ತಮ್ಮ ರಿಲೇಷನ್ ರೂಮರ್ ಬಗ್ಗೆ ಕ್ಲಾರಿಟಿ ಕೊಟ್ಟ ಪೂರಿ ಅಂಡ್ ಚಾರ್ಮಿ…!

ಟಾಲಿವುಡ್ ಡೈನಾಮಿಕ್ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ಖ್ಯಾತ ನಟಿ ಕಂ ನಿರ್ಮಾಪಕಿ ಚಾರ್ಮಿರವರ ಬಗ್ಗೆ ಅನೇಕ ತಿಂಗಳುಗಳಿಂದ ಅವರ ರಿಲೇಷನ್ ಶಿಪ್ ಬಗ್ಗೆ ರೂಮರ್‍ ಗಳು ಕೇಳಿಬರುತ್ತಿವೆ. ಟಾಲಿವುಡ್ ನಲ್ಲಿ ಕ್ರೇಜ್ ಹೊಂದಿದ್ದ ನಟಿ ಚಾರ್ಮಿ ಅನೇಕ ಸಿನೆಮಾಗಳ ಮೂಲಕ ಟಾಪ್ ಸ್ಟಾರ್‍ ನಟಿಯಾಗಿದ್ದರು. ಕೆಲವು ದಿನಗಳಿಂದ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಟಾಲಿವುಡ್ ನಲ್ಲಿ ಡೈನಾಮಿಕ ಡೈರೆಕ್ಟರ್‍ ಪೂರಿ ಜಗನ್ನಾಥ್  ಸಿನೆಮಾಗಳಿಗೆ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ ಚಾರ್ಮಿ.

ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಇಬ್ಬರೂ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಸುಮಾರು ದಿನಗಳಿಂದ ರೂಮರ್‍ ಗಳು ಕೇಳಿ ಬರುತ್ತಲೇ ಇದೆ. ಆದರೆ ಪೂರಿಯಾಗಲಿ ಅಥವಾ ಚಾರ್ಮಿಯಾಗಲಿ ಈ ಕುರಿತು ಹೆಚ್ಚಾಗಿ ಕಿವಿಗೊಡದೇ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಈ ಹಿಂದೆ ಎಂದೂ ಸಹ ಅವರ ಮೇಲಿನ ರೂಮರ್‍ ಗಳಿಗೆ ಉತ್ತರ ನೀಡುವ ಗೋಜಿಗೆ ಹೋಗಲೇ ಇಲ್ಲ. ಆದರೆ ಕೊನೆಗೂ ಪೂರಿ ಹಾಗೂ ಚಾರ್ಮಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ  ಲೈಗರ್‍ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಈ ಸಿನೆಮಾ ಆ.25 ರಂದು ಅ‌ದ್ದೂರಿಯಾಗಿ ತೆರೆಗೆ ಬರಲಿದೆ. ಇನ್ನೂ ಲೈಗರ್‍ ಸಿನೆಮಾದ ಚಿತ್ರತಂಡ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

ಇನ್ನೂ ಸಿನೆಮಾ ಪ್ರಮೋಷನ್ ನಿಮಿತ್ತ ಚಾರ್ಮಿ ಅಂಡ್ ಪೂರಿ ಮಿಡಿಯಾದೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ಮೇಲಿನ ರೂಮರ್‍ ಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಚಾರ್ಮಿ ಸುಮಾರು 13 ವರ್ಷಗಳಿಂದ ನನಗೆ ಗೊತ್ತು. ಆಕೆಯೊಂದಿಗೆ ದಶಕಗಳಿಂದ ಕೆಲಸ ಮಾಡುತ್ತಿದ್ದೇನೆ. ಚಾರ್ಮಿ ಹಾಗೂ ನನ್ನ ಮಧ್ಯೆ ಏನೇನೋ ಇದೆ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಇನ್ನೂ ಆಕೆ ಯಂಗ್ ಆಗಿರುವ ಕಾರಣಕ್ಕಾಗಿಯೇ ಇಂತಹ ರೂಮರ್‍ ಹಳು ಹುಟ್ಟಿಕೊಳ್ಳುತ್ತಿವೆ. ಅದೇ ಚಾರ್ಮಿಗೆ ಏನಾದರೂ 50 ವರ್ಷ ವಯಸ್ಸಾಗಿದ್ದರೇ ಯಾರೂ ಸಹ ಆಕೆಯ ಬಗ್ಗೆ ಮಾತನಾಡಿಕೊಳ್ಳುತ್ತಿರಲಿಲ್ಲ. ನಾವಿಬ್ಬರೂ ಸಿನಿರಂಗದಲ್ಲಿ ಸುಮಾರು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಆ ರೀತಿಯಲ್ಲಿ ರೂಮರ್‍ ಗಳನ್ನು ಹಬ್ಬಿಸುತ್ತಿದ್ದಾರೆ. ಒಂದು ವೇಳೆ ಅಫೈರ್‍ ಇದ್ದರೂ ಸಹ ಕೆಲವು ದಿನಗಳು ಮಾತ್ರ ಇರುತ್ತದೆ. ಆಕರ್ಷಣೆ ಶಾಶ್ವತವಲ್ಲ, ಸ್ನೇಹ ಎಂಬುದು ಶಾಶ್ವತ ನಾವಿಬ್ಬರೂ ಒಳ್ಳೆಯ ಸ್ನೇಹಿತರಷ್ಟೆ ಎಂದು ತಮ್ಮ ರಿಲೇಷನ್ ಶಿಪ್ ಬಗ್ಗೆ ಕಡ್ಡಿ ಮುರಿದಂತೆ ಹೇಳಿದ್ದಾರೆ ಪೂರಿ.

ಅಷ್ಟೇಅಲ್ಲದೇ ಚಾರ್ಮಿ ಸಹ ಈ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ. ಜನರು ಸಾಮಾನ್ಯವಾಗಿ ಸದಾ ತಮ್ಮ ದೃಷ್ಟಿಕೋಣದಿಂದಲೇ ನೋಡುತ್ತಾರೆ, ಆಲೋಷನೆ ಮಾಡುತ್ತಾರೆ. ಅದೇ ರೀತಿಯಲ್ಲೆ ಕಾಮೆಂಟ್ ಸಹ ಮಾಡುತ್ತಾರೆ. ಆ ಹಕ್ಕು ಅವರಿಗಿದೆ. ಇನ್ನೂ ಲೈಗರ್‍ ಹಾಗೂ ಜನಗಣಮನ ಸಿನೆಮಾ ವಿಜಯದ ಬಳಿಕ ಎಲ್ಲರೂ ಪೂರಿ ಸರ್‍ ಹಾಗೂ ನನ್ನನ್ನು ರೋಲ್ ಮಾಡಲ್ ಆಗಿ ತೆಗೆದುಕೊಳ್ಳುತ್ತಾರೆ. ಇನ್ನೂ ನಮ್ಮ ಮೇಲಿನ ರೂಮರ್‍ ಗಳಿಗೆ ನಾನು ದುಃಖ ಪಡುವುದಿಲ್ಲ, ಆ ಕುರಿತು ಯೋಚನೆ ಸಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಅವರ ರಿಲೇಷನ್ ಬಗ್ಗೆ ಕ್ಲಾರಿಟಿ ಕೊಟ್ಟಾಗಿದೆ. ಈಗಲಾದರೂ ಈ ರೂಮರ್‍ ಗಳು ನಿಲ್ಲುತ್ತಾ, ಮುಂದುವರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Previous articleಗಿಲ್ಲಿತೇ, ಗಿಲ್ಲಿಂಚುಕೊವಾಲಿ ಎಂದು ಪೋಕಿರಿ ಡೈಲಾಗ್ ಹೊಡೆದ ನಟಿ ಅನಸೂಯ, ಯಾಕೆ ಗೊತ್ತಾ?
Next articleಪ್ರತಿನಿತ್ಯ ಕತ್ರಿನಾ ವಿಕ್ಕಿ ಆ ವಿಚಾರಕ್ಕೆ ಕಿತ್ತಾಡುತ್ತಾರಂತೆ, ಅವರು ಕಿತ್ತಾಡೋದು ಯಾವ ವಿಚಾರಕ್ಕೆ ಗೊತ್ತಾ….!