ಪತ್ನಿಯೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ ಜೂನಿಯರ್ ಎನ್.ಟಿ.ಆರ್, ವೈರಲ್ ಆಯ್ತು ಪೊಟೋ….!

ಟಾಲಿವುಡ್ ನ ಸ್ಟಾರ್‍ ನಟರಲ್ಲಿ ಜೂನಿಯರ್‍ ಎನ್.ಟಿ.ಆರ್‍ ಸಹ ಒಬ್ಬರಾಗಿದ್ದಾರೆ. ಇತ್ತೀಚಿಗಷ್ಟೆ ಅವರ ಅಭಿನಯದ RRR ಸಿನೆಮಾ ವಿಶ್ವದಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡಿದ್ದು, ಬಾಕ್ಸ್ ಆಫೀಸ್ ಲೂಟಿ ಹೊಡೆದಿತ್ತು. ಇನ್ನೂ ಸದ್ಯ ಈ ಸಿನೆಮಾದ ಬಳಿಕ ನಟ ಜೂನಿಯರ್‍ ಎನ್.ಟಿ.ಆರ್‍ ತನ್ನ ಪತ್ನಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸದ್ಯ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಹಾಲಿಡೇಸ್ ಎಂಜಾಯ್ ಮಾಡುತ್ತಿರುವ ಈ ಜೋಡಿ ಹಂಚಿಕೊಂಡ ಒಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಟಾಲಿವುಡ್ ನ ಯಂಗ್ ಟೈಗರ್‍ ಎನ್.ಟಿ.ಆರ್‍ ಸೋಷಿಯಲ್ ಮಿಡಿಯಾದಲ್ಲಿ ಖಾತೆಗಳನ್ನ ಹೊಂದಿದ್ದರೂ ಕೂಡ ಆತ ಆನ್ ಲೈನ್ ಗೆ ಬರೋದು ತುಂಬಾನೆ ಕಡಿಮೆ. ಆಗಾಗ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್  ಮಾತ್ರ ನೀಡುತ್ತಿರುತ್ತಾರೆ. ತಮ್ಮ ಕುಟುಂಬದ ವಿಚಾರಗಳನ್ನು ಹಂಚಿಕೊಳ್ಳುವುದು ತುಂಬಾನೆ ಕಡಿಮೆ. ತಮ್ಮ ವೈಯುಕ್ತಿಕ ವಿಚಾರಗಳನ್ನು ತುಂಬಾನೆ ಗೌಪ್ಯವಾಗಿಡುವ ನಟರಲ್ಲಿ ಜೂನಿಯರ್‍ ಎನ್.ಟಿ.ಆರ್‍. ಮೊದಲ ಸ್ಥಾನದಲ್ಲಿರುತ್ತಾರೆ.ಇನ್ನೂ ಎನ್.ಟಿ.ಆರ್‍ ರವರಂತೆ ಆತನ ಪತ್ನಿ ಪ್ರಣತಿ ಸಹ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸೋಷಿಯಲ್ ಮಿಡಿಯಾದಿಂದ ಆಕೆ ದೂರವೇ ಉಳಿದಿದ್ದಾರೆ. ಆಕೆ ಸಹ ತನ್ನ ವೈಯುಕ್ತಿಕ ವಿಚಾರಗಳನ್ನೂ ಶೇರ್‍ ಮಾಡುವುದೇ ಇಲ್ಲ. ಸಿನಿರಂಗದಲ್ಲಿನ ಇತರೆ ನಟರ ಪತ್ನಿಯರಂತೆ ಯಾವುದೇ ವಿಚಾರಗಳನ್ನೂ ಸಹ ಪ್ರಣತಿ ಶೇರ್‍ ಮಾಡುವುದಿಲ್ಲ. ಆದರೆ ಸುಮಾರು ದಿನಗಳ ಬಳಿಕ ಈ ಜೋಡಿಯ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷವಾಗಿದೆ. ಸದ್ಯ ಈ ಪೊಟೋ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಎನ್.ಟಿ.ಆರ್‍ RRR ಸಿನೆಮಾದ ಬಳಿಕ ಮತ್ತೆ ಕೆಲವೊಂದು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ.  ಇನ್ನೂ ಈ ಸಿನೆಮಾಗಳಲ್ಲಿ ಬ್ಯುಸಿಯಾಗುವುದಕ್ಕೂ ಮುಂಚೆಯೇ  ಪತ್ನಿಯೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ತನ್ನ ಪತ್ನಿಯ ಜೊತೆಗೆ ಮಾತನಾಡಿಕೊಳ್ಳುವ ಪೊಟೋ ಒಂದನ್ನು ಶೇರ್‍ ಮಾಡಿದ್ದರೆ. ಎನ್.ಟಿ.ಆರ್‍ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎನ್.ಟಿ.ಆರ್‍  ಹಂಚಿಕೊಂಡ ಪೊಟೋದಲ್ಲಿ ಎನ್.ಟಿ.ಆರ್‍ ಹಾಗೂ ಪ್ರಣತಿ ಒಂದು ಟೇಬಲ್ ಮೇಲೆ ಎದುರಾಗಿ ಕುಳಿತುಕೊಂಡು ಕಾಫಿ ಕುಡಿಯುತ್ತಾ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪೊಟೋದಲ್ಲಿ ಇಬ್ಬರೂ ನಗುತ್ತಾ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಇಲಾಂಟಿ ಕ್ಷಣಾಲು ಎಂದು ತೆಲುಗುನ ಭಾಷೆಯಲ್ಲಿ ಕ್ಯಾಪ್ಷನ್ ಹಾಕಿ ಹಂಚಿಕೊಂಡ ಈ ಪೊಟೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಈ ಪೊಟೋಗೆ ಲೈಕ್ಸ್ ಹಾಗೂ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂ ನಟ ಎನ್.ಟಿ.ಆರ್‍ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಮುಖ್ಯತೆ ಕೊಡುತ್ತಾರೆ. ಇನ್ನೂ ಸಮಯ ಸಿಕ್ಕಾಗಲೆಲ್ಲಾ ತನ್ನ ಪುತ್ರರಾದ ಅಭಯ್ ರಾಮ್ ಹಾಗೂ ಭರತ್ ರಾಮ್ ರವರ ಜೊತೆ ಕಾಲ ಕಳೆಯುತ್ತಿರುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಪ್ಯಾಮಿಲಿ ಜೊತೆಗೆ ಟ್ರಿಪ್ ಹೊಡೆಯುತ್ತಿರುತ್ತಾರೆ. ಇನ್ನೂ ಎನ್.ಟಿ.ಆರ್‍ ರವರ 30ನೇ ಸಿನೆಮಾವನ್ನು ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರಲಿದೆ. ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ. ಇದರ ಜೊತೆಗೆ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಎನ್.ಟಿ.ಆರ್‍ ರವರ 31 ನೇ ಸಿನೆಮಾ ಸಿದ್ದವಾಗಲಿದೆ.

Previous articleಸ್ಯಾಂಡಲ್ ವುಡ್ ನಟಿ ಪ್ರಣಿತಾ ಮಗಳ ಹೆಸರು ಅರ್ನಾ…!
Next articleಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ, ನಿನ್ನನ್ನು ಮದುವೆಯಾಗಬೇಕು ಅಂತಾ ಇದ್ದೇನೆ ಎಂದ ಅಭಿಮಾನಿ…!