15 ನೇ ವಯಸ್ಸಿನಲ್ಲಾದ ಕರಾಳ ಅನುಭವ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್ !

ಬಾಲಿವುಡ್ ನಟಿ ಉರ್ಫಿ ಜಾವೇದ್ 15 ನೇ ವಯಸ್ಸಿನಲ್ಲಿ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಈ ನಟಿ ಇದೀಗ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಟಿ ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾಎ. ಅದರಲ್ಲೂ ವಿಭಿನ್ನವಾದ ಬಟ್ಟೆಗಳನ್ನು ಧರಿಸಿ ಪೊಟೋಗಳನ್ನು ಶೇರ್‍ ಮಾಡುವ ಮೂಲಕ ಟ್ರೋಲ್ ಸಹ ಆಗುತ್ತಾರೆ. ಆದರೆ ಇವೆಲ್ಲದಕ್ಕೂ ಉರ್ಫಿ ತಲೆ ಕೆಡಿಸಿಕೊಳ್ಳುವುದೇ ಇಲ್ಲವಂತೆ. ಆದರೆ ನಟಿ ಉರ್ಫಿ ಗೆ ತಮ್ಮ 15ನೇ ವಯಸ್ಸಿನಲ್ಲಿ ತುಂಬಾ ಚಿಂತೆಗೆ ಗುರಿಯಾಗುವ ಸನ್ನಿವೇಶ ನಡೆದಿತ್ತಂತೆ. ಖಿನ್ನತೆಯಿಂದ ಆತ್ಮಹತ್ಯೆಗೂ ಮುಂದಾಗಿದ್ದರಂತೆ. ದಿನನಿತ್ಯ ಅವರಿಗೆ ಅತ್ಯಾಚಾರ ಮಾಡುವ ಬೆದರಿಕೆ ಕರೆಗಳು ಸಹ ಬರುತ್ತಿತ್ತಂತೆ. ಈ ಎಲ್ಲಾ ವಿಚಾರಗಳನ್ನು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಅಷ್ಟಕ್ಕೂ ನಟಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಯಾದರೂ ಏನು ಅನ್ನೋ ವಿಚಾರಕ್ಕೆ ಬಂದರೇ, ಒಂದು ಪೊಟೋ. ಹೌದು ಒಂದು ಪೋಟೋದಿಂದ ತಮಗೆ ಅತ್ಯಾಚಾರ ಬೆದರಿಕೆ ಮೊದಲಾದವುಗಳಿಂದ ಖಿನ್ನತೆಗೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರಂತೆ. 15 ನೇ ವಯಸ್ಸಿನಲ್ಲಿ ನಟಿ ಉರ್ಫಿ ಲಖನೌದಲ್ಲಿ ವಾಸವಾಗಿದ್ದರಂತೆ. ಈ ವೇಳೆ ಹಾಫ್ ಶೋಲ್ಡರ್‍ ಡ್ರೆಸ್ ಧರಿಸಿದ್ದರಂತೆ. ಆ ಸಂದರ್ಭದಲ್ಲಿ ಲಖನೌ ಸಮೀಪ ಎಲ್ಲಿಯೂ ಸಹ ಅಂತಹ ಉಡುಗೆಗಳು ಸಿಗುತ್ತಿರಲಿಲ್ಲ. ಆದ್ದರಿಂದ ನನ್ನ ಬಳಿಯ ಒಂದು ಟಾಫ್ ಕತ್ತರಿಸಿ ನಾನೆ ವಿನ್ಯಾಸಗೊಳಿಸಿ ಆ ಡ್ರೆಸ್ ಧರಿಸಿ ಪೊಟೋ ತೆಗೆದುಕೊಂಡು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಅದೇ ನಾನು ಮಾಡಿದ ತಪ್ಪು. ಆ ಪೊಟೋವನ್ನು ಯಾರೋ ಅಶ್ಲೀಲ ವೆಬ್ ಸೈಟ್‌ ನಲ್ಲಿ ಹಾಕಿ ನನಗೆ ಇಲ್ಲದ ಕಿರುಕುಳ ಬರುವಂತೆ ಮಾಡಿದರು.

ಆ ವಯಸ್ಸಿನಲ್ಲಿ ನನಗೆ ಆ ಸನ್ನಿವೇಶವನ್ನು ಯಾವ ರೀತಿ ನಿಭಾಯಿಸಬೇಕು ಎಂಬುದು ತಿಳಿಯದೇ ತುಂಬಾ ಸಂಕಷ್ಟ ಪಟ್ಟಿದ್ದೆ. ಇಡೀ ಊರಿನವರು ಹಾಗೂ ನಮ್ಮ ಕುಟುಂಬದವರೇ ನನಗೆ ಅವಮಾನ ಮಾಡಿದ್ದರು. ಈ ವೇಳೆ ನಾನು ಎದುರಿಸಬೇಕಾ ಅಥವಾ ಸಾಯಬೇಕಾ ಎಂಬುದು ತಿಳಿಯದೇ ಚಿಂತಿಗೆ ಗುರಿಯಾಗಿದ್ದೆ. ಸಾಯುವ ಧೈರ್ಯ ಇಲ್ಲದ ಕಾರಣ ಅದನ್ನು ಎದುರಿಸಲು ನಿರ್ಧಾರ ಮಾಡಿದ್ದೆ. ರೇಪ್ ಮಾಡುವ ಬೆದರಿಕೆ ಕರೆಗಳೂ ಸಹ ನನಗೆ ಬರುತ್ತಿತ್ತು ಎಂಬ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ ನಟಿ ಉರ್ಫಿ ಜಾವೇದ್.

Previous articleಡ್ರಾಮಾ ಜೂನಿಯರ್ಸ್ ಶೋ ನಲ್ಲಿ ಕ್ರೇಜಿಸ್ಟಾರ್ ರಚಿತಾ ರಾಮ್ ಡ್ಯುಯೆಟ್: ಫಿಧಾ ಆದ ಫ್ಯಾನ್ಸ್
Next articleಹಿಂದಿ ರಾಷ್ಟ್ರೀಯ ಭಾಷೆ ವಿವಾದಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಕಂಗನಾ!