ಹೈದರಾಬಾದ್: ಕಳೆದ ಒಂದು ವರ್ಷದಿಂದ ತಮ್ಮ ನೆಚ್ಚಿನ ನಟನ ಸಿನೆಮಾಗಾಗಿ ಕಾಯುತ್ತಿರುವ ಪ್ರಭಾಸ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್. ಹೌದು 2021 ರಲ್ಲಿ ಪ್ರಭಾಸ್ ಅಭಿನಯದ 2 ಪವರ್ ಪುಲ್ ಚಿತ್ರಗಳು ರಿಲೀಸ್ ಆಗಲಿದೆ.
2009 ರಲ್ಲಿ ತೆರೆಕಂಡ ಸಾಹೋ ಸಿನೆಮಾದ ನಂತರ ಪ್ರಭಾಸ್ ನಟನೆಯ ಸಿನೆಮಾ ಬರಲಿಲ್ಲ. ಇನ್ನೂ ತಮ್ಮ ಸ್ಟಾರ್ ನಟ ಸಿನೆಮಾಗಾಗಿ ಒಂದು ವರ್ಷದಿಂದ ಕಾತುರದಿಂದ ಕಾಯುತ್ತಿದ್ದು, ಅಭಿಮಾನಿಗಳು ಇದು ಗುಡ್ ನ್ಯೂಸ್ ಎಂತಲೇ ಹೇಳಬಹುದು. ರೊಮ್ಯಾಂಟಿಕ್ ಲವ್ ಸ್ಟೋರಿಯುಳ್ಳ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ-ಶ್ಯಾಮ್ ಚಿತ್ರೀಕರಣ ಮುಗಿದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಇನ್ನೂ ಈ ಸಿನೆಮಾ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯೆತೆಯಿದೆ ಎನ್ನಲಾಗುತ್ತಿದೆ. ಇನ್ನೂ ಈಗಾಗಲೇ ಪೋಸ್ಟರ್ ಮೂಲಕವೇ ಹವಾ ಸೃಷ್ಟಿ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಸಲಾರ್ ಚಿತ್ರವೂ ಸಹ 2021 ವರ್ಷದ ಅಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಪ್ರಭಾಸ್ ರವರು ಒಂದು ಸಿನೆಮಾ ಒಪ್ಪಿಕೊಂಡ ಮೇಲೆ ಅದು ಮುಕ್ತಾಯವಾಗುವ ವರೆಗೆ ಬೇರೊಂದು ಚಿತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಸುಮಾರು ವರ್ಷಗಳಿಂದ ಇದೇ ಪದ್ದತಿಯನ್ನು ಅಳವಡಿಸಿಕೊಂಡು ಬರುತ್ತಿದ್ದ ಪ್ರಭಾಸ್ ಮೊದಲ ಬಾರಿಗೆ ಈ ನಿಯಮವನ್ನು ತಾವೇ ಬ್ರೇಕ್ ಮಾಡಿದ್ದಾರೆ. ಪ್ರಭಾಸ್ ಈ ಬಾರಿ ಜೊತೆ ಜೊತೆಯಾಗಿ ಆದಿಪುರುಷ್ ಹಾಗೂ ಸಲಾರ್ ಸಿನೆಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ. ಇನ್ನೂ ಆದಿಪುರುಷ್ ಭಾರಿ ಬಜೆಟ್ ನ ಸಿನೆಮಾ ಆಗಿದ್ದು, ಚಿತ್ರೀಕರಣ ಹಾಗೂ ಚಿತ್ರದ ಬಿಡುಗಡೆ ತಡವಾಗಲಿದೆ. ಆದರೆ ಸಲಾರ್ ಚಿತ್ರ 2021 ವರ್ಷದ ಅಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
