ನ್ಯೂ ಗೆಟಪ್ ನಲ್ಲಿ ಶಾಕ್ ಕೊಟ್ಟ ಜೂನಿಯರ್ ಎನ್.ಟಿ.ಆರ್, ಸರ್ಪ್ರೈಸ್ ಆದ ಅಭಿಮಾನಿಗಳು…!

ಆರ್‍.ಆರ್‍.ಆರ್‍. ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾ ಯಾವುದೂ ಇನ್ನೂ ಸೆಟ್ಟೇರಿಲ್ಲ. ಇದೇ ಸಿನೆಮಾದಲ್ಲಿ ನಟಿಸಿದ್ದ ರಾಮ್ ಚರಣ್ ರವರ RC15 ಸಿನೆಮಾದ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಎನ್.ಟಿ.ಆರ್‍ ರವರ ಸಿನೆಮಾ ಶೂಟಿಂಗ್ ಪ್ರಾರಂಭವಾಗದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ನ್ಯೂ ಲುಕ್ ನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ನ್ಯೂ ಲುಕ್ ನೋಡಿದ ಅಭಿಮಾನಿಗಳು ಸರ್ಪ್ರೈಸ್ ಆಗಿದ್ದಾರೆ.

ನಟ ಎನ್.ಟಿ.ಆರ್‍ ಹಾಗೂ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ NTR30 ಸಿನೆಮಾ ಘೋಷಣೆಯಾಗಿ ತಿಂಗಳುಗಳೇ ಕಳೆದಿದೆ. ಇನ್ನೂ ಅಧಿಕೃತವಾಗಿ ಈ ಸಿನೆಮಾದ ಶೂಟಿಂಗ್ ಪ್ರಾರಂಭವಾಗಿಲ್ಲ. ಚಿತ್ರತಂಡವೇನೋ ಶೀಘ್ರದಲ್ಲೇ ಶೂಟಿಂಗ್ ಕೆಲಸಗಳನ್ನು ಪ್ರಾರಂಭ ಮಾಡುವುದಾಗಿಯೂ ಸಹ ತಿಳಿಸಿತ್ತು. ಇದೀಗ ಅಭಿಮಾನಿಗಳಿಗೆ ಜೂನಿಯರ್‍ ಎನ್.ಟಿ.ಆರ್‍ ಸರ್ಪ್ರೈಸ್ ನೀಡಿದ್ದಾರೆ. ಹೊಸ ಲುಕ್ಸ್ ನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಇನ್ನೂ ಈ ಹೊಸ ಗೆಟಪ್ ನಲ್ಲಿ ಜೂನಿಯರ್‍ ಎನ್.ಟಿ.ಆರ್‍ ಹೇರ್‍ ಸ್ಟೈಲ್ ವಿಭಿನ್ನವಾಗಿದೆ. ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲೂ ಜೀನ್ಸ್ ಶರ್ಟ್ ಧರಿಸಿ ಸ್ಟೈಲ್ ಆಗಿರುವ ಕೂಲಿಂಗ್ ಗ್ಲಾಸಸ್ ಧರಿಸಿ, ಚೇರ್‍ ನಲ್ಲಿ ಕಂಪ್ಯೂಟರ್‍ ಮುಂದೆ ಕುಳಿತು ಪೋಸ್ ಕೊಟ್ಟಿದ್ದಾರೆ. ಸದ್ಯ ಅವರ ಈ ನ್ಯೂ ಲುಕ್ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುವಂತಹ ಜೂನಿಯರ್‍ ಎನ್.ಟಿ.ಆರ್‍ ತನ್ನ ಇನ್ಸ್ಟಾ ಖಾತೆಯ ಮೂಲಕ ಈ ಹೊಸ ಪೊಟೋ ಶೇರ್‍ ಮಾಡಿದ್ದಾರೆ. ಈ ಪೊಟೋಗೆ ಹೊಸ ದಿನ್, ಹೊಸ ವೈಬ್, ಆಲಿಮ್ ಜೊತೆ ಮತ್ತೊಮ್ಮೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನೂ ಎನ್.ಟಿ.ಆರ್‍ ಈ ಹೊಸ ಲುಕ್ ಹಂಚಿಕೊಂಡಿದ್ದರ ಹಿಂದೆ ಏನಿದೆ ಎಂಬ ಕುತೂಹಲ ಸಹ ಅಭಿಮಾನಿಗಳಲ್ಲಿ ಮೂಡಿತ್ತು. ಇನ್ನೂ ಈ ಹೊಸ ಲುಕ್ ಹಂಚಿಕೊಳ್ಳಲು ಒಂದು ಜಾಹಿರಾತಿಗಾಗಿ ಎಂದು ಹೇಳಲಾಗುತ್ತಿದೆ. ಎನ್.ಟಿ.ಆರ್‍ ಒಂದು ಕಂಪನಿಯ ಬ್ರಾಂಡ್ ಅಂಬಾಸಿಡರ್‍ ಆಗುತ್ತಿರುವ ಬಗ್ಗೆ ತಿಳಿದೆ ಇದೆ. ಈ ಜಾಹಿರಾತಿಗಾಗಿಯೇ ಎನ್.ಟಿ.ಆರ್‍ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜಕ್ಕೂ ಜಾಹಿರಾತಿಗಾಗಿ ಈ ಲುಕ್ ಇರಬಹುದಾ ಅಥವಾ ಹೊಸ ಸಿನೆಮಾಗಾಗಿ ಇರಬಹುದಾ ಎಂಬ ಆಸಕ್ತಿ ಸಹ ಅಭಿಮಾನಿಗಳಲ್ಲಿ ಮೂಡಿದೆ.

ಇನ್ನೂ ಕೊರಟಾಲ ಶಿವ ಹಾಗೂ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಘೋಷಣೆಯಾಗಿರುವ NTR30 ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೂಟಿಂಗ್ ಕೆಲಸಗಳನ್ನು ಪ್ರಾರಂಭಿಸಲು ಸಕಲ ಸಿದ್ದತೆಗಳೂ ಸಹ ನಡೆಯುತ್ತಿವೆ ಎನ್ನಲಾಗುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಶೀಘ್ರದಲ್ಲೇ ಸಿನೆಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

Previous articleನಟಿ ಆಲಿಯಾ ಮಗು ನೋಡಬೇಕಾದರೇ ಆ ಸರ್ಟಿಫಿಕೆಟ್ ಇರುವುದು ಕಡ್ಡಾಯವಂತೆ….!
Next articleಟಾಪ್ ಜಾರುತ್ತಿದ್ದರೂ ಲೆಕ್ಕಿಸದೇ ಹಾಟ್ ಡ್ಯಾನ್ಸ್ ಮಾಡಿದ ಬೋಲ್ಡ್ ಬ್ಯೂಟಿ ಪೂನಂ, ಮತ್ತೇರಿಸುವ ವಿಡಿಯೋ ವೈರಲ್….!