ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ನಿರ್ದೇಶಕ , ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಾರೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಷಯ. ಒಂದೆರಡು ವರ್ಷಗಳಿಂದ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ, ಸಮಾಜಕ್ಕೆ ಒಳಿತಾಗುವಂತಹ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿದ್ದಾರೆ ಪ್ರಜಾಕೀಯದ ಪ್ರಜಾಕಾರಿಣಿ ಉಪೇಂದ್ರ ಅವರು.ರಾಜಕೀಯದಲ್ಲಿದ್ದರೂ ನಟನೆಯನ್ನು ಬಿಟ್ಟಿಲ್ಲ ರಿಯಲ್ ಸ್ಟಾರ್. ಉಪೇಂದ್ರ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಹೊರರಾಜ್ಯದ ಚಿತ್ರರಂಗದಲ್ಲೂ ಸಹ ಅಷ್ಟೇ ಬೇಡಿಕೆ ಇದೆ. ತೆಲುಗು ಚಿತ್ರರಂಗದಿಂದಲು ರಿಯಲ್ ಸ್ಟಾರ್ ರಿಗೆ ಸಾಕಷ್ಟು ಆಫರ್ ಗಳು ಬರುತ್ತಿವೆ.
ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು “ಪುಷ್ಪ”. ಅಲ್ಲು ಅರ್ಜುನ್ ಅಭಿನಯಿಸಲಿರುವ ಸಿನಿಮಾ. ಫಸ್ಟ್ ಲುಕ್ ಇಂದಲೇ ಸಖತ್ ಕ್ರೇಜ್ ಸೃಷ್ಟಿಸಿದೆ ಪುಷ್ಪ ಸಿನಿಮಾ. ಈ ಸಿನಿಮಾದಲ್ಲಿ ನಟಿಸಲು ರಿಯಲ್ ಸ್ಟಾರ್ ಉಪೇಂದ್ರರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿಗಳು ಚಿತ್ರರಂಗದಲ್ಲಿ ಹರಿದಾಡಿತ್ತು. ಈ ಕುರಿತು ಸ್ವತಃ ಉಪೇಂದ್ರ ಅವರೇ ಮಾತನಾಡಿದ್ದಾರೆ. ಆಫರ್ ಬಂದಿರುವುದು ನಿಜ. ಹೊರ ಇಂಡಸ್ತ್ರಿಗಳಿಂದ ಸಾಕಷ್ಟು ಆಫರ್ ಗಳು ಬರುತ್ತಿರುವುದು ನಿಜ. ಆದರೆ ನಾನು ಎಲ್ಲವನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಪುಷ್ಪ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ ಆದರೆ ಯಾವುದು ಅಂತಿಮ ನಿರ್ಧಾರ ಆಗಿಲ್ಲ ಎಂದಿದ್ದಾರೆ ರಿಯಲ್ ಸ್ಟಾರ್. ಆದರೆ ಪುಷ್ಪ ಚಿತ್ರತಂಡದಿಂದ ಇದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.
ಈ ಹಿಂದೆ ಉಪೇಂದ್ರ ಮತ್ತು ಅಲ್ಲು ಅರ್ಜುನ್ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ನಟಿಸಿದ್ದರು. ಎಲ್ಲ ಸರಿಯಾದರೆ ಪುಷ್ಪ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸುವ ಸಾಧ್ಯತೆ ಇದೆ. ರಂಗಸ್ಥಲಂ ನಂತರ ನಿರ್ದೇಶಕ ಸುಕುಮಾರ್ ನಟಿಸುತ್ತಿರುವ ಸಿನಿಮಾ ಇದು. 80ರ ದಶಕದಲ್ಲಿ ನಡೆಯುವ ಈ ಕಥೆ, ರೆಡ್ ಸ್ಯಾಂಡಲ್ ವುಡ್ ಸ್ಮಗ್ಲಿಂಗ್ ಬಗ್ಗೆ ಆಧಾರಿತವಾಗಿದೆ ಈ ಕಥೆ. ಹೆಚ್ಚಾಗಿ ಕಾಡಿನ ಪ್ರದೇಶದಲ್ಲಿ ಕಥೆ ಸಾಗಲಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಪುಷ್ಪಾ ಸಿನಿಮಾದ ನಾಯಕಿ.
