Karnataka

(video)ಉಡುಪಿ ಶ್ರೀ ಕೃಷ್ಣ ಪೂಜೆ – ಆನ್‍ಲೈನ್‍ನಲ್ಲಿಯೇ ದೇವರ ದರ್ಶನ, ಆರಾಧನೆ! ಅದ್ಭುತ ವಿಡಿಯೋ ನೋಡಿ

ಇಂದು ಕೃಷ್ಣಾಜನ್ಮಾಷ್ಟಮಿ ಹಬ್ಬ, ಹಿಂದೂ ಧರ್ಮದವರ ಪಾಲಿಗೆ ಹಾಗೂ ಶ್ರೀಕೃಷ್ಣನ ಭಕ್ತಾದಿಗಳಿಗೆ ಬಹಳ ವಿಶೇಷವಾದ ಹಬ್ಬ. ಈ ಕರೊನಾ ಭೀತಿ ಇಲ್ಲದೆ ಇದ್ದಿದ್ದರೆ ಇಂದು ಭಾರತ ಮಾತ್ರವಲ್ಲದೆ ವಿಶ್ವದ ಹಲವೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿರುತ್ತಿತ್ತು. ಪುಟ್ಟ ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ, ಪುಟ್ಟ ಪುಟ್ಟ ಹೆಜ್ಜೆ ಇಡಿಸಿ ಪೂಜೆ ಮಾಡಿ ಸಿಹಿ ತಿಂಡಿಗಳನ್ನು ತಯಾರಿಸಿ ಆಚರಣೆ ಮಾಡುತ್ತಾರೆ. ಎಲ್ಲವೂ ನಾರ್ಮಲ್ ಆಗಿ ಇದ್ದಿದ್ದರೆ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ವಿಶೇಷವಾದ ಕಾಂಟೆಸ್ಟ್ ಗಳು ನಡೆಯುತ್ತಿದ್ದವು. ಈ ಕೆಳಗಿನ ವಿಡಿಯೋ ನೋಡಿ
ದೇವಸ್ಥಾನಗಳಲ್ಲಿ ಕೃಷ್ಣನ ಸ್ಮರಣೆ ನಡೆಯುತ್ತಿತ್ತು. ಆದರೆ ಕೊರೊನಾ ವೈರಸ್ ಭಯದಿಂದ ಆನ್ ಲೈನ್ ಮೂಲಕವೇ ದೇವರ ದರ್ಶನ ಮತ್ತು ಕೃಷ್ಣನ ಸ್ಮರಣೆ ನಡೆಯಲಿದೆ.ಈ ವಿಚಾರವಾಗಿ ಇಸ್ಕಾನ್ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ನರಹರಿ ಚೈತನ್ಯದಾಸ್ ಅವರು ಮಾತನಾಡಿ, ಕೊರೊನಾ ಭಯದಿಂದ ಇಸ್ಕಾನ್ ಸೇರಿದಂತೆ ಹಲವಾರು ಕೃಷ್ಣನ ದೇವಸ್ಥಾನಗಳಲ್ಲಿ ಆನ್‍ಲೈನ್‍ ಮೂಲಕವೇ ಪೂಜೆಗಳ ಲೈವ್ ದರ್ಶನ ನಡೆಯಲಿದೆ. ನಾಳೆ ದೇವಸ್ಥಾನಗಳಿಗೆ ಹೆಚ್ಚಿನ ಭಕ್ತರು ಬರುವ ಸಾಧ್ಯತೆ ಇರುವುದರಿಂದ ಜನರಿಗೆ ಆನ್‍ಲೈನ್ ಪೂಜೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ.
ಮಂಗಳವಾರ ಮತ್ತು ಬುಧವಾರ ಕೃಷ್ಣಾಷ್ಟಮಿ ಪೂಜೆ ನಡೆಯಲಿದೆ, 20 ಗಂಟೆಗಳ ಕಾಲ ಆನ್‍ಲೈನ್‍ನಲ್ಲಿ ಪೂಜೆಯನ್ನು ನಿರಂತರವಾಗಿ ಜನರು ವೀಕ್ಷಿಸಬಹುದು. ತೆಪ್ಪೋತ್ಸವ, ಪಂಚಗವ್ಯ ಅಭಿಷೇಕ, ಉಯ್ಯಾಲೆ ಸೇವೆ ಎಲ್ಲವನ್ನು ಆನ್‍ಲೈನ್‍ ಮೂಲಕವೇ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇಂದು ಕೃಷ್ಣಾಜನ್ಮಾಷ್ಟಮಿ ಹಬ್ಬ, ಹಿಂದೂ ಧರ್ಮದವರ ಪಾಲಿಗೆ ಹಾಗೂ ಶ್ರೀಕೃಷ್ಣನ ಭಕ್ತಾದಿಗಳಿಗೆ ಬಹಳ ವಿಶೇಷವಾದ ಹಬ್ಬ. ಈ ಕರೊನಾ ಭೀತಿ ಇಲ್ಲದೆ ಇದ್ದಿದ್ದರೆ ಇಂದು ಭಾರತ ಮಾತ್ರವಲ್ಲದೆ ವಿಶ್ವದ ಹಲವೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿರುತ್ತಿತ್ತು. ಪುಟ್ಟ ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ, ಪುಟ್ಟ ಪುಟ್ಟ ಹೆಜ್ಜೆ ಇಡಿಸಿ ಪೂಜೆ ಮಾಡಿ ಸಿಹಿ ತಿಂಡಿಗಳನ್ನು ತಯಾರಿಸಿ ಆಚರಣೆ ಮಾಡುತ್ತಾರೆ. ಎಲ್ಲವೂ ನಾರ್ಮಲ್ ಆಗಿ ಇದ್ದಿದ್ದರೆ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ವಿಶೇಷವಾದ ಕಾಂಟೆಸ್ಟ್ ಗಳು ನಡೆಯುತ್ತಿದ್ದವು.

Trending

To Top