅರೆದು, ಅರಿಷಿಣ, ಉಪ್ಪು ಹಾಗೂ ಸ್ವಲ್ಪ ತುಪ್ಪದೊಂದಿಗೆ ಕಲೆಸಿ ಲೇಪಿಸಿದರೆ, ಕೀಟಗಳ ಕಡಿತದಿಂದುಂಟಾಗುವ ಗಾಯಗಳು ವಾಸಿಯಾಗುತ್ತವೆ.

11.ನರ ದೌರ್ಬಲ್ಯ ಸಮಸ್ಯೆ
ಕಾಡುವುದುಂಟು:

ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಬ್ಬಸಿಗೆ ಸೊಪ್ಪು ತುಂಬಾನೇ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ನರಗಳಿಗೆ ಶಕ್ತಿಯನ್ನು ನೀಡುತ್ತದೆ, ನಿಮ್ಮ ದೈನಂದಿನ ಅಡುಗೆಯಲ್ಲಿ ಈ ಸೊಪ್ಪನ್ನು ಬಳಸಿ ಉತ್ತಮ ಆರೋಗ್ಯವನ್ನು ಪಡೆದು ಕೊಳ್ಳಿ.

12.ಇತ್ತೀಚಿಗೆ ಒತ್ತಡದ ಸಮಸ್ಯೆ ಎಲ್ಲರಲ್ಲೂ ಕೂಡ ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ಸರಿಯಾದ ನಿದ್ರೆ ಬರುವುದಿಲ್ಲ. ಇದಕ್ಕೆ ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿದರೆ ನಿದ್ರೆಯ ಸಮಸ್ಯೆ ಕಾಡುವುದಿಲ್ಲ.

13.ಅಷ್ಟೇ ಅಲ್ಲದೆ ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

14.ಕೆಲವು ಕಾರಣಗಳಿಂದ ದೇಹದಲ್ಲಿ ಏರುಪೇರಾಗಿ ಅಲರ್ಜಿ ಸಮಸ್ಯೆ ಬರುತ್ತದೆ. ಇದಕ್ಕೆ ಸಬ್ಬಸಿಗೆ ಸೊಪ್ಪುನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು.

15.ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದರೆ, ಸಬ್ಬಸಿಗೆ ಸೊಪ್ಪಿನ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುತ್ತದೆಯಂತೆ.

16.ಸರಿಯಾದ ಸಮಯಕ್ಕೆ ಜೀರ್ಣವಾಗದೇ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ, ಸಬ್ಬಸಿಗೆ ಸೊಪ್ಪಿನರಸಕ್ಕೆ ಜೇನು ಬೇರಸಿ ಕುಡಿದರೆ ಅಜೀರ್ಣ, ಕಡಿಮೆಯಾಗುತ್ತದೆ. ಹೊಟ್ಟೆನೋವು ಕಡಿಮೆಯಾಗುತ್ತದೆ.

Trending

To Top