ಟಾಂ ಅಂಡ್ ಜೆರ್ರಿ ಹೊಸ ವರ್ಷನ್ ರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು: ವಿಶ್ವ ಪ್ರಸಿದ್ದಿ ಪಡೆದಿರುವ ಪುಟಾಣಿಗಳಿಂದ ವೃದ್ದರವೆರೆಗೂ ಇಷ್ಟಪಟ್ಟು ನೋಡುವಂತಹ ಕಾಮಿಡಿ ಕಾರ್ಟೂನ್ ಸೀರಿಸ್ ಟಾಂ ಅಂಡ್ ಜೆರ್ರಿ ಚಿತ್ರ ಫೆ.19 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

ಹಾಲಿವುಡ್ ನ ನಿರೀಕ್ಷೆಯ ಸಿನೆಮಾಗಳಲ್ಲಿ ಒಂದಾದ ಟಾಂ ಅಂಡ್ ಜೆರ್ರಿ ಚಿತ್ರ ಭಾರತದಲ್ಲಿ ರಿಲೀಸ್ ಆಗುವ ದಿನಾಂಕ ನಿಗಧಿಯಾಗಿದ್ದು ಫೆಬ್ರವರಿ 19 ರಂದು ಬಿಡುಗಡೆಯಾಗಲಿದೆ. ಇನ್ನೂ ಈ ಚಿತ್ರವು ಇಂಗ್ಲೀಷ್ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ಸಹ ಬಿಡುಗಡೆಯಾಗಲಿದ್ದು, ಕೆಲವೊಂದು ಸಹಜ ದೃಶ್ಯಗಳು ಹಾಗೂ ಟಾಂ ಅಂಡ್ ಜೆರ್ರಿ ಅನಿಮೇಷನ್ ಎರಡೂ ಸೇರಿದಂತೆ ಈ ಸಿನೆಮಾದಲ್ಲಿ ನೋಡಬಹುದಾಗಿದೆ. ಇನ್ನೂ ಬೆಕ್ಕು ಹಾಗೂ ಇಲಿಯ ಆಕ್ಷನ್ ನೋಡಲು ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಈ ಚಿತ್ರದ ಕತೆಯ ವಿಷಯಕ್ಕೆ ಬಂದರೇ, ನ್ಯೂಯಾರ್ಕ ನಗರದಲ್ಲಿನ ಐಷಾರಾಮಿ ಹೋಟೆಲ್ ನಲ್ಲಿ ಅದ್ದೂರಿ ಮದುವೆ ಒಂದಕ್ಕೆ ಸಿದ್ದತೆ ನಡೆದಿರುತ್ತದೆ. ಈ ಮದುವೆಯಲ್ಲಿ ಜೆರ್ರಿ ಅಂದರೇ ಇಲಿ ತುಂಬಾ ಕಾಟ ಕೊಡುತ್ತಿರುತ್ತದೆ. ಈ ಕಾಟ ತಪ್ಪಿಸಲು ಬೆಕ್ಕನ್ನು ನೇಮಿಸಲಾಗುತ್ತದೆ. ಈ ಬೆಕ್ಕು ಮತ್ತು ಇಲಿ ನಡುವೆ ನಡೆಯುವಂತಹ ಆಟ ನೋಡುಗರಲ್ಲಿ ಸಂತಸ ಮೂಡಿಸುತ್ತದೆ.

ಇನ್ನೂ ಈ ಚಿತ್ರ ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವುದು ವಿಶೇಷವಾಗಿದೆ. ಬಿಗ್ ಬಜೆಟ್ ಸಿನೆಮಾಗಳ ಪೈಕಿ ವಿಜಯ್ ಅಭಿನಯದ ಮಾಸ್ಟರ್ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದೀಗ ದೊಡ್ಡ ಬಜೆಟ್ ಚಿತ್ರಗಳು ಒಂದೊಂದಾಗಿ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ ಎನ್ನಲಾಗಿದೆ.

Previous articleಸ್ಯಾಂಡಲ್ ವುಡ್ ಬಗ್ಗೆ ಸಂಚಲನಾತ್ಮಕ ಸ್ಟೇಟ್ ಮೆಂಟ್ ಕೊಟ್ಟ ವರ್ಮಾ
Next articleನನ್ನ ಹುಟ್ಟುಹಬ್ಬದ ಆಚರಿಸುವ ಬದಲು ಬಡವರಿಗೆ ಸಹಾಯ ಮಾಡಿ ಎಂದ ನಟ