ಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮೂರನೇ ಮದುವೆಯಾಗಲಿದ್ದಾರಂತೆ?

ಟಾಲಿವುಡ್ ನಲ್ಲಿ ದೊಡ್ಡ ಫೇಮ್ ನೇಮ್ ಹೊಂದಿರುವಂತಹ ಮೆಗಸ್ಟಾರ್‍ ಚಿರಂಜೀವಿ ಕಿರಿಯ ಮಗಳು ಶ್ರೀಜಾ ಈ ಹಿಂದೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆಕೆಯ ವಿಚ್ಚೇಧನದ ಬಗ್ಗೆ ವಿವಿಧ ರೀತಿಯಲ್ಲಿ ಸುದ್ದಿಗಳು ಹರಿದಾಡಿದ್ದವು. ಇದೀಗ ಮತ್ತೊಮ್ಮೆ ಅವರ ಬಗ್ಗೆ ಸುದ್ದಿಯೊಂದು ಹೊರಬಂದಿದ್ದು, ಇದೀಗ ಈ ವಿಚಾರ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಆ ಸುದ್ದಿ ಏನು ಎಂಬುದನ್ನು ತಿಳಿಯಲು ಮುಂದೆ ಓದಿ…

ಮೇಗಾ ಕುಟುಂಬದ ಚಿರಂಜೀವಿ ಮಗಳು ಶ್ರೀಜಾ ಮೊದಲು ಪ್ರೀತಿಸಿ ವಿವಾಹವಾಗಿದ್ದರು. ಮಗುವೊಂದಕ್ಕೆ ಜನ್ಮ ಸಹ ನೀಡಿದ್ದರು. ಬಳಿಕ ಮೊದಲನೇ ಪತಿಯೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದರು.  ಅನಂತರ ಮನೆಯಲ್ಲಿ ನೋಡಿದ ಹುಡುಗನ್ನು ಮದುವೆಯಾದರು. ಕಲ್ಯಾಣ್ ದೇವ್ ಎಂಬ ವ್ಯಕ್ತಿಯನ್ನು ಶ್ರೀಜಾ ಎರಡನೇ ಮದುವೆಯಾದರು. ಆದರೆ ಇದೀಗ ಕಲ್ಯಾಣ್ ದೇವ್ ಗೂ ಸಹ ಶ್ರೀಜಾ ವಿಚ್ಚೇದನ ನೀಡಲಿದ್ದಾರೆ ಎಂಬ ವಿಚಾರ ಜೋರಾಗಿಯೇ ಕೇಳಿಬರುತ್ತಿದೆ. ಸದ್ಯ ಈ ವಿಚಾರ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ. ಸದ್ಯ ವಿಚ್ಚೇದನ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಈಗಾಗಲೇ ಈ ಜೋಡಿ ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೆಗಾಸ್ಟಾರ್‍ ಚಿರಂಜೀವಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ವಿಚಾರ ಸಹ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಕುರಿತು ಮೆಗಾ ಫ್ಯಾಮಿಲಿ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಇನ್ನೂ ಶ್ರೀಜಾ ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತಮ್ಮ ಹೆಸರನ್ನು ಸಹ ಬದಲಿಸಿಕೊಂಡಿದ್ದರು. ತಮ್ಮ ಪತಿಯ ಹೆಸರನ್ನು ತೆಗೆದುಹಾಕಿದ್ದರು. ಅಂದಿನಿಂದಲೇ ಈ ಜೋಡಿಯ ಬಗ್ಗೆ ಕೆಲವೊಂದು ರೂಮರ್‍ ಗಳು ಹುಟ್ಟಿಕೊಳ್ಳಲು ಶುರುವಾಗಿತ್ತು. ಆದರೆ ಚಿರಂಜೀವಿಯಾಗಲಿ, ಶ್ರೀಜಾ ಆಗಲಿ ಈ ಬಗ್ಗೆ ಏನು ಮಾತನಾಡಿರಲಿಲ್ಲ. ಇದೀಗ ಶ್ರೀಜಾ ಹಾಗೂ ಕಲ್ಯಾಣ್ ವಿಚ್ಚೇಧನ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಹಾಗೂ ಅವರ ಕುಟುಂಬದ ಬಗ್ಗೆ ಇಂತಹ ರೂಮರ್‍ ಗಳು ಬಂದರೇ ಕ್ಷಣ ಮಾತ್ರದಲ್ಲೇ ವೈರಲ್ ಆಗಿಬಿಡುತ್ತದೆ. ಅದರಲ್ಲೂ ದೊಡ್ಡ ಸ್ಟಾರ್‍ ಕುಟುಂಬದ ಬಗ್ಗೆ ರೂಮರ್‍ ಗಳು ಬಂದರೇ ಮತಷ್ಟು ರೂಮರ್‍ ಸ್ಪ್ರೆಡ್ ಆಗುತ್ತದೆ.

ಇನ್ನೂ ಸದ್ಯ ಶ್ರೀಜಾ ತನ್ನ ಆಪ್ತ ಗೆಳೆಯೊನೊಂದಿಗೆ ಪ್ರೀತಿಯಲ್ಲಿದ್ದಾರೆ. ಶೀಘ್ರದಲ್ಲೇ ಆತನೊಂದಿಗೆ ಮೂರನೇ ಮದುವೆಗೆ ಸಿದ್ದವಾಗಲಿದ್ದಾರೆ ಎಂದು ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ರೀಜಾ ಮದುವೆ ಬಗ್ಗೆಯಾಗಲೀ ಅಥವಾ ಶ್ರೀಜಾ ವಿಚ್ಚೇಧನದ ಬಗ್ಗೆಯಾಗಲಿ ಯಾವುದೇ ಪ್ರತಿಕ್ರಿಯೆಯನ್ನು ಮೆಗಾ ಫ್ಯಾಮಿಲಿ ನೀಡಿಲ್ಲ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಮಾತ್ರ ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ.

Previous articleಸ್ಯಾಡ್ ನ್ಯೂಸ್, ಸಿನಿರಂಗದ ಖ್ಯಾತ ನಟಿಯ ಪತಿ ಹಠಾತ್ ಮರಣ, ಸಿನಿರಂಗದಲ್ಲಿ ವಿಷಾದ…!
Next articleಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿ ಕೇಳಿದ ಬೇಡಿಕೆಯನ್ನು ಈಡೇರಿಸಿದ ನಟಿ! ಆಕೆಯ ಬೋಲ್ಡ್ ಉತ್ತರಕ್ಕೆ ಶಾಕ್ ಆದ ಅಭಿಮಾನಿ!