ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಮೆಗಾ ಕುಟುಂಬದ ಸೊಸೆ ಉಪಾಸನಾ….

ಮೆಗಾ ಫ್ಯಾಮಿಲಿಯ ಸೊಸೆ ಉಪಾಸನಾ ಸದಾ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿರುತ್ತಾರೆ. ನಟ ರಾಮ್ ಚರಣ್ ರವರ ಪತ್ನಿ ಉಪಾಸನಾ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಸುಮಾರು 150 ಕ್ಕೂ ಅಧಿಕ ವೃದ್ದಾಶ್ರಮಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ ಉಪಾಸನಾ.

ಸದಾ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ನಟಿ ಉಪಾಸನಾ ಒಳ್ಳೆಯ ಹೆಸರನ್ನು ಗಳಿಸಿಕೊಂಡಿದ್ದಾರೆ. ಮೆಗಾಸ್ಟಾರ್‍ ಕೊನಿದೆಲಾ ಕುಟುಂವದ ಗೌರವ ಪ್ರತಿಷ್ಟೆಯನ್ನು ಮುಂದುವರೆಸುತ್ತಿದ್ದಾರೆ. ಅಪೊಲೋ ಆಸ್ಪತ್ರೆಯ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದರೂ ಸಹ ಮೆಗಾ ಇವೆಂಟ್ಸ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇವುಗಳ ಜೊತೆ ಸದಾ ಒಂದಲ್ಲ ಒಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ವನ್ಯ ಜೀವಿಗಳನ್ನು ದತ್ತು ತೆಗೆದುಕೊಂಡದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಉಪಾಸನಾ ರವರಿಗೆ ಸಾಮಾಜಿಕ ಸೇವೆ ಎಂದರೇ ತುಂಬಾ ಇಷ್ಟ. ಈ ನಡುವೆ ಸೋಷಿಯಲ್ ಮಿಡೀಯಾಗಳಲ್ಲಿ ಹೆಲ್ತ ಟಿಪ್ಸ್ ಸಹ ನೀಡುತ್ತಿರುತ್ತಾರೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಅನೇಕ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹ ಸಹಾಯ ಮಾಡಿದ್ದಾರೆ. ಇದೀಗ ಉಪಾಸನಾ ಹಮ್ಮಿಕೊಂಡ ಕೆಲ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ಹೊರಬಂದಿದೆ.

ಉಪಾಸನಾ ಸುಮಾರು 150 ವೃದ್ದಾಶ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಬಿಲಿಯನ್ ಹಾರ್ಟ್ಸ್ ಬೀಟಿಂಗ್ ಎಂಬ ಫೌಂಡೇಷನ್ ನೊಂದಿಗೆ ಸೇರಿ ಉಪಾಸನಾ ವೃದ್ದಾಶ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ. ಈ ಕುರಿತು ವೃದ್ದಾಶ್ರಮದಲ್ಲಿ ಉಪಾಸನಾ ಹಿರಿಯರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿರುವ ಕೆಲವು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Previous articleಟಗರು ಹಾಡಿಗೆ ಶಿವಣ್ಣ ಭರ್ಜರಿ ಸ್ಟೆಪ್ಸ್, ಮಂಗಳೂರು ಕಮಿಷನರ್ ಹಾಡಿದ ಹಾಡಿಗೆ ಶಿವಣ್ಣ ಡ್ಯಾನ್ಸ್
Next articleಅಪ್ಪು ಮೆಚ್ಚಿದ ಮ್ಯಾನ್ ಆಫ್ ದಿ ಮ್ಯಾಚ್ ಸಿನೆಮಾದ ಟ್ರೈಲರ್ ರಿಲೀಸ್!