Film News

ವಕೀಲ್ ಸಾಭ್ ರನ್ನು ಭೇಟಿಯಾದ ಆದಿವಾಸಿ ಜನಾಂಗ

ಹೈದರಾಬಾದ್: ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ವಕೀಲ್ ಸಾಭ್ ಸಿನೆಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ನಟ ಪವನ್ ಕಲ್ಯಾಣ್ ರನ್ನು ಆದಿವಾಸಿಗಳ ತಂಡವೊಂದು ಭೇಟಿ ಮಾಡಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತಡವಾಗಿದ್ದ ವಕೀಲ್ ಸಾಭ್ ಚಿತ್ರದ ಶೂಟಿಂಗ್ ಇದೀಗ ಬಿರುಸಿನಲ್ಲಿ ನಡೆಯುತ್ತಿದೆ. ಸಿನೆಮಾ ಬೇಗ ಮುಗಿಸುವ ಹಿನ್ನೆಲೆಯಲ್ಲಿ ನಟ ಪವನ್ ಕಲ್ಯಾಣ್ ರವರು ಸಹ ಹೆಚ್ಚಿನ ಸಮಯ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಟ ಪವನ್ ಕಲ್ಯಾಣ್ ರವರನ್ನು ಭೇಟಿಯಾಗಲು ರಾಜಕೀಯ ಮುಖಂಡರು, ನಿರ್ಮಾಪಕರುಗಳು, ಅಭಿಮಾನಿಗಳು ಭೇಟಿ ನೀಡುವುದು ಸಹಜ. ಆದರೆ ಇದೀಗ ಆದಿವಾಸಿ ತಂಡವೊಂದು ಪವನ್ ರವರನ್ನು ಭೇಟಿ ಮಾಡಿದೆ.

ಇನ್ನೂ ನಟ ಪವನ್ ಕಲ್ಯಾಣ್ ರವರು ಆದಿವಾಸಿ ಜನಾಂಗದೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ಇದೇ ವೇಳೆ ಆದಿವಾಸಿ ಮಹಿಳೆಯೊಬ್ಬರು ಹಾಡೊಂದನ್ನು ಹಾಡಿದ್ದು, ಈ ಹಾಡನ್ನು ಕೇಳಿ ಪವನ್ ಸಂತಸಪಟ್ಟಿದ್ದಾರೆ. ಜೊತೆಗೆ ಹಾಡನ್ನು ಕೇಳುತ್ತಿದ್ದಂತೆ ಬಿಬೂತಿ ಭೂಷಣ್ ಬಂಡೋಪಾಧ್ಯಯ ರವರು ರಚಿಸಿರುವಂತಹ ವನವಾಸಿ ಎಂಬ ಹಾಡು ನೆನಪಿಗೆ ಬಂದಿದೆ ಎಂದು ಪವನ್ ಹೇಳಿದ್ದಾರೆ.

ಪ್ರಸ್ತುತ ವಕೀಲ್ ಸಾಭ್ ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ನಂತರ ಪವನ್ ಮಲಯಾಳಂ ಚಿತ್ರದ ರಿಮೇಕ್ ಅಯ್ಯಪ್ಪನುಂ ಕೋಶಿಯಂ ಎಂಬ ಸಿನೆಮಾದಲ್ಲಿ ನಟಿಸಲಿದ್ದಾರೆ.

Trending

To Top