ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಸಿನಿ ಕೆರಿಯರ್ ನಲ್ಲಿ ಐರನ್ ಲೆಗ್ ಆಗಿದ್ದ ನಟಿ ಯಾರು ಗೊತ್ತಾ?

ಯಂಗ್ ರೆಬೆಲ್ ಸ್ಟಾರ್‍ ಪ್ರಭಾಸ್ ಸಾಲು ಸಾಲು ಸಿನೆಮಾಗಳಿಂದ ಸಕ್ಸಸ್ ಪುಲ್ ಸಿನಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಪ್ರಭಾಸ್ ಜೊತೆಗೆ ಅನೇಕ ನಟಿಯರು ತೆರೆ ಹಂಚಿಕೊಂಡಿದ್ದಾರೆ. ಈ ಪೈಕಿ ಕೆಲವು ನಟಿಯರಿಂದ ಆತ ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳನ್ನು ಸಹ ಪಡೆದುಕೊಂಡರು. ಆದರೆ ಆತನ ಕೆರಿಯರ್‍ ನಲ್ಲಿ ಒಬ್ಬ ನಟಿ ಮಾತ್ರ ಐರನ್ ಲೆಗ್ ಆಗಿದ್ದರಂತೆ. ಆಕೆಯನ್ನು ಸಿನೆಮಾಗೆ ಆಯ್ಕೆ ಮಾಡಿದ್ದರೇ ನೋ ಎಂದೂ ಸಹ ಹೇಳಿದ್ದರಂತೆ. ಇನ್ನೂ ಅಷ್ಟಕ್ಕೂ ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗದ ರೆಬೆಲ್ ಸ್ಟಾರ್‍ ಕೃಷ್ಣಂ ರಾಜು ಸಿನಿ ವಾರಸನಾಗಿ ಪ್ರಭಾಸ್ ಈಶ್ವರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ಪ್ರಭಾಸ್ ಬಳಿಕ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಇನ್ನೂ ಪ್ರಭಾಸ್ ರವರ ಸಿನೆಮಾಗಳಲ್ಲಿ ಅನೇಕ ನಟಿಯರು ಅಭಿನಯಿಸಿದ್ದಾರೆ. ಕೆಲವು ನಟಿಯರು ಆತನಿಗೆ ಬಿಗ್ ಸಕ್ಸಸ್ ತಂದುಕೊಟ್ಟರೇ, ಕೆಲ ನಟಿಯರು ಸೋಲನ್ನು ತಂದುಕೊಟ್ಟರು. ಆ ನಟಿಯರಿಂದಲೇ ಪ್ರಭಾಸ್ ಸಿನೆಮಾಗಳು ಡಿಜಾಸ್ಟರ್ ಆದವು ಎನ್ನಲು ಸಾಧ್ಯವಿಲ್ಲ. ಆದರೆ ಸೆಂಟಿಮೆಂಟಲ್ ಆಗಿ ಮಾತ್ರ ಆ ನಟಿಯರು ಪ್ರಭಾಸ್ ಗೆ ಅಡ್ಜಸ್ಟ್ ಆಗಿಲ್ಲ ಎಂಬ ಮಾತುಗಳು ಕೇಳಿಬಂದವು. ಆದರೆ ಒಬ್ಬ ನಟಿಯನ್ನು ಮಾತ್ರ ಪ್ರಭಾಸ್ ತುಂಬಾನೆ ಕೋಪದಿಂದ ಕಾಣುತ್ತಾರಂತೆ. ಆಕೆ ಎಂದರೇ ಪ್ರಭಾಸ್ ಗೆ ತುಂಬಾನೆ ಕೋಪವಂತೆ. ಆಕೆಯಿಂದ ಪ್ರಭಾಸ್ ಗೆ ಎರಡು ಸಿನೆಮಾಗಳು ಪ್ಲಾಪ್ ಆದವು. ಇದೀಗ ಪ್ರಭಾಸ್ ಆಕೆಯ ಮೇಲೆ ಕೋಪಗೊಳ್ಳುತ್ತಾರಂತೆ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ರೂಮರ್‍ ಒಂದು ಹರಿದಾಡುತ್ತಿದೆ.

ಇನ್ನೂ ಆ ನಟಿ ಬೇರೆ ಯಾರೂ ಅಲ್ಲ ಚಾರ್ಮಿ. ಹೌದು ಚಾರ್ಮಿ ಪ್ರಭಾಸ್ ಜೊತೆ ನಟಿಸಿ ಎರಡು ಸಿನೆಮಾಗಳು ಬಾಕ್ಸ್ ಆಫಿಸ್ ನಲ್ಲಿ ಡಿಜಾಸ್ಟರ್‍ ಆದವು. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಂತಹ ಚಕ್ರಂ ಹಾಗೂ ಪೌರ್ಣಿಮಿ ಎರಡೂ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಒಂದು ಸಿನೆಮಾ ಪ್ಲಾಪ್ ಆದರೆ ಮತ್ತೊಂದು ಸಿನೆಮಾ ಆಲ್ ಟೈಮ್ ಡಿಜಾಸ್ಟರ್‍ ಆಗಿ ಉಳಿಯಿತು. ಈ ಕಾರಣದಿಂದ ಪ್ರಭಾಸ್ ಆಕೆಯೊಂದಿಗೆ ಬೇರೆ ಸಿನೆಮಾದಲ್ಲಿ ನಟಿಸಲು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಇಂತಹದೊಂದು ರೂಮರ್‍ ಜೋರಾಗಿ ಹರಿದಾಡುತ್ತಿದೆ. ಅತೀ ಕಡಿಮೆ ಸಮಯದಲ್ಲೇ ಚಾರ್ಮಿ ದೊಡ್ಡ ದೊಡ್ಡ ನಟರೊಂದಿಗೆ ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಅದೇ ಸ್ಪೀಡ್ ನಲ್ಲೇ ಡಿಜಾಸ್ಟರ್‍ ಸಿನೆಮಾಗಳನ್ನು ಸಹ ಕಂಡರು. ಇದೀಗ ಪೂರಿ ಜಗನ್ನಾಧ್ ಜೊತೆಗೆ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಚಾರ್ಮಿ ಹಾಗೂ ಪೂರಿ ಜಗನ್ನಾಧ್ ಕಾಂಬಿನೇಷನ್ ನಲ್ಲಿ ಬಹುನಿರೀಕ್ಷಿತ ಲೈಗರ್‍ ಸಿನೆಮಾ ತೆರೆಕಂಡಿದ್ದು, ಬಾಕ್ಸ್ ಆಫಿಸ್ ನಲ್ಲಿ ತುಂಬಾನೆ ನಷ್ಟ ಕಂಡಿತ್ತು. ಈ ಸಿನೆಮಾದಿಂದ ಜಗನ್ನಾಧ್ ಹಾಗೂ ಚಾರ್ಮಿ ತುಂಬಾನೆ ನಷ್ಟವನ್ನು ಕಂಡರು. ಪೂರಿ ಜಗನ್ನಾಧ್ ಹಾಗೂ ಚಾರ್ಮಿ ನಡುವೆ ಅಪೈರ್‍ ಇದೆ ಎಂದು ಸಹ ರೂಮರ್‍ ಗಳು ಕೇಳಿಬಂದಿದ್ದವು. ಈ ಕುರಿತು ಬಂಡ್ಲ ಗಣೇಶ್ ಸಹ ಒಪೆನ್ ಸ್ಟೇಜ್ ನಲ್ಲಿಯೇ ಕೌಂಟರ್‍ ಕೊಟ್ಟಿದ್ದರು.

Previous articleಲಿಪ್ ಕಿಸ್ ದೃಶ್ಯದಲ್ಲಿ ನಟಿಸಲೇ ಬೇಕು ಎಂದ ನಿರ್ದೇಶಕನಿಗೆ ಸಾಯಿ ಪಲ್ಲವಿ ಹೇಳಿದ್ದು ಏನು ಗೊತ್ತಾ?
Next articleಪತ್ನಿಯರ ಬಗ್ಗೆ ಚುಚ್ಚು ಮಾತುಗಳಿಗೆ ಕೌಂಟರ್ ನೀಡಿದ ಪವನ್, ಮೊದಲನೇ ಪತ್ನಿಗೆ 5 ಕೋಟಿ, ಎರಡನೇ ಪತ್ನಿಗೆ ಆಸ್ತಿ ನೀಡಿದ್ದೇನೆ ಎಂದ್ರು..!