Film News

ಹೋಟೆಲ್ ಉದ್ಯಮಕ್ಕೆ ಕಾಲಿಡುತ್ತಿದ್ದಾರಂತೆ ಪ್ರಿನ್ಸ್ ಮಹೇಶ್ ಬಾಬು, ಅವರ ಹೊಸ ಹೋಟೆಲ್ ಎಲ್ಲಿ ಗೊತ್ತಾ?

ಟಾಲಿವುಡ್ ಸಿನಿರಂಗದಲ್ಲಿ ದೊಡ್ಡ ಕ್ರೇಜ್ ಹೊಂದಿರುವ ಟಾಪ್ ನಟರಲ್ಲಿ ಪ್ರಿನ್ಸ್ ಮಹೇಶ್ ಬಾಬು ಸಹ ಒಬ್ಬರಾಗಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅವರು ಅಭಿನಯಿಸಿದ ಸರ್ಕಾರು ವಾರಿ ಪಾಠ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿದೆ. ಇದರ ಜೊತೆಗೆ ರಾಜಮೌಳಿ ಹಾಗೂ ತ್ರಿವಿಕ್ರಮ್ ಮೊದಲಾದ ಸ್ಟಾರ್‍ ನಿರ್ದೇಶಕರ ಸಿನೆಮಾಗಳಲ್ಲಿ ನಟಿಸಲಿದ್ದಾರೆ. ಸದ್ಯ ಮಹೇಶ್ ಬಾಬು ರವರು ಹೊಸ ಉದ್ಯಮಕ್ಕೆ ಕೈ ಹಾಕಲಿದ್ದಾರಂತೆ. ಅದರೂ ಹೋಟೆಲ್ ಉದ್ಯಮವಂತೆ ಈ ಕುರಿತು ಕೆಲವೊಂದು ಸುದ್ದಿಗಳು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಸಿನೆಮಾಗಳ ಜೊತೆಗೆ ವ್ಯಾಪರದತ್ತ ಸಹ ಮಹೇಶ್ ಬಾಬು ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಟ ಪ್ರಿನ್ಸ್ ಮಹೇಶ್ ಬಾಬು ದೇಶದ ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನೆಮಾ ರಂಗದಲ್ಲಿ ಬೇಡಿಕೆಯುಳ್ಳ ಹಾಗೂ ಸ್ಟಾರ್‍ ನಟನಾಗಿ ಮುನ್ನುಗ್ಗುತ್ತಿದ್ದು, ಇದೀಗ ವ್ಯಾಪರದತ್ತ ಮುಖ ಮಾಡಿದ್ದಾರೆ. ಈಗಾಗಲೇ ಮಹೇಶ್ ಬಾಬು ಜಿ.ಎಂ.ಬಿ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಬ್ಯಾನರ್‍ ನಡಿ ಇತ್ತೀಚಿಗೆ ಮೂಡಿಬಂಡ ಮೇಜರ್‍ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿತ್ತು.  ಜಿ.ಎಂ.ಬಿ ಬ್ಯಾನರ್‍ ನಡಿ ನಿರ್ಮಾಣ ಮಾಡಿದ ಮೊದಲನೇ ಸಿನೆಮಾವೇ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಇದೀಗ ಮಹೇಶ್ ಬಾಬು ಮತ್ತೊಂದು ಬ್ಯುಸಿನೆಸ್ ಶುರು ಮಾಡಲಿದ್ದಾರಂತೆ. ಸಿನೆಮಾಗಳ ನಟಿಸುವುದರ ಜೊತೆ ಜೊತೆಗೆ ಬ್ಯುಸಿನಸ್ ಗಳತ್ತ ಸಹ ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲವೊಂದು ಸುದ್ದಿಗಳ ಪ್ರಕಾರ ಮಹೇಶ್ ಬಾಬು ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದಾರಂತೆ. ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹೇಶ್ ಬಾಬು ಹೋಟೆಲ್ ಉದ್ಯಮಕ್ಕೆ ಕಾಲಿಡಲಿದ್ದು, ಶೀಘ್ರದಲ್ಲೇ ರೆಸ್ಟೋರೆಂಟ್ ಪ್ರಾರಂಭ ಮಾಡಲಿದ್ದಾರೆ. ಹೈದರಾಬಾದ್ ನ ಬಂಜಾರಾ ಹಿಲ್ಸ್ ರಸ್ತೆ ನಂಬರ್‍ 12 ರಲ್ಲಿ ರೆಸ್ಟೋರೆಂಟ್ ಪ್ರಾರಂಭಿಸಲಿದ್ದಾರಂತೆ. ಈಗಾಗಲೇ ಮಹೇಶ್ ಬಾಬು ಹೈದರಾಬಾದ್ ನಲ್ಲಿ ಕೆಲವೊಂದು ಷಾಪಿಂಗ್ ಮಾಲ್ ಗಳು, ದುಬಾರಿ ಕಟ್ಟಡಗಳುನ್ನು ಹೊಂದಿದ್ದಾರೆ. ಸಿನೆಮಾಗಳು, ಬ್ಯುಸಿನೆಸ್ ಜೊತೆಗೆ ಕೆಲವೊಂದು ಸೇವಾ ಕಾರ್ಯಕ್ರಮಗಳ ಮೂಲಕ ಮಹೇಶ್ ಬಾಬು ಮುನ್ನುಗ್ಗುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ಫೌಂಡೇಷನ್ ಮೂಲಕ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನೂ ಮಹೇಶ್ ಬಾಬು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಎಸ್.ಎಸ್.ಎಂ.ಬಿ28 ಹೆಸರಿನಲ್ಲಿ ಒಂದು ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾದ ಬಳಿಕ ರಾಜಮೌಳಿ ನಿರ್ದೇಶನದಲ್ಲಿ ಮತ್ತೊಂದು ಸಿನೆಮಾವನ್ನು ಮಾಡಲಿದ್ದಾರೆ. ಅಂದಹಾಗೇ ಬಾಹುಬಲಿ ಖ್ಯಾತಿ ರೆಬೆಲ್ ಸ್ಟಾರ್‍ ಪ್ರಭಾಸ್ ಸಹ ದುಬೈನಲ್ಲಿ ಹೋಟೆಲ್ ಉದ್ಯಮವನ್ನು ಪ್ರಾರಂಭಿಸುತ್ತಿರುವ ಸುದ್ದಿಗಳು ಈ ಹಿಂದೆ ಕೇಳಿಬಂದಿತ್ತು.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

11 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

12 hours ago

ಚೂಡಿದಾರ್ ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟ ಪ್ರಿಯಾ ವಾರಿಯರ್, ಟ್ರೆಡಿಷನಲ್ ವೇರ್ ನಲ್ಲೂ ಮೈಂಡ್ ಬ್ಲಾಕ್ ಮಾಡಿದ ಮಲಯಾಳಿ ಕುಟ್ಟಿ…!

ಕಣ್ಸನ್ನೆ ಮೂಲಕ ಇಡೀ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದುಕೊಂಡ ಪ್ರಿಯಾ ವಾರಿಯರ್‍ ಎಲ್ಲರಿಗೂ ನೆನಪು ಇದ್ದೇ ಇರುತ್ತಾಳೆ. ಕಣ್ಸನ್ನೆ ಮೂಲಕವೇ ದೊಡ್ಡ…

14 hours ago

ಸ್ವಿಮ್ ಸ್ಯೂಟ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಗ್ಲೊಬಲ್ ಸ್ಟಾರ್, ವೀಕೆಂಡ್ ನಲ್ಲಿ ಭರ್ಜರಿಯಾಗಿ ಎಂಜಾಯ್ ಮಾಡಿ ಪಿಂಕಿ,…….!

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಹಾಟ್ ಟ್ರೀಟ್ ನೀಡುವುದರಲ್ಲಿ ಸದಾ ಮುಂದಿರುತ್ತಾರೆ. ಆಕೆಯ ಸೋಷಿಯಲ್ ಮಿಡಿಯಾ ಖಾತೆಯನ್ನು ಗಮನಿಸಿದರೇ ಅದನ್ನು…

15 hours ago

ಬಿಳಿ ಕೂದಲಿನೊಂದಿಗೆ ನಮ್ರತಾ ಹಂಚಿಕೊಂಡ ಪೊಟೋಗಳು ಸಖತ್ ವೈರಲ್..!

ಕಳೆದ 1993ರಲ್ಲಿ ಮಿಸ್ ಇಂಡಿಯಾ ಹಾಗೂ ಮಿಸ್ ಏಷಿಯಾ ಫೆಸಿಫಿಕ್ ಆಗಿ ಆಯ್ಕೆಯಾದ ನಮ್ರತಾ ಶೀರೋಡಕ್ರರ್‍ ರವರ ಪರಿಚಯ ಪ್ರತ್ಯೇಕವಾಗಿ…

17 hours ago

ಉರ್ಫಿಗೆ ಚಿಕ್ಕಹುಡುಗರೂ ಸಹ ಸಖತ್ ಕಿರುಕುಳ ಕೊಡ್ತಿದ್ದಾರಂತೆ, ಕಾಲ್ ಮಾಡಿ, ಸಖತ್ ಕಾಟ ಕೊಡ್ತಾರಂತೆ…!

ವಿಚಿತ್ರ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಏಕೈಕ ನಟಿ ಎಂದರೇ ಉರ್ಫಿ ಜಾವೇದ್ ಎಂದು ಹೇಳಬಹುದು. ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ…

19 hours ago