Film News

ಆಚಾರ್ಯ ಶೂಟಿಂಗ್ ಸ್ಪಾಟ್‌ಗೆ ಎಂಟ್ರಿ ಕೊಟ್ಟ ಉಪಾಸನ!

ಹೈದರಾಬಾದ್: ಕೊರಟಾಲ ಶಿವಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಆಚಾರ್ಯ ಶೂಟಿಂಗ್ ಸ್ಪಾಟ್‌ಗೆ ವಿಶೇಷ ಅತಿಥಿಯೊಬ್ಬರು ಭೇಟಿ ನೀಡಿದ್ದರು. ಈ ಚಿತ್ರ ಶೂಟಿಂಗ್ ರಾಜಮಂಡ್ರಿಯಲ್ಲಿ ನಡೆಯುತ್ತಿದ್ದು, ಇಲ್ಲಿಗೆ ರಾಮ್ ಚರಣ್ ಪತ್ನಿ ಉಪಾಸನ ಭೇಟಿ ನೀಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ಈಗಾಗಲೇ ಪೋಸ್ಟರ್ ಹಾಗೂ ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. ಜೊತೆಗೆ ಮೇ ಮಾಹೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಾಜಮಂಡ್ರಿಯಲ್ಲಿ ಶೆಡ್ಯೂಲ್ಡ್ ನಡೆಯುತ್ತಿದ್ದು, ಇಲ್ಲಿಗೆ ರಾಮ್ ಚರಣ್ ಪತ್ನಿ ಉಪಾಸನ ಭೇಟಿ ನೀಡಿದ್ದು, ಕೆಲವೊಂದು ಪೋಟೊಗಳು ವೈರಲ್ ಆಗಿದೆ.

ಇನ್ನೂ ರಾಮ್ ಚರಣ್ ಆಚಾರ್ಯ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಣೆ ಮಾಡುತ್ತಿದ್ದಾರೆ. ಚಿತ್ರದ ಸೆಕೆಂಡ್ ಆಫ್ ನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದು 1 ಗಂಟೆಗೂ ಅಧಿಕ ಸಮಯ ಅವರ ಪಾತ್ರವಿರಲಿದೆ. ರಾಜಮಂಡ್ರಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ಉಪಾಸನ ಪೊಟೋಗಳು ವೈರಲ್ ಆಗಿದೆ. ರೆಡ್ ಕಲರ್ ಟಾಪ್ ನಲ್ಲಿ ಕಾಣಿಸಿಕೊಂಡ ಉಪಾಸನ ಮಾಸ್ಕ್ ಧರಿಸಿದ್ದು, ಸ್ಟೈಲಿಶ್ ಕನ್ನಡಕವನ್ನೂ ಸಹ ಹಾಕಿಕೊಂಡಿದ್ದರು.

ಇನ್ನೂ ಚಿರಂಜೀವಿಗೆ ಜೋಡಿಯಾಗಿ ಕಾಜಲ್ ಅಗರ್‌ವಾಲ್ ನಟಿಸುತ್ತಿದ್ದು, ರಾಮ ಚರಣ್ ಜೊತೆಗೆ ನಟಿ ಪೂಜಾ ಹೆಗ್ಡೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ಇನ್ನೂ ಈ ಚಿತ್ರ ಮೇ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ನಿರಂಜನ್ ರೆಡ್ಡಿ ಹಾಗೂ ರಾಮ್‌ಚರಣ್ ತೇಜ್ ಜಂಟಿಯಾಗಿ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ.

Trending

To Top