ಸಿನಿರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ಕುರಿತಂತೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಈ ಕುರಿತು ಟಾಲಿವುಡ್ ನ ಸೀನಿಯರ್ ನಟಿ ಪ್ರಗತಿ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಎಂದಾಕ್ಷಣ ಇಡೀ ಸಿನಿರಂಗವನ್ನು ದೂಷಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನೂ ಆಕೆ ನೀಡಿರುವ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ತೆಲುಗು ಸಿನಿರಂಗದಲ್ಲಿ 90ರ ದಶಕದಿಂದ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಸದ್ಯ ಆಕೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬ್ಯುಸಿಯಾಗಿದ್ದಾರೆ.
ಟಾಲಿವುಡ್ ನಲ್ಲಿ ತಾಯಿ, ಅತ್ತೆ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಂತಹ ಪ್ರಗತಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದಾರೆ. ಸಿನಿರಂಗದಲ್ಲಿ ಇತ್ತೀಚಿಗೆ ಕಾಸ್ಟಿಂಗ್ ಕೌಚ್ ಕುರಿತಂತೆ ಜೋರಾಗಿಯೇ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮಿಟೂ ಎಂಬುದು ಶುರುವಾದ ಮೇಲೆ ಅನೇಕ ನಟಿಯರು ತಾವು ಎದರುಸಿದಂಹ ಲೈಂಗಿಕ ಸಮಸ್ಯೆಗಳನ್ನು ಹೊರಹಾಕಲು ಶುರು ಮಾಡಿದರು. ಈ ಕುರಿತು ಇದೀಗ ಪ್ರಗತಿ ಸಹ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಕುರಿತು ಮಾತನಾಡುವಾಗ ಇಡೀ ಸಿನಿರಂಗವನ್ನು ದೂಷಣೆ ಮಾಡುವುದು ಸರಿಯಲ್ಲಿ. ಕಾಸ್ಟಿಂಗ್ ಕೌಚ್ ಕುರಿತು ತಮ್ಮ ಅಭಿಪ್ರಾಯವನ್ನು ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದಾರೆ.
ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ನಟಿಯರಲ್ಲಿ ಯಾರನ್ನಾದರೂ ಕೇಳಿ, ಕಾಸ್ಟಿಂಗ್ ಕೌಚ್ ಬಗ್ಗೆ ತಮಗೆ ಯಾವುದೇ ಅನುಭವ ಆಗಿಲ್ಲ ಎನ್ನುತ್ತಾರೆ. ಇನ್ನೂ ಸಿನಿರಂಗದಲ್ಲಿ ಸಣ್ಣ ಪುಟ್ಟ ಸಂಘಟನೆಗಳೂ ನಡೆದರೂ ಸಹ ಸಕ್ಸಸ್ ಆದ ನಟಿಯರು ಅವುಗಳ ಬಗ್ಗೆ ಮಾತನಾಡುವುದೇ ಇಲ್ಲ. ಹೆಚ್ಚಾಗಿ ಕಾಸ್ಟಿಂಗ್ ಕೌಚ್ ಎಂಬುದು ಸಿನಿರಂಗದಲ್ಲಿ ಸಕ್ಸಸ್ ಆಗದೇ ಇರುವಂತಹವರಿಂದಲೇ ಬರುತ್ತದೆ. ಕಾಸ್ಟಿಂಗ್ ಕೌಚ್ ನಡೆದಿರಬಹುದು, ಇಂತಹವರು ಪ್ರತಿ ರಂಗದಲ್ಲೂ ಇರುತ್ತಾರೆ. ಇನ್ನೂ ಕೇವಲ ಒಂದು ಹುಡುಗಿಗಾಗಿ ಸಿನೆಮಾ ತೆಗೆಯುವುದಿಲ್ಲ. ಕೊಟ್ಯಂತರ ರೂಪಾಯಿಗಳ ಬಂಡವಾಳ ಹಾಕುವುದು, ಅವರಿಗೆ ಪಾರಿತೋಷಕ ಕೊಡುವುದು ಕೇವಲ 5 ನಿಮಿಷಗಳ ಸುಖಕ್ಕಾಗಿ ಅಲ್ಲ. ಒಬ್ಬ ಹುಡುಗಿ ಅದಕ್ಕೆ ಒಪ್ಪಿಕೊಂಡರೇ ಚಾನ್ಸ್ ಕೊಡುತ್ತೇನೆ ಎಂದರೇ ಅದು ಆಗಲ್ಲ. ಆ ಪಾತ್ರಕ್ಕೆ ಆಕೆ ಹೊಂದಾಣಿಕೆ ಆದರೆ ಮಾತ್ರ ಆಯ್ಕೆ ಮಾಡುತ್ತಾರೆ. ಇನ್ನೂ ಬಹುತೇಕ ಎಲ್ಲಾ ಸಿನೆಮಾಗಳೂ ನಟಿಯ ಅಭಿನಯದ ಮೇಲೆ ಆಧಾರವಾಗಿರುತ್ತದೆ. ಕಾಸ್ಟಿಂಗ್ ಕೌಚ್ ಎಂಬುದು ಕೆರಿಯರ್ ಮೇಲೆ ಪ್ರಭಾವ ಬೀರುತ್ತದೆ ಎಂದರೇ ನಾನು ಅದನ್ನು ನಂಬೊಲ್ಲ ಎಂದು ಪ್ರಗತಿ ತಮ್ಮ ಮನದಾಳದ ಮಾತುಗಳನ್ನು ಸಹ ಹೇಳಿದ್ದಾರೆ.
ಅಷ್ಟೇಅಲ್ಲದೇ ಪ್ರತಿಭೆ ಎಂಬುದು ಇಲ್ಲದೇನೆ ಕಾಸ್ಟಿಂಗ್ ಕೌಚ್ ಎಂಬುದನ್ನು ಕಾರಣವಾಗಿ ಹೇಳುವ ಅನೇಕ ನಟಿಯರಿದ್ದಾರೆ. ಒಂದು ಸಿನೆಮಾದಲ್ಲಿನ ಪಾತ್ರಕ್ಕೆ ಯಾವ ಹುಡುಗಿ ಚೆನ್ನಾಗಿರುತ್ತಾಳೆ ಅಂತಹ ಹುಡುಗಿಯನ್ನೇ ಸಿನೆಮಾ ತಂಡ ತೆಗೆದುಕೊಳ್ಳುತ್ತದೆ. ನಾನು ಇಷ್ಟು ವರ್ಷಗಳಿಂದ ಸಿನಿರಂಗದಲ್ಲಿದ್ದೇನೆ. ನನಗೆ ಯಾವುದೇ ರೀತಿಯ ನೆಗೆಟಿವಿಟಿ ಕಾಣಿಸಲಿಲ್ಲ. ಆದರೆ ಒಂದೆರಡು ಸಿನೆಮಾಗಳನ್ನು ಮಾಡಿ ಹೋದ ನಟಿಯರು ಸಿನೆಮಾ ಇಂಡಸ್ಟ್ರಿಯಲ್ಲಿ ಪೂರ್ಣ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಆರೋಪ ಮಾಡುತ್ತುರುವುದು ಹಾಸ್ಯಾಸ್ಪದ ಎಂದಿದ್ದಾರೆ. ಅದೇ ರೀತಿ ನೆಪಟೋಸಿಯಂ ಬಗ್ಗೆ ಸಹ ಮಾತನಾಡಿದ್ದಾರೆ. ಸದ್ಯ ಪ್ರಗತಿ ಹೇಳಿಕೆಗಳು ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.
