Film News

ಡಿ-ಬಾಸ್ ಹುಟ್ಟುಹಬ್ಬಕ್ಕೆ ಎರಡು ಗುಡ್ ನ್ಯೂಸ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬದ ಇದೇ ಫೆಬ್ರವರಿ 16 ರಂದು ಸಂಜೆ ವೇಳೆಗೆ ರಾಬರ್ಟ್ ಚಿತ್ರ ತಂಡದಿಂದ ಎರಡು ಗುಡ್ ನ್ಯೂಸ್ ಅಭಿಮಾನಿಗಳಿಗೆ ದೊರೆಯಲಿದೆ ಎಂಬ ಮಾಹಿತಿ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.

ರಾಬರ್ಟ್ ಚಿತ್ರದ ಎರಡು ಗುಡ್ ನ್ಯೂಸ್ ನೀಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿದ್ದರು. ಅದರಂತೆ ದರ್ಶನ್ ಹುಟ್ಟುಹಬ್ಬದ ದಿನದಂದು ಕನ್ನಡ ಹಾಗೂ ತೆಲುಗು ವರ್ಷನ್ ಟ್ರೈಲರ್ ಬಿಡುಗಡೆಯ ಜೊತೆಗೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಎಂಬ ಹಾಡಿನ ತೆಲುಗು ವರ್ಷನ್ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.

ರಾಬರ್ಟ್ ಚಿತ್ರವನ್ನು ತೆಲುಗು ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲು ಅಲ್ಲಿನ ನಿರ್ಮಾಪಕರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಹಾಗೂ ಈ ವಿವಾದ ಬಗೆಹರಿದಿದ್ದು, ಭರ್ಜರಿಯಾಗಿ ತೆಲುಗು ರಾಷ್ಟ್ರಗಳಲ್ಲೂ ಸಹ ರಾಬರ್ಟ್ ಚಿತ್ರ ಬಿಡುಗಡೆಯಾಗುವುದಾಗಿ ತಿಳಿದು ಬಂದಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಇದೀಗ ರಾಬರ್ಟ್ ಚಿತ್ರದ ಕನ್ನಡ ಹಾಗೂ ತೆಲುಗು ಟ್ರೈಲರ್ ಬಿಡುಗಡೆ ಹಾಗೂ ಜೈ ಶ್ರೀರಾಮ ತೆಲುಗು ವರ್ಷನ್ ಹಾಡು ಬಿಡುಗಡೆಯಾಗಲಿದೆ ಎಂಬ ಶುಭಸುದ್ದಿಯನ್ನು ನೀಡಿದ್ದಾರೆ.

ಇನ್ನೂ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್‌ಗೌಡ ಬಂಡವಾಳ ಹಾಕಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್, ಪ್ರಮುಖ ಪಾತ್ರಗಳಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವು ಖ್ಯಾತ ನಟರು ಬಣ್ಣ ಹಚ್ಚಿದ್ದಾರೆ.

Trending

To Top