News

Udgharsha review – ಬಹಳ ವರ್ಷಗಳ ನಂತರ ಕನ್ನಡದಲ್ಲಿ ಒಂದು ಅದ್ಭುತ ಥ್ರಿಲ್ಲರ್, ಸಸ್ಪೆನ್ಸ್ ಚಿತ್ರ!

udgharsha-review-kannada

ಇವತ್ತು ಈ ವರ್ಷದ ಬಹು ನಿರೀಕ್ಷೆಯ ಚಿತ್ರವಾದ UDGHARSHA ಎಲ್ಲೆಡೆ ಬಿಡುಗಡೆ ಆಗಿದೆ. UDGHARSHA ಚಿತ್ರ, ಕನ್ನಡ ಅಲ್ಲದೆ, ತೆಲುಗು ಹಾಗು ಮಲಯಾಳಂ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದೆ. ಈ ಚಿತ್ರವನ್ನು ಕನ್ನಡದ ಹಿರಿಯ ಅದ್ಭುತ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ನೋಡಿದ ಪ್ರೇಕ್ಷಕ ಪ್ರಭು, ಚಿತ್ರಕ್ಕೆ, ಚಿತ್ರ ತಂಡಕ್ಕೆ, ನಿರ್ದೇಶಕರಿಗೆ ಭೇಷ್ ಎಂದಿದ್ದಾರೆ. ಇವತ್ತು ಮುಂಜಾನೆಯಿಂದ ಇಡೀ ಕರ್ನಾಟಕದಲ್ಲಿ udgharsha ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರ್ನಾಟಕದಲ್ಲಿ ಸುಮಾರು 150 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರತ್ರಿಕ್ರಿಯೆ ದೊರೆಯುತ್ತಿದೆ.
UDGHARSHA ಚಿತ್ರದಲ್ಲಿ ಖ್ಯಾತ ಬಾಲಿವುಡ್ ಸೆಲೆಬ್ರಿಟಿ ಠಾಕೂರ್ ಅನೂಪ್ ಸಿಂಗ್ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇವರಿಗೆ ಕನ್ನಡ ಭಾಷೆ ಬಗ್ಗೆ ಅಷ್ಟೊಂದು ಹಿಡಿತ ಇಲ್ಲದಿದ್ದಾರು, ಚಿತ್ರದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರು ಠಾಕೂರ್ ಅವರಿಂದ ಅದ್ಭುತ ವಾಗಿ ಕನ್ನಡ ಮಾತಾಡಿಸಿದ್ದಾರೆ ಹಾಗು ಠಾಕೂರ್ ಅವರು ಕೂಡ ಪ್ರತಿ ಒಂದು ಫ್ರೆಮ್ ನಲ್ಲಿ ಕೂಡ ಅಭೂತವಾದ ಪರ್ಫಾರ್ಮೆನ್ಸ್ ಮಾಡಿದ್ದಾರೆ. ಇತ್ತೀಚಿಗೆ ಠಾಕೂರ್ ಅವರು ಯಜಮಾನ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಈಗ ಒಬ್ಬ ಕಂಪ್ಲೀಟ್ ಪ್ಯಾಕೇಜ್ ಇರುವ ಹೀರೋ ಆಗಿ UDGHARSHA ಚಿತ್ರದಲ್ಲಿ ಮಿಂಚಿದ್ದಾರೆ.
UDGHARSHA ಚಿತ್ರದ ಮತ್ತೊಂದು ಆಕರ್ಷಣೆ ಎಂದರೆ ಅದು ತಾನ್ಯಾ ಹೋಪ್. ಇವರ ನಟನೆಗೆ ಕರ್ನಾಟಕದ ಜನ ಮನ ಸೋತಿದ್ದಾರೆ. ಚಿತ್ರದುದ್ದಕ್ಕೂ ಠಾಕೂರ್ ಹಾಗು ತಾನ್ಯಾ ಹೋಪ್ ಅವರ ಕೆಮಿಸ್ಟ್ರಿ ಬಹಳ ಚನ್ನಾಗಿ ವರ್ಕ್ ಔಟ್ ಆಗಿದೆ. ಕನ್ನಡ ನಟಿ ಹರ್ಷಿಕಾ ಪೂಣಚ್ಚ ಅವರು ಕೂಡ UDGHARSHA ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ UDGHARSHA ಚಿತ್ರದಲ್ಲಿ ಪ್ರತಿ ಒಂದು ಪಾತ್ರವನ್ನು ಕೂಡ ಸುನಿಲ್ ಕುಮಾರ್ ದೇಸಾಯಿ ಅವರು ಬಹಳ ಅದ್ಭುತವಾಗಿ ಆಯ್ಕೆ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ನಿಮಗೆ ಯಾವ ಪಾತ್ರ ಕೂಡ ಬೋರ್ ಮಾಡುವುದಿಲ್ಲ!
ಇನ್ನ್ನು ಚಿತ್ರದ ನಿರ್ದೇಶನ! ಸುನಿಲ್ ಕುಮಾರ್ ದೇಸಾಯಿ ಅವರಿಗೆ ಒಂದು ಸಲಾಂ! ಬಹಳ ವರ್ಷಗಳ ನಂತರ ನಮ್ಮ ಕನ್ನಡದಲ್ಲಿ ಒಂದು ಅದ್ಭುತ , ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬಂದಿದೆ. UDGHARSHA ಚಿತ್ರದ ಶುರುವಿನಿಂದ ಕೊನೆಯ ವರೆಗೆ, ನಿಮಗೆ ಸಕತ್ ಥ್ರಿಲ್, ಮತ್ತು ಸಸ್ಪೆನ್ಸ್ ಕೊಡುತ್ತದೆ. ಸುನಿಲ್ ಕುಮಾರ್ ದೇಸಾಯಿ ಅವರು ಹಿರಿಯ ನಿರ್ದೇಶಕರಾಗಿದ್ದರೂ ಈಗಿನ ಕಾಲದ ಪ್ರೇಕ್ಷಕ ಏನನ್ನು ಕೇಳುತ್ತಾನೆ, ಯಾವುದನ್ನೂ ಇಷ್ಟ ಪಡುತ್ತಾನೆ ಎಂಬುವುದನ್ನು ಚನ್ನಾಗಿ ತಿಳಿದು ಕೊಂಡಿದ್ದಾರೆ.! ಸುನಿಲ್ ಕುಮಾರ್ ದೇಸಾಯಿ ಅವರ ಅದ್ಭುತ ನಿರ್ದೇಶನಕ್ಕೆ ನಮ್ಮ ಕಡೆ ಒಂದು ಸಲಾಂ! ಒಟ್ಟಿನಲ್ಲಿ UDGHARSHA ಒಂದು ಪಕ್ಕಾ ಥ್ರಿಲ್ಲರ್ ಚಿತ್ರ! ಪ್ರತಿ ಒಂದು ಸೀನ್ ನೋಡಿದ್ರೂ ಕೂಡ ನಿಮ್ಮ ಮೈ ಜುಮ್ ಎನಿಸುತ್ತದೆ! ತಪ್ಪದೆ ಇಂತಹ ಒಳ್ಳೆಯ ಕನ್ನಡ ಚಿತ್ರವನ್ನು ನೋಡಿ! ಇಂದೇ ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ UDGHARSHA ಚಿತ್ರವನ್ನು ಕುಟುಂಬ ಸಮೇತರಾಗಿ ಹೋಗಿ ನೋಡಿರಿ! ಒಂದೊಳ್ಳೆ ಕನ್ನಡ ಚಿತ್ರವನ್ನು ಮಿಸ್ ಮಾಡ್ಕೋಬೇಡಿ!

Trending

To Top