ಹೈದರಾಬಾದ್: ನಟ ಹಾಗೂ ಜನಸೇನ ಪಕ್ಷದ ಮುಖಂಡ ಪವನ್ ಕಲ್ಯಾಣ್ ವಕೀಲ್ ಸಾಭ್ ಚಿತ್ರದ ನಂತರ ಮಲಾಯಳಂ ಚಿತ್ರವೊಂದರ ಡಬ್ಬಿಂಗ್ ನಲ್ಲಿ ಅಭಿನಯಿಸುತ್ತಿದ್ದು, ಇದೀಗ ಆ ಚಿತ್ರದಲ್ಲಿ ನಿರ್ದೇಶಕ ತ್ರಿವಿಕ್ರಮ್ ರವರು ಸಹ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮಲಯಾಳಂ ಭಾಷೆಯಲ್ಲಿ ಹಿಟ್ ಹೊಡೆದ ಅಯ್ಯಪ್ಪನುಮ್ ಕೋಷಿಯಂ ಎಂಬ ಚಿತ್ರದ ಡಬ್ಬಿಂಗ್ ಕುರಿತಂತೆ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗಿತ್ತು. ಈ ಚಿತ್ರ ಸುಮಾರು ಹಿರೋಗಳ ಬಳಿ ಹೋಗಿದ್ದು, ಕೊನೆಯದಾಗಿ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಇಬ್ಬರ ಕಾಂಬಿನೇಷನ್ ವರ್ಕೌಟ್ ಆಗಿದ್ದು, ಈ ಚಿತ್ರದ ಮೂಹೂರ್ತ ಸಹ ನೆರವೇರಿದೆ. ಇನ್ನೂ ಈ ಚಿತ್ರದ ನಿರ್ದೇಶನದಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಸಹ ಭಾಗಿಯಾಗಲಿದ್ದು, ಇನಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಇನ್ನೂ ನಟ ಪವನ್ ಕಲ್ಯಾಣ್ ಅಭಿನಯದ ಗಬ್ಬರ್ ಸಿಂಗ್ ಸಿನೆಮಾ ಟಾಲಿವುಡ್ ನಲ್ಲಿ ಭಾರಿ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ನಂತರ ಪವನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೇ ಇದೀಗ ಅಯ್ಯಪ್ಪನುಮ್ ಕೋಷಿಯಂ ಚಿತ್ರದಲ್ಲಿ ಪವರ್ಪುಲ್ ಪೊಲೀಸ್ ಅಧಿಕಾರಿಯಾಗಿ ಪವನ್ ಕಾಣಿಸಿಕೊಳ್ಳಲಿದ್ದು, ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಾಗುವಂತೆ ಮಾಡಿದೆ.
ಇನ್ನೂ ಈಗಾಗಲೇ ವಕೀಲ್ ಸಾಭ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೆ ಟಾಲಿವುಡ್ ಸ್ಟಾರ್ ನಿರ್ದೇಶಕರೊಬ್ಬರು ಪವನ್ ಸಿನೆಮಾದಲ್ಲಿ ಭಾಗಿಯಾಗಿರುವುದು ಅಭಿಮಾನಿಗಳಿಗೆ ಮತಷ್ಟು ಸಂತಸ ತಂದಿದೆ.
