ಟಾಲಿವುಡ್ ಸ್ಟಾರ್ ಮಹೇಶ್ ಬಾಬು ರವರಲ್ಲಿ ನಮ್ರತಾ ಗೆ ಆ ಒಂದು ವಿಚಾರ ಇಷ್ಟವಾಗುವುದಿಲ್ಲವಂತೆ….!

ಟಾಲಿವುಡ್ ಸಿನಿರಂಗದಲ್ಲಿ ಅನೇಕ ಜೋಡಿಗಳಿಗೆ ಮಾದರಿಯಾದ ಜೋಡಿಗಳಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಜೋಡಿ ಸಹ ಒದೆಂದು ಹೇಳಬಹುದು. ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಸೂಪರ್‍ ಸ್ಟಾರ್‍ ಮಹೇಶ್ ಬಾಬು ಪಕ್ಕಾ ಫ್ಯಾಮಿಲಿ ಮೆನ್ ಎಂದೂ ಪ್ರೂವ್ ಮಾಡಿಕೊಂಡಿದ್ದಾರೆ. ಸಿನೆಮಾಗಳಲ್ಲಿನ ಬ್ಯುಸಿಯಾಗಿರುವ ಸಮಯವನ್ನು ಹೊರತುಪಡಿಸಿದರೇ ಉಳಿದ ಸಮಯವನ್ನು ತನ್ನ ಕುಟುಂಬದೊಂದಿಗೆ ಕಳೆಯುತ್ತಾರೆ. ಹೀಗೆ ಸಂತೋಷದಿಂದ ಇರುವಂತಹ ಮಹೇಶ್ ಬಾಬು ರವರಲ್ಲಿನ ಆ ಒಂದು ವಿಚಾರ ನಮ್ರತಾಗೆ ಇಷ್ಟವಾಗುವುದಿಲ್ಲವಂತೆ ಏನು ಎಂಬ ವಿಚಾರಕ್ಕೆ ಬಂದರೇ,

ಇನ್ನೂ ಸಿನಿರಂಗದಲ್ಲಿ ಪ್ರೀತಿ, ಪ್ರೇಮ ಮದುವೆ, ಬ್ರೇಕಿಂಗ್ ಇದೆಲ್ಲವೂ ಸರ್ವೇ ಸಾಮಾನ್ಯವಾಗಿರುತ್ತದೆ. ಅನೇಕ ಜೋಡಿಗಳು ಮದುವೆಯಾಗಿ ಬೇರೆ ಸಹ ಆಗಿದ್ದಾರೆ. ಆದರೆ ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಮಹೇಶ್ ಬಾಬು ಹಾಗೂ ನಮ್ರತಾ. ಇನ್ನೂ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಕರೆಸಿಕೊಂಡಿರುವ ಮಹೇಶ್ ಬಾಬು ರವರಲ್ಲಿನ ಒಂದು ಗುಣ ನಮ್ರತಾ ರವರಿಗೆ ಇಷ್ಟವಾಗುವುದಿಲ್ಲವಂತೆ. ಸುಮಾರು ವರ್ಷಗಳಿಂದ ನಮ್ರತಾಗೆ ಮಹೇಶ್ ಬಾಬುರವರಲ್ಲಿನ ಆ ಒಂದು ವಿಚಾರ ಇಷ್ಟವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ನೋಡಲು ಸ್ಟೈಲ್ ಆಗಿ ಕೂಲ್ ಆಗಿ, ಶಾಂತ ಸ್ವಭಾವದವರಂತೆ ಕಾಣುತ್ತಾರೆ. ಆದರೆ ಅವರಲ್ಲಿ ತುಂಬಾನೆ ಕೋಪ ಸಹ ಇದೆಯಂತೆ. ನೋಡೋಕೆ ಶಾಂತವಾಗಿರುವ ಮಹೇಶ್ ಬಾಬು ರವರಿಗೆ ಕೋಪ ಬಂದರೇ ಯಾರೂ ಸಹ ಆತನ ಕೋಪವನ್ನು ಎದುರಿಸಲು ಸಾಧ್ಯವಾಗದೇ ಭಯಪಡಬೇಕಂತೆ. ಜೊತೆಗೆ ಆ ಸಮಯದಲ್ಲಿ ಎಂತಹ ಮಾತನ್ನಾದರೂ ಆಡಿಬಿಡುತ್ತಾರಂತೆ. ಈ ವಿಚಾರದಿಂದಲೇ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ಗಲಾಟೆಗಳೂ ಸಹ ಆಗಿದೆಯಂತೆ.

ಇನ್ನೂ ನಮ್ರತಾ ಸಹ ಆ ಕೋಪವನ್ನು ಕಂಟ್ರೋಲ್ ಮಾಡಲು ತುಂಬಾನೆ ಶ್ರಮ ವಹಿಸುತ್ತಾರಂತೆ. ಆದರೆ ಮಹೇಶ್ ಬಾಬು ಮಾತ್ರ ಕೋಪ ಕಂಟ್ರೋಲ್ ಮಾಡಿಕೊಳ್ಳುತ್ತಿಲ್ಲವಂತೆ. ಕೋಪ ಕಂಟ್ರೋಲ್ ತಪ್ಪಿದರೇ ಆತನನ್ನು ತಡೆಯಲು ಯಾರಿಂದಲೂ ಸಹ ಆಗುವುದಿಲ್ಲವಂತೆ. ಆದರೆ ಅಂತಹ ಸಂದರ್ಭಗಳು ತುಂಬಾನೆ ವಿರಳವಾಗಿ ನಡೆಯುತ್ತಿರುತ್ತವಂತೆ. ಇನ್ನೂ ತಮ್ಮ ಮೇಲೆ ಗಾಸಿಪ್ಸ್ ಬರೆಯುವಂತಹವರನ್ನು ಮಹೇಶ್ ಬಾಬು ಕ್ಷಮಿಸುತ್ತಾರಂತೆ. ಆದರೆ ತನ್ನ ಮಗಳ ತಂಟೆಗೆ ಯಾರಾದರೂ ಬಂದರೇ ಸಹಿಸುವುದೇ ಇಲ್ಲವಂತೆ. ಮಹೇಶ್ ಬಾಬುರವರಲ್ಲಿನ ಈ ಸಣ್ಣ ಲೋಪವನ್ನು ನಮ್ರತಾ ಹೋಗಲಾಡಿಸಲು ತುಂಬಾನ ಕಷ್ಟಪಡುತ್ತಿರುತ್ತಾರಂತೆ. ಸದ್ಯ ಈ ವಿಚಾರ ಎಷ್ಟರ ಮಟ್ಟಿಗೆ ನಿಜವೋ, ಸುಳ್ಳೊ ಈ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಇನ್ನೂ ಸಿನೆಮಾಗಳು ಮಾತ್ರವಲ್ಲದೇ ಮಹೇಶ್ ಬಾಬು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿರುತ್ತಾರೆ. ಈಗಾಗಲೇ ಸುಮಾರು ಸಾವಿರ ಮಂದಿಗೂ ಅಧಿಕ ಮಕ್ಕಳಿಗೆ ಹೃದಯ ಸಂಬಂಧಿ ಚಿಕಿತ್ಸೆಯನ್ನು ಸಹ ಮಾಡಿಸಿದ್ದಾರೆ. ಜೊತೆಗೆ ಕೆಲವು ಗ್ರಾಮಗಳಲ್ಲಿ ಶಾಲೆಗಳನ್ನು ಸಹ ದತ್ತು ತೆಗೆದುಕೊಂಡು ಆಧುನಿಕ ಶಿಕ್ಷಣ ಕೊಡಿಸುತ್ತಿದ್ದಾರೆ. ಸದ್ಯ ಮಹೇಶ್ ಬಾಬು ರವರ SSBM28 ಸಿನೆಮಾ ಚಿತ್ರೀಕರಣದ ಹಂತದಲ್ಲಿದೆ.

Previous articleಮೆಕಪ್ ಲೆಸ್ ಪೊಟೋಸ್ ಹಂಚಿಕೊಂಡ ಪೂಜಾ ಹೆಗ್ಡೆ, ವೈರಲ್ ಆದ ಪೊಟೊ….!
Next articleಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್ ಡೇಟಿಂಗ್ ನಡೆಸುತ್ತಿರುವ ವ್ಯಕ್ತಿ ಯಾರು, ಆತನ ಬ್ಯಾಗ್ರೌಂಡ್ ಏನು ಗೊತ್ತಾ?