Film News

ಮಾಲ್ಡೀವ್ಸ್ ನಲ್ಲಿ ಮಂಚು ಫ್ಯಾಮಿಲಿ ಎಂಜಾಯ್: ಪೊಟೋಸ್ ವೈರಲ್

ಹೈದರಾಬಾದ್: ಇತ್ತೀಚಿಗೆ ಸಿನಿರಂಗದ ಸೆಲೆಬ್ರೆಟಿಗಳಿಗೆ ಮಾಲ್ಡೀವ್ಸ್ ಪ್ರವಾಸ ಬಹು ಇಷ್ಟವಾದಂತಿದೆ. ಇದೀಗ ಈ ಸಾಲಿಗೆ ಟಾಲಿವುಡ್ ನ ಮಂಚು ಫ್ಯಾಮಿಲಿ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಟಾಲಿವುಡ್ ನಟ ಮೋಹನ್ ಬಾಬು ಕುಟುಂಬ ಮಾಲ್ಡೀವ್ಸ್ ನಲ್ಲಿ ಕಳೆದ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನಟ ಮೋಹನ್ ಬಾಬು ತಮ್ಮ ಧರ್ಮಪತ್ನಿ ನಿರ್ಮಲಾದೇವಿ ಜೊತೆ ಮಂಚು ಲಕ್ಷ್ಮೀ ಕೂಡ ಭಾಗಿಯಾಗಿದ್ದಾರೆ. ಈ ವಿಚಾರವನ್ನು ಮಂಚು ಲಕ್ಷ್ಮೀ ಸ್ವತಃ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಮಾಲ್ಡೀವ್ಸ್ ನಲ್ಲಿ ಇವರು ಭೇಟಿ ನೀಡಿದ ಪ್ರದೇಶಗಳ ಪೊಟೋಗಳನ್ನು ಶೇರ್ ಮಾಡಿ ಭೂತಲ ಸ್ವರ್‍ಗಂ ಎಂಬ ಹೆಡಿಂಗ್ ಸಹ ಹಾಕಿದ್ದಾರೆ.

ಸದ್ಯ ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೋಹನ್ ಬಾಬು ತನ್ನ ಮಗಳು, ಮೊಮ್ಮಕ್ಕಳ ಜೊತೆ ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್ ಗಳಿಗೆ ತೆರಳಿದ್ದರು. ಅಷ್ಟೇ ಅಲ್ಲದೇ ಶೀಘ್ರದಲ್ಲೇ ಮಂಚು ವಿಷ್ಣು ಹಾಗೂ ಮಂಚು ಮನೋಜ್ ಕುಟುಂಬ ಸಹ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ನಟಿ ಕಾಜಲ್ ಮದುವೆ ನಂತರ ಹನಿಮೂನ್‌ಗಾಗಿ ಮಾಲ್ಡೀವ್ಸ್ ಗೆ ಬಂದ ನಂತರ ಟಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯಲು ಹೋಗುತ್ತಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ ನಟ ಯಶ್ ಕುಟುಂಬ ಸಹ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದ್ದು, ಈ ಪೊಟೋಗಳು ಸಖತ್ ವೈರಲ್ ಆಗಿತ್ತು.

Trending

To Top