ಶುರುವಾಯ್ತು ಉಪ್ಪಿ ನಿರ್ದೇಶನ UI ಸಿನೆಮಾ ಶೂಟಿಂಗ್ ಶುರು.. ನಾಯಕಿ ಯಾರು ಗೊತ್ತಾ?

ಸುಮಾರು ವರ್ಷಗಳ ಬಳಿಕ ನಟ ಉಪೇಂದ್ರ ನಿದೇಶನಕ್ಕೆ ಮರಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಸಿನೆಮಾಗಳನ್ನು ನಿರ್ದೇಶನ ಮಾಡುತ್ತಾ, ರಿಯಲ್ ಸ್ಟಾರ್‍ ಎಂದೇ ಕರೆಯಲಾಗುವ ನಟ ಉಪೇಂದ್ರ. ಇತ್ತೀಚಿಗಷ್ಟೆ ಅವರ ನಿರ್ದೇಶನ ಸಿನೆಮಾ ಪೋಸ್ಟರ್‍ ಒಂದು ಬಿಡುಗಡೆ ಮಾಡಲಾಗಿತ್ತು. ಸಿನೆಮಾ ಪೋಸ್ಟರ್‍ ನಲ್ಲಿ ಏನೆ ಇದೆ. ಸಿನೆಮಾ ಹೇಗಿರಲಿದೆ ಎಂಬುದನ್ನು ಊಹಿಸಲು ಸಹ ಸಾಧ್ಯವಾಗದ ರೀತಿಯಲ್ಲಿತ್ತು. ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆ ಮಾಡಿದ ಬಳಿಕವೂ ಸಿನೆಮಾದ ಬಗ್ಗೆ ಯಾರಿಗೂ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.

ಸಾಮಾನ್ಯವಾಗಿ ಉಪೇಂದ್ರ ನಿದೇಶನದ ಸಿನೆಮಾಗಳನ್ನು ಅರ್ಥ ಮಾಡಿಕೊಳ್ಳಬೇಕಾದರೇ ಒಂದೆರಡು ಬಾರಿ ಸಿನೆಮಾಗಳನ್ನು ನೋಡಬೇಕು ಎಂಬ ಮಾತುಗಳಿವೆ. ಇನ್ನೂ ಸಿನೆಮಾ ಫಸ್ಟ್ ಲುಕ್ ಪೋಸ್ಟರ್‍ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಸಿನೆಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಸದ್ಯ ಸಿನೆಮಾದ ಶೂಟಿಂಗ್ ಶುರುವಾಗಿದ್ದು, ಡೈರೆಕ್ಟರ್‍ ಟೋಪಿ ಧರಿಸಿ ಉಪೇಂದ್ರ ನಿರ್ದೇನಕ್ಕೆ ಇಳಿದಿದ್ದಾರೆ. ಈ ಸಿನೆಮಾದ ಕಥೆಯನ್ನು ಬರೆದು ನಿದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದು, ಸುಮಾರು ವರ್ಷಗಳ ಬಳಿಕ ಸಿನೆಮಾ ಮಾಡುತ್ತಿರುವ ಉಪೇಂದ್ರ ರವರ ಈ ಸಿನೆಮಾದ ಮೇಲೆ ದೊಡ್ಡ ನಿರೀಕ್ಷೆಯನ್ನು ಅವರ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಶುರುವಾಗಿದ್ದು ಸಿನೆಮಾದಲ್ಲಿ ನಾಯಕಿಯಾರು ಎಂಬ ಬಗ್ಗೆ ಸಹ ಚರ್ಚೆ ಶುರುವಾಗಿದೆ.

ಉಪೇಂದ್ರ ನಿರ್ದೇಶನದ ಹೊಸ ಸಿನೆಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್‍ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನೆಮಾದ ಟೈಟಯ್ UI ಎಂದು ಇಡಲಾಗಿದ್ದು, ಉಪ್ಪಿ ಈ ಸಿನೆಮಾದಲ್ಲಿ ಏನು ಹೇಳಲು ಹೊರಟಿದ್ದಾರೆ ಎಂಬುದನ್ನು ಅಭಿಮಾನಿಗಳು ತಿಳಿದುಕೊಳ್ಳಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಸಿನೆಮಾ ತಡವಾಗದಂತೆ ಸಿನೆಮಾದ ಶೂಟಿಂಗ್ ಸಹ ಶುರು ಮಾಡಿಕೊಂಡಿದ್ದು, ಈ ಕುರಿತು ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸಿನೆಮಾದ ಶೂಟಿಂಗ್ ಭರದಿಂದ ಸಾಗಿದ್ದು ಸಿನೆಮಾದ ನಾಯಕಿ ಯಾರು ಎಂಬುದರ ಚರ್ಚೆಗಳು ಶುರುವಾಗಿದ್ದು, ಸಿನೆಮಾದಲ್ಲಿ ನಾಯಕಿಯಾಗಿ ಮೊದಲನೇ ಸಿನೆಮಾವೇ ಪ್ಯಾನ್ ಇಂಡಿಯಾ ಸಿನೆಮಾ ಮಾಡಿ ನಾಯಕಿ ನಟಿಯಾಗಲಿದ್ದಾರೆ ಎನ್ನಲಾಗಿದೆ.

ಸುಮಾರು ಏಳು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಇತ್ತಿಚಿಗಷ್ಟೆ ಸಿನೆಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಅಂದು ಸಿನೆಮಾದ ಯಾವುದೇ ಪಾತ್ರಗಳನ್ನು ಸಹ ರಿವೀಲ್ ಮಾಡಿಲ್ಲ. ಸಿನೆಮಾದ ಯಾವುದೇ ಮಾಹಿತಿಯನ್ನು ಸಹ ಬಿಟ್ಟುಕೊಟ್ಟಿಲ್ಲ ಉಪ್ಪಿ. ಇನ್ನೂ ಉಪ್ಪಿ ಸಿನೆಮಾದಲ್ಲಿ ಶ್ರೀನಿಧಿ ನಾಯಕಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ಈಕೆ ಕಾಲಿವುಡ್ ನ ಕೊಬ್ರಾ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಉಪ್ಪಿ ನಿರ್ದೇಶನದಲ್ಲಿ ಮೂಡಿಬರಲಿರುವ UI ಸಿನೆಮಾಗೆ ಶ್ರೀನಿಧಿ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಶ್ರೀನಿಧಿ ಜೊತೆಗೆ ದಕ್ಷಿಣ ಭಾರತದ ಮಿಲ್ಕಿ ಬ್ಯೂಟಿ ತಮನ್ನಾ ರವರನ್ನು ಸಹ ಸಂಪರ್ಕ ಮಾಡಲಾಗಿದೆಯಂತೆ. ಆದರೆ ಈ ಕುರಿತು ಎಲ್ಲೂ ಅಧಿಕೃತವಾಗಿ ಘೋಷಣೆ ಯಾಗಿಲ್ಲ.

Previous articleಖ್ಯಾತ ನಟಿ ನಮಿತಾ ಬೇಬಿ ಬಂಪ್ ಲೇಟೆಸ್ಟ್ ಪೊಟೋಸ್ ವೈರಲ್…!
Next articleಪ್ಯಾರೀಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಬಾಲಿವುಡ್ ಲವರ್ಸ್….!