ಹೈದರಾಬಾದ್: ಮೆಗಾ ಕುಟುಂಬದ ಯುವ ನಟ ವರುಣ್ ತೇಜ್ ಅಭಿನಯಿಸುತ್ತಿರುವ ಗನಿ ಚಿತ್ರದ ಶೂಟಿಂಗ್ ಸೆಟ್ಗೆ ರಿಯಲ್ ಸ್ಟಾರ್ ಉಪೇಂದ್ರ ಎಂಟ್ರಿ ಕೊಟ್ಟಿದ್ದು, ಈ ಸೆಟ್ನಲ್ಲಿನ ಪೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟಾಲಿವುಡ್ನ ಯುವ ನಿರ್ದೇಶಕ ಕಿರಣ್ ಕೋರಪತಿ ನಿರ್ದೇಶನ ಮಾಡುತ್ತಿರುವ ಮೊದಲನೇ ಚಿತ್ರವೇ ಗನಿ. ಈ ಚಿತ್ರದಲ್ಲಿ ವರುಣ್ ಚಿತ್ರದಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದು, ಪಕ್ಕಾ ಆಕ್ಷನ್ ಚಿತ್ರ ಇದಾಗಲಿದೆ. ಜೊತೆಗೆ ಬಾಕ್ಸರ್ ಗೆಟಪ್ನಲ್ಲಿ ಮಿಂಚಲು ವರುಣ್ ತೇಜ್ ಸಖತ್ ವರ್ಕೌಟ್ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಉಪೇಂದ್ರ ಪೋಷಣೆ ಮಾಡುತ್ತಿರುವ ಪಾತ್ರ ಯಾವುದೆಂದು ಬಹಿರಂಗವಾಗಿಲ್ಲ. ಕೆಲವೊಂದು ರೂಮರ್ಸ್ ಪ್ರಕಾರ ಉಪ್ಪಿ ಬಾಕ್ಸರ್ ತರಬೇತುದಾರರಾಗಿ, ವಿಲನ್ ಪಾತ್ರದಲ್ಲಿ ಉಪ್ಪಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಗನಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮೊದಲನೇ ಹಂತದ ಶೂಟಿಂಗ್ ಸಹ ಮುಕ್ತಾಯ ಮಾಡಿದೆ ಚಿತ್ರತಂಡ. ಇದೀಗ ಎರಡನೇ ಹಂತದ ಶೂಟಿಂಗ್ ಪ್ರಾರಂಭವಾಗಿದ್ದು, ಇದರಲ್ಲಿ ಉಪೇಂದ್ರ ರವರು ಭಾಗಿಯಾಗಿದ್ದಾರೆ.
ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಆರ್.ಚಂದ್ರ ನಿರ್ದೇಶನದಲ್ಲಿ ಮೂಡಿಬರಲಿರುವ ಬಿಗ್ ಬಜೆಟ್ ಚಿತ್ರ ಕಬ್ಜ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಂಡರ್ವಲ್ಡ್ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಡಿಫರೆಂಟ್ ಲುಕ್ನಲ್ಲಿ ಕಾಣಿಸುತ್ತಿದ್ದು, ಅಭಿಮಾನಿಗಳನ್ನು ಥ್ರಿಲ್ ಆಗುವಂತೆ ಮಾಡಿದೆ. ಅಷ್ಟೇಅಲ್ಲದೇ ಈ ಚಿತ್ರದಲ್ಲಿ ಮತ್ತೋರ್ವ ಸ್ಟಾರ್ ನಟ ಕಿಚ್ಚ ಸುದೀಪ್ ರವರು ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
