Film News

ಪ್ಯಾನ್ ಇಂಡಿಯಾ ಬಗ್ಗೆ ಉಪ್ಪಿ ಹೇಳಿದಿಷ್ಟು!

ಬೆಂಗಳೂರು: ಪ್ಯಾನ್ ಇಂಡಿಯಾ ಸಿನೆಮಾಗಳ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ವಾದ ಪ್ರತಿವಾದಗಳು ನಡೆಯುತ್ತಿದ್ದು, ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಸಿನೆಮಾಗಳ ಬಗ್ಗೆ ನಿರ್ಣಯ ಜನರಿಗೆ ಬಿಟ್ಟಿದ್ದು ಎಂದು ಅಭಿಪ್ರಾಯ ಹಂಚಿಕೊಂಡಿದ್ದ ಉಪ್ಪಿ. ನಮ್ಮ ಕನ್ನಡಿಗರು ಕನ್ನಡ ಸಿನೆಮಾಗಳಿಗೆ ಬೆಲೆ ಕೊಡುತ್ತಾರೆ. ಡಬ್ಬಿಂಗ್ ಆಗಲಿ ಅಥವಾ ಪ್ಯಾನ್ ಇಂಡಿಯಾ ಸಿನೆಮಾ ಆಗಲಿ ಅದು ಜನರ ತೀರ್ಮಾನ. ನನ್ನ ಒಬ್ಬನ ಅಭಿಪ್ರಾಯ ಎಲ್ಲರಿಗೂ ಸೇರಿದ್ದಲ್ಲ. ಎಲ್ಲರೂ ಸರಿ ಎಂದರೇ ಸರಿ, ತಪ್ಪು ಅಂದರೆ ತಪ್ಪು ಎಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೊದಲು ಸಿನೆಮಾಗಳು ರೀಮೇಕ್ ಆಗಿ ಬೇರೆ ಬೇರೆ ಭಾಷೆಗಳಲ್ಲಿ ಪ್ರದರ್ಶನವಾಗುತ್ತಿದ್ದವು, ಆದರೆ ಈಗ ನೇರವಾಗಿ ಅವರದ್ದೇ ಭಾಷೆಗಳಲ್ಲಿ ಸಿನೆಮಾಗಳು ನೇರವಾಗಿ ಬಿಡುಗಡೆಯಾಗುತ್ತಿವೆ. ಪ್ಯಾನ್ ಇಂಡಿಯಾ ಇರುವವರೆಗೂ ಪ್ಯಾನ್ ಇಂಡಿಯಾ ಸಿನೆಮಾಗಳು ಬರುತ್ತಲೇ ಇರುತ್ತವೆ. ಜನರ ನಿರ್ಣಯವೇ ನನ್ನ ನಿರ್ಣಯ ಎಂದು ಸಿನೆಮಾ ಮೂಹೂರ್ತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಉಪೇಂದ್ರ ಪತ್ರಕರ್ತರಿಗೆ ಈ ರೀತಿಯ ಅಭಿಪ್ರಾಯ ತಿಳಿಸಿದ್ದಾರೆ.

Trending

To Top