2018 ಸಾಲಿನಲ್ಲಿ ಯಾವ ನಟ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಗೊತ್ತ! ಯಾರು ಊಹಿಸದ ವಿಷ್ಯ

kannada-hero
kannada-hero

ಇವತ್ತು 2018 ಸಾಲಿನ ಕೊನೆಯ ದಿನ. ಈ ವರ್ಷ ನಮ್ಮ ಕನ್ನಡದಲ್ಲಿ ಸುಮಾರು 220 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಇದೆ ಮೊದಲ ಬಾರಿಗೆ ಒಂದು ವರ್ಷದಲ್ಲಿ ಸುಮಾರು 220 ಕ್ಕೂ ಹೆಚ್ಚು ಚಿತ್ರ ಕನ್ನಡದಲ್ಲಿ ಬಿಡುಗಡೆ ಆಗಿದೆ. ವಿಶೇಷ ಏನಪ್ಪಾ ಅಂದರೆ ಈ ವರ್ಷ ಸುಮಾರು 40 % ಕ್ಕೂ ಹೆಚ್ಚು ಚಿತ್ರಗಳು ಗೆದ್ದಿವೆ. ಇದು ನಿಜಕ್ಕೂ ಖುಷಿ ಪಡುವ ವಿಷ್ಯ ಎಂದೇ ಹೇಳಬಹುದು. ಈ ವರ್ಷ ಯಾವ ಕನ್ನಡ ನಟ ಎಷ್ಟು ಸಂಭಾವನೆ ಪಡೆದಿದ್ದಾರೆ? ಯಾರು ಈ ಸಾಲಿನ ಟಾಪ್ ನಟ, ಅತೀ ಹೆಚ್ಚು ಸಂಭಾವನೆ ಪಡೆಯಿರುವ ನಟ ಯಾರು ಗೊತ್ತ! ಯಾರು ಈ ಭಾರಿ ಕನ್ನಡದಲ್ಲಿ ಟಾಪ್ ಹೀರೋ? ಯಾವ ನಟನ ಸಿನಿಮಾ ಬ್ಲಾಕ್ ಬಸ್ಟರ್? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷ ಅತೀ ಹೆಚ್ಚು ಗಳಿಕೆಯ ಚಿತ್ರ ವೆಂದರೆ ಅದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ KGF . ಈ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ 12 ಕೋಟಿ. ಈ ಚಿತ್ರಕ್ಕಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಅವರು ಪಟ್ಟಿರುವ ಶ್ರಮಕ್ಕೆ, ಅವರ ಅದ್ಭುತ ಕೆಲಸಕ್ಕೆ ಒಂದು ಸಲಾಂ! ಸದ್ಯ KGF ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. 100 ಕೋಟಿ ದಾಟಿದ ಕನ್ನಡದ ಏಕೈಕ ಚಿತ್ರ KGF ಆಗಿದೆ. ಪ್ರತಿ ವರ್ಷ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕನ್ನಡದ ಏಕೈಕ ನಟ ಅಂದರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಸಿನಿಮಾ ಕೂಡ ಬರಲಿಲ್ಲ ಆದರೂ ದರ್ಶನ್ ಅವರ ಹವಾ ಕಮ್ಮಿ ಇರಲಿಲ್ಲ. ದರ್ಶನ್ ಅವರು ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರಕ್ಕೆ ಪಡೆದಿರುವ ಸಂಭಾವನೆ ಬರೋಬ್ಬರಿ 12 ಕೋಟಿ. ಸುಮಾರು 3 ರಿಂದ 4 ವರ್ಷಗಳಿಂದ ದರ್ಶನ್ ಅವರೇ ಕನ್ನಡ ನಟರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಕುರುಕ್ಷೇತ್ರ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಈ ವರ್ಷದ ಮತ್ತೊಂದು ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಚಿತ್ರ ವೆಂದರೆ ಅದು ಟಗರು. ಈ ಚಿತ್ರಕ್ಕಾಗಿ ನಮ್ಮ ಶಿವಣ್ಣ ಅವರು ಬರೋಬ್ಬರಿ 8 ಕೋಟಿ ಸಂಭಾವನೆ ಪಡೆದಿದ್ದಾರೆ. ಟಗರು ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನ ಜೊತೆ ಡಾಲಿ ಧನಂಜಯ್ ಹಾಗು ವಶಿಷ್ಠ ಅವರು ನಟಿಸಿದ್ದಾರೆ. ಟಗರು ಚಿತ್ರ ಗಳಿಕೆ ಯಲ್ಲಿ ದಿ ವಿಲನ್ ಚಿತ್ರವನ್ನು ಹಿಂದಿಕ್ಕಿದೆ. ಟಗರು ಚಿತ್ರ ಬರೋಬ್ಬರಿ 45 ಕೋಟಿ ಗಲ್ಲಾ ಪೆಟ್ಟಿಗೆ ಯಲ್ಲಿ ಕೊಳ್ಳೆ ಹೊಡೆದಿದೆ. 2018 ಸಾಲಿನ ಮತ್ತೊಂದು ದೊಡ್ಡ ಬಜೆಟಿನ ಚಿತ್ರ ಎಂದರೆ ದಿ ವಿಲನ್. ದಿ ವಿಲನ್ ಚಿತ್ರಕ್ಕಾಗಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರೋಬ್ಬರಿ 8 ಕೋಟಿ ಸಂಭಾವನೆ ಪಡೆದಿದ್ದಾರೆ. ಇದೆ ಚಿತ್ರಕ್ಕೆ ನಮ್ಮ ಶಿವಣ್ಣ ಅವರು ಕೂಡ ಬರೊಬ್ಬರು 8 ಕೋಟಿ ಸಂಭಾವನೆ ಪಡೆದಿದ್ದಾರೆ. ದಿ ವಿಲನ್ ಚಿತ್ರದ ಒಟ್ಟು ಗಳಿಕೆ ಸುಮಾರು 30 ಕೋಟಿ.
ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ತಮ್ಮ ನಟಸಾರ್ವಭೌಮ ಚಿತ್ರಕ್ಕಾಗಿ ಬರೋಬ್ಬರಿ 8 ಕೋಟಿಯ ಸಂಭಾವನೆ ಪಡೆದಿದ್ದಾರೆ. ಈ ಚಿತ್ರವನ್ನು ಪವನ್ ವಡೆಯರ್ ಅವರ ನಿರ್ದೇಶನ ಮಾಡಿದ್ದಾರೆ, ನಟಸಾರ್ವಭೌಮ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ. ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಆರೆಂಜ್ ಚಿತ್ರಕ್ಕಾಗಿ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆದಿದ್ದಾರೆ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡದ ಬ್ಯುಸಿ ನಟ. ಇವರ ಡೇಟ್ ಗಳು 2020 ತನಕ ಫುಲ್ ಆಗಿದೆ. ವರ್ಷಕ್ಕೆ 2 ರಿಂದ 3 ಸಿನಿಮಾಗಳು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾಡುತ್ತಾರೆ.

Previous article(video)ಸಕತ್ ವೈರಲ್ ಆಗಿದೆ ನಟಸಾರ್ವಭೌಮ ಚಿತ್ರದ ಓಪನ್ ದಿ ಬಾಟಲ್ ಹಾಡು, ಸಕತ್ ಆಗಿದೆ ವಿಡಿಯೋ ನೋಡಿ
Next article(video)ಕನ್ನಡದ ಹಿರಿಯ ಕಲಾವಿದ ಲೋಕನಾಥ್ ಇನ್ನಿಲ್ಲ! ಕಣ್ಣೀರಿಟ್ಟ ಚಿತ್ರರಂಗ