News

(video)ಉತ್ತಮ ಪ್ರಜಕೀಯ ಪಕ್ಷ ಈ ಭಾರಿ 28 ಕ್ಷೇತ್ರಗಳಿಂದ ಸ್ಪರ್ಧೆ! ಅಭ್ಯರ್ಥಿಗಳು ಯಾರು ಗೊತ್ತ? ವಿಡಿಯೋ ನೋಡಿ

uppi

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದು ಪಕ್ಷವನ್ನು ಹುಟ್ಟು ಹಾಕಿದರು. ಉಪೇಂದ್ರ ಅವರ ರಾಜಕೀಯ ಪಕ್ಷದ ಹಿಸ್ಸಾರು ಉತ್ತಮ ಪ್ರಜಕೀಯ ಪಕ್ಷ (UPP ). ನೆನ್ನೆ ಬೆಂಗಳೂರಿನಲ್ಲಿ ಉತ್ತಮ ಪ್ರಜಕೀಯ ಪಕ್ಷದ, ಪ್ರೆಸ್ ಮೀಟ್ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಉಪೇಂದ್ರ ಅವರು ಈ ಭಾರಿ ಮುಂಬರುವ ಚುನಾವಣೆಯಲ್ಲಿ ಉತ್ತಮ ಪ್ರಜಕೀಯ ಪಕ್ಷ ದಿಂದ ಬರೋಬ್ಬರಿ 28 ಜನ ಅಭ್ಯರ್ಥಿಗಳು ಸ್ಪರ್ದಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಭಾರಿಯ ಚುನಾವಣೆ ಬಗ್ಗೆ, ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ, ತಮ್ಮ ಪಕ್ಷದ ಅಭ್ಯರ್ಥಿಗಳ ಅಹ್ರತೆಗಳ ಬಗ್ಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸುಮಾರು 2 ವರ್ಷಗಳ ಹಿಂದೆ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಎಂಬ ಪಕ್ಷವನ್ನು ಹುಟ್ಟು ಹಾಕಿದ್ದರು. ಆದರೆ ಕೆಲವು ಒಳಜಗಳ ಗಳಿಂದ, ಆ ಪಕ್ಷದಿಂದ ಉಪೇಂದ್ರ ಅವರ ಹೊರ ಬಂದು ಈಗ ಉತ್ತಮ ಪ್ರಜಕೀಯ ಪಕ್ಷ ಎಂಬ ಪಾರ್ಟಿಯನ್ನು ಹುಟ್ಟು ಹಾಕಿದ್ದಾರೆ. ಕಳೆದ ವರ್ಷವಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತಮ ಪ್ರಜಕೀಯ ಪಕ್ಷದ manifesto ಬಿಡುಗಡೆ ಮಾಡಿದ್ದರು. ಉಪೇಂದ್ರ ಅವರ ಕನಸಿನಂತೆ ಈ ವರ್ಷ ನಡೆಯುವ ಲೋಕ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಕೂಡ ಸ್ಪರ್ದಿಸಲಿದೆ. ಇದನ್ನು ಗಮನಿಸಿದ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳು ಸ್ವಲ್ಪ ಹೆದರಿದ್ದಾರೆ. ಇದ್ದರಿಂದ ಈ ಭಾರಿಯ ಚುನಾವಣೆಯಲ್ಲಿ ಭಾರಿ ಟ್ವಿಸ್ಟ್ ಸಿಗಲಿದೆ.
ಇನ್ನೊಂದೆಡೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ R ಚಂದ್ರು ನಿರ್ದೇಶನದ ಐ ಲವ್ ಯು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಐ ಲವ್ ಯು ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಹೀರೋಯಿನ್ ಆಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಕಳೆದ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಅವರು ಉಪೇಂದ್ರ ಮತ್ತೆ ಬಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯದಲ್ಲಿ ಬಹಳ ಬ್ಯುಸಿ ಆಗಿದ್ದರು. ಐ ಲವ್ ಯು ಚಿತ್ರದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ರವಿ ಚಂದ್ರ, ಹೋಂ ಮಿನಿಸ್ಟರ್, ಹಾಗು ಉಪ್ಪಿ ರುಪ್ಪಿ ಎಂಬ ಚಿತ್ರಗಳಲ್ಲಿ ನಟಿಸಲಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಈ ವರ್ಷ ಉಪೇಂದ್ರ ಅವರ ಐ ಲವ್ ಯು ಚಿತ್ರ ಬಿಟ್ಟರೆ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುವುದಿಲ್ಲ, ಕಾರಣ ಉಪೇಂದ್ರ ಅವರ ರಾಜಕೀಯ ಪ್ರವೇಶ ಹಾಗು ಇದೇ ವರ್ಷ ಉಪೇಂದ್ರ ಅವರು ತಮ್ಮ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. ಉಪೇಂದ್ರ ಅವರಿಗೆ , ಉಪೇಂದ್ರ ಅವರ ಪಕ್ಷಕ್ಕೆ ಒಳ್ಳೇದ್ ಆಗಲಿ ಎಂದು ನಮ್ಮ ಆಸೆ! ಈ ಸುದ್ದಿ ಇಷ್ಟ ವಾದಲ್ಲಿ, ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top