Cinema

ಉಪೇಂದ್ರ ವಿರುದ್ಧ ಕಿಡಿ ಕಾರಿದ ಡಿವೈಎಸ್ಪಿ ಅನುಪಮಾ ಶೆಣೈ! ಅಭಿಮಾನಿಗಳ ಫುಲ್ ಗರಂ, ಏನ್ ಆಗಿದೆ ನೋಡಿ

ರಿಯಲ್ ಸ್ಟಾರ್ ಪ್ರಜಾಕಿಯದ ಪ್ರಜಾಕಾರಣಿ ಉಪೇಂದ್ರ ಅವರ ಬಗ್ಗೆ ಕಿಡಿಕಾರಿದ್ದಾರೆ ಮಾಜಿ ಡಿವೈಎಸ್ಪಿ, ಭಾರತೀಯ ಜನಾಶಕ್ತಿ ಕಾಂಗ್ರೆಸ್ ಅಧ್ಯಕ್ಷೆ ಅನುಪಮಾ ಶೆಣೈ. ಒಂದಷ್ಟು ಸರಣಿ ಟ್ವೀಟ್ ಗಳ ಮೂಲಕ ಪ್ರಜಾಕೀಯದ ಉದ್ದೇಶಗಳನ್ನು ಹಾಗೂ ಉಪೇಂದ್ರ ಅವರ ಅಸ್ತಿತ್ವವನ್ನು ಕೆಣಕಿದ್ದಾರೆ ಅನುಪಮಾ. ಎಲ್ಲವೂ ಶಾಂತಿಯಿಂದ ಇದ್ದಾಗ ಅನುಪಮಾ ಶೆಣೈ ಮಾಡಿದ ಒಂದು ಟ್ವೀಟ್ ಇಂದ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಈಕೆಯ ವಿರುದ್ಧ ಆಕ್ರೋಶಗೊಂಡರು. ಫೇಸ್ ಬುಕ್ ನಲ್ಲಿ ಸಿಕ್ಕಿದ ಒಂದು ಫೋಟೋವನ್ನು ಹಂಚಿಕೊಂಡ ಅನುಪಮಾ.. “Facebookನಲ್ಲಿ ಈ ಚಿತ್ರ ನೋಡೋಕ್ಕೆ ಸಿಕ್ಕಿತು. ಈ ರೀತಿಯಾಗಿ ಹರಡ್ತಾ ಇರೋದು ಕೊರೊನಾ, ಪ್ರಜಾಕೀಯ ಅಲ್ಲ!Prajakeeya is masked! Maintain social distance from Prajakeeya!..”
ಈ ಒಂದು ಟ್ವೀಟ್ ಇಂದ ಉಪ್ಪಿ ಅಭಿಮಾನಿಗಳು ಅಕ್ರೋಶಗೊಂಡು ಪ್ರತಿಕ್ರಿಯಿಸಲು ಶುರುಮಾಡಿದರು..”ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ?ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ರ ಬರ್ತಾ ಇದೆ. ಎರಡೂ dangerous. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ…” ಇದು ಅನುಪಮಾ ಶೆಣೈ ಅವರ ಮತ್ತೊಂದು ಟ್ವೀಟ್..
ಜಾತಿ ಬಗ್ಗೆ ಮಾತಾಡಿ, ಎಲೆಕ್ಷನ್ ಹಿಂದಿನ ದಿನ ಬಂದು ದುಡ್ಡು ಹಂಚಿ ಹೋಗ್ತೀರಾ, ಸ್ವಲ್ಪ ಆತ್ಮಸಾಕ್ಷಿ ಇಟ್ಟುಕೊಂಡು ಮಾತಾಡಿ ಎಂದ ಅಭಿಮಾನಿಗೆ.. ಉಪೇಂದ್ರರನ್ನು ನಿಂದಿಸುವಂತೆಯೇ ಉತ್ತರ ನೀಡಿದ್ದಾರೆ ಅನುಪಮಾ..”ನಿಮ್ ಉಪೇಂದ್ರ ಫಿಲ್ಮ್ ಮಾಡೋಕ್ಕೆ ಏನೂ ದುಡ್ಡೇ ಹಾಕಿಲ್ವಾ? ಅದರಿಂದ ಲಾಭ ಗಳಿಸಿಲ್ವಾ? ‘ಸುಮ್ಮನೆ’ ಅಂತ ಒಂದು ದೊಡ್ಡ ಅರಮನೆ ಕಟ್ಟಿಸಿ ಈಗ ಪಕ್ಷದ ಕಾರ್ಯಕರ್ತರು ಕಾರ್ಮಿಕರಾಗಿ ದುಡಿಯಬೇಕಂತೆ! ಅಷ್ಟು ಕಾರ್ಮಿಕರಾಗಿ ದುಡಿಯುವ ಮನಸ್ಸಿದ್ದರೆ, ರೈತರ ಭೂಮಿಯ ಮೇಲೆ ಕಟ್ಟಿರುವ ರುಪ್ಪಿಸ್ ರೆಸಾರ್ಟ್, ಸುಮ್ಮನೆ ಎಲ್ಲ ಮಾರಿ ಬಡವರಿಗೆ ಕೊಟ್ಟು, ಆಟೋ..”.
“ಕೊರೊನಾ ಹೇಗೆ ಚೀನಾದ ಲ್ಯಾಬ್ ಗಳಲ್ಲಿ ಇತ್ತೋ ಹಾಗೇ ಪ್ರಜಾಕೀಯ ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದೆ. ಸಮುದಾಯಕ್ಕೆ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು! ಇಲ್ಲವಾದಲ್ಲಿ ಬಿಜೆಪಿ ಸರಕಾರಕ್ಕೆ ಹೇಗೆ ಕೊರೊನಾ ತಡೆಗಟ್ಟಲು ಸಾಧ್ಯವಾಗಿಲ್ಲವೋ ಅದೇ ರೀತಿ ಪ್ರಜಾಕೀಯ ಎಂಬ ವೈರಸನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ.😂😂..””ಹರಡದೇನೇ ಪ್ರಜಾಕೀಯ ಇದೆ ಅಂತ ನಿಮಗೆ ಹೇಗೆ ಗೊತ್ತಾಯಿತು ಮೇಡಂ?ನಿಮ್ಮವರಿಗೂ ಹರಡಿದೆ ಅಂತಾಯ್ತಲ್ಲಾ…??” ಈ ರೀತಿ ಪ್ರಶ್ನೆ ಕೇಳಿದ್ದ ರಿಯಲ್ ಸ್ಟಾರ್ ಅಭಿಮಾನಿಗೆ..”ಭಾರತಕ್ಕೆ ಹರಡೋ ಮೊದ್ಲು ಕೊರೊನಾ ಇದೆ ಅಂತ ಹೇಗೆ ಗೊತ್ತಾಯ್ತು ಅಂತ ಕೇಳಿದ ಹಾಗೆ ಇದೆ ನಿಮ್ಮ ಪ್ರಶ್ನೆ!!..” ಹೀಗೆ ಉತ್ತರ ನೀಡಿದ್ದಾರೆ ಅನುಪಮಾ..
ಇಷ್ಟಲ್ಲದೇ ಉಪೇಂದ್ರ ಅವರ ಸಿನಿಮಾಗಳ ಬಗ್ಗೆಯೂ ಕಡೆಗಣಿಸಿ ಟ್ವೀಟ್ ಮಾಡಿದ್ದಾರೆ..”ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. ‘ಓಂ’ ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ! ‘A’ ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್ ಗೆ ಕಾದು ಕೊನೆಗೆ ‘ಏನಿಲ್ಲ ಏನಿಲ್ಲ’ ಅನ್ನುವಂತಾಯಿತು! ಅದೇ ರೀತಿ ‘ಪ್ರಜಾಕೀಯ’. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ!..” ಇದಕ್ಕೆ ಉಪ್ಪಿ ಅಭಿಮಾನಿಗಳು ಸಹ ತಿರುಗಿಬಿದ್ದು, ಪ್ರಶ್ನೆ ಹಾಕಿದ್ದರು.. ಹಾಗಿದ್ದರೆ ನೆಗಟಿವ್ ಆಗಿವೆ ಸಿನಿಮಾವನ್ನು ತೋರಿಸಿ ಯುವಕರನ್ನು ಹಾಳು ಮಾಡಬೇಕಾ, ಆ ಎರಡು ಸಿನಿಮಾಗಳಲ್ಲೂ ಸಮಾಜಕ್ಕೆ ಒಳ್ಳೆಯದಾಗುವಂತಹ ಅಂಶಗಳು ಇದ್ದವು, ಎಲ್ಲರೂ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಉಪ್ಪಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಎರಡು ದಿನಗಳಿಂದ ಟ್ವಿಟಟ್ ನಲ್ಲಿ ನಡೆಯುತ್ತಿರುವ ಈ ಯುದ್ಧ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ನೋಡಬೇಕು.. ಆದರೆ ಎಲ್ಲವನ್ನು ಗಮನಿಸುತ್ತಿರುವ ಉಪೇಂದ್ರ ಅವರು ಮಾತ್ರ ಸೈಲೆಂಟ್ ಆಗಿಯೇ ಇದ್ದಾರೆ..

Trending

To Top