News

(video)ನಿಜವಾದ ಟ್ರೆಂಡ್ ಸೆಟರ್ಸ್ ಹೀರೊಗಳಲ್ಲ, ಅದು directors ಎಂದು ಹೇಳಿದ ಉಪೇಂದ್ರ, ವಿಡಿಯೋ ನೋಡಿ

uppi-star

ಇವತ್ತು ನಮ್ಮ ಬೆಂಗಳೂರಿನಲ್ಲಿ ಕನ್ನಡ ಚಿತ್ರ ರಂಗದ ನಿರ್ದೇಶಕರ ಸಂಗಡ ವತಿಯಿಂದ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯ್ದಲ್ಲಿ ಕನ್ನಡದ ಬಹುತೇಕ ಎಲ್ಲಾ ನಿರ್ದೇಶಕರು ಹಾಜರಿದ್ದರು. ಈ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಭಗವಾನ್ ಸರ್, ಸಾಧು ಕೋಕಿಲ, ನಾಗೇಂದ್ರ ಪ್ರಸಾದ್, D ರಾಜೇಂದ್ರ ಸಿಂಗ್ ಬಾಬು, ಯೋಗರಾಜ್ ಭಟ್, ಉಪೇಂದ್ರ ಹಾಗು ಹಲವಾರು ದೊಡ್ಡ ದೊಡ್ಡ ನಿರ್ದೇಶಕರು ಆಗಮಿಸಿದ್ದರು. ಈ ಸಮಯದಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತಾಡಿದ ರಿಯಲ್ ಸ್ಟಾರ್ ಉಪೇಂದ್ರ ಅವರು “ಒಂದು ಸಿನಿಮಾ ಎಂದರೆ ಅದರ ನಿರ್ದೇಶಕನೇ ಮೊದಲ ಹೀರೋ, ಆಮೇಲೆ ಸ್ಟಾರ್ಸ್” ನಿರ್ದೇಶಕನೇ ನಿಜವಾದ ಟ್ರೆಂಡ್ ಸೆಟ್ಟರ್ ಎಂದು ಹೇಳಿದ್ದಾರೆ, ಉಪ್ಪಿ ಇನ್ನೂ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿರಿ
ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪ್ರಜಕೀಯ ಪಾರ್ಟಿ ಶುರು ಆದಮೇಲೆ ಬಹಳ ಬ್ಯುಸಿ ಆಗಿದ್ದರು. ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ ಮಾಡಿದ್ದರು. ಈಗ ಮತ್ತೆ ಉಪ್ಪಿ ಇಸ್ ಬ್ಯಾಕ್ ಎಂದೇ ಹೇಳಬಹುದು. ರಿಯಲ್ ಸ್ಟಾರ್ ಉಪೇಂದ್ರ ಹಾಗು ರಚಿತಾ ರಾಮ್ ನಟನೆಯ ಕನ್ನಡದ ಹೊಚ್ಚ ಹೊಸ ಚಿತ್ರ I LOVE YOU ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರವನ್ನು R ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ನೆನ್ನೆ ಬೆಂಗಳೂರಿನಲ್ಲಿ ನಮ್ಮ ಶಿವಣ್ಣ ಅವರು ಲಾಂಚ್ ಮಾಡಿದ್ದಾರೆ. I LOVE YOU ಚಿತ್ರದ ಟ್ರೇಲರ್ ಹೇಗಿದೆ ಗೊತ್ತ? ಈ ಕೆಳಗಿನ ಟ್ರೇಲರ್ ವಿಡಿಯೋ ತಪ್ಪದೆ ನೋಡಿರಿ ಹಾಗು ನಿಮ್ಮ ಅಭಿಪ್ರಾಯ ತಿಳಿಸಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವಣ್ಣ ಅವರಿಗೆ OM ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಓಂ ಚಿತ್ರ ಅದೆಷ್ಟೋ ಸಲ ಮರು ಬಿಡುಗಡೆ ಆಗಿರುವುದು ನಿಮಗೆ ಗೊತ್ತೇ ಇದೆ. ಎಷ್ಟೇ ಸಲ ಬಿಡುಗಡೆ ಆದರೂ ಓಂ ಚಿತ್ರ ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ಓಂ ಚಿತ್ರದಲ್ಲಿ ರಿಯಲ್ ರೌಡಿಸಂ ಹಾಗು ಅಂಡರ್ ವರ್ಲ್ಡ್ ಕಥೆ ಇತ್ತು. ಓಂ ಚಿತ್ರದಲ್ಲಿ ಉಪೇಂದ್ರ ಅವರು ನಿಜವಾದ ರೌಡಿಗಳ ಕೈಯಲ್ಲಿ ನಟನೆ ಮಾಡಿಸಿದ್ದರು. ಈಗ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಉಪ್ಪಿ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ, ಕನ್ನಡಕ್ಕೆ , ಕನ್ನಡ ಚಿತ್ರ ರಂಗಕ್ಕೆ ಒಂದು ಹೊಸ ತಿರುವು ಕೊಟ್ಟಿದೆ. ಇಡೀ ದೇಶದ ಜನ ನಮ್ಮ ಕನ್ನಡದತ್ತ ಇದೆ ಮೊದಲ ಬಾರಿಗೆ ತಿರುಗಿ ನೋಡುವಂತೆ ಮಾಡಿದ KGF ತಂಡಕ್ಕೆ, ಹಾಗು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದು ಸಲಾಂ! ನೆನ್ನೆ ಬೆಂಗಳೂರಿನಲ್ಲಿ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ KGF ಚಿತ್ರದ ಬಗ್ಗೆ ಕೇಳಿದಾಗ, ಶಿವಣ್ಣ ಅವರು ನಾನು KGF ತರ ಒಂದು ಚಿತ್ರ ಮಾಡುತ್ತೇನೆ, KGF ಚಿತ್ರ ತಂಡಕ್ಕೆ ಒಂದು ಸಲಾಂ ಎಂದು ಹೇಳಿದ್ದಾರೆ. ಶಿವಣ್ಣ KGF ಚಿತ್ರದ ಬಗ್ಗೆ ಏನ್ ಏನ್ ಹೇಳಿದ್ದಾರೆ , ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಕನ್ನಡ ಸಿನಿಮಾ ರಂಗದ ಹಲವಾರು ಕಲಾವಿದರು ಹಾಜರಿದ್ದರು. ಕನ್ನಡ ಸಿನಿಮಾ ಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top