ಡಾರ್ಕ್ ಮೋಡ್ ನಲ್ಲಿ ಹಾಟ್ ಸ್ಟ್ರಕ್ಚರ್ ಶೋ ಮಾಡಿದ ರಾಶಿ ಖನ್ನಾ, ಫಿದಾ ಆದ ಅಭಿಮಾನಿಗಳು…!

ಇತ್ತೀಚಿಗೆ ಕಿರುತೆರೆ ನಟಿಯರಿಂದ ಹಿಡಿದು ದೊಡ್ಡ ಸ್ಟಾರ್‍ ನಟಿಯರವರೆಗೂ ಎಲ್ಲರೂ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಈ ಸಾಲಿನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ರಾಶಿ ಖನ್ನಾ ಸಹ ಸೇರಿಕೊಳ್ಳುತ್ತಾರೆ. ನಟಿ ರಾಶಿ ಖನ್ನಾ ಸಹ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಲ್ಲಿ ಬ್ಯೂಟಿ ಏಂಜಲ್ ಎಂದೇ ಆಕೆಯನ್ನು ಕರೆಯಲಾಗುತ್ತಿದ್ದು, ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಒಳ್ಳೆಯ ಕ್ರೇಜ್ ಪಡದುಕೊಂಡ ಈಕೆಗೆ ಇತ್ತೀಚಿಗೆ ಕೊಂಚ ಅವಕಾಶಗಳೂ ಸಹ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೂ ಸಹ ಟ್ರೆಂಡ್ ಗೆ ತಕ್ಕಂತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಾ ಕರಿಯರ್‍ ಸಾಗಿಸುತ್ತಿದ್ದಾರೆ. ಬೆಂಗಾಲ್ ಟೈಗರ್‍, ತೊಲಿಪ್ರೇಮ, ಸುಪ್ರೀಂ, ಪ್ರತಿರೋಜು ಪಂಡಗೆ ಮೊದಲಾದ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡ ಈಕೆ ಇದೀಗ ಸೋಷಿಯಲ್ ಮಿಡಿಯಾದ ಮೂಲಕ ಸದ್ದು ಮಾಡುತ್ತಿದ್ದಾರೆ. ಸದಾ ಯುವಕರಿಗೆ ಸೌಂದರ್ಯ ಎಂಬ ಗಾಳವನ್ನು ಹಾಕುತ್ತಾ ತಮ್ಮತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ಡಾರ್ಕ್ ಮೋಡ್ ನಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಅವು ಇದೀಗ ವೈರಲ್ ಆಗುತ್ತಿವೆ.

ಸದಾ ಸೌಂದರ್ಯದ ಮೂಲಕ ಅನೇಕರನ್ನು ಮಂತ್ರಮುಗ್ದರನ್ನಾಗುವಂತೆ ಮಾಡುವ ರಾಶಿ ಖನ್ನಾ ಇದೀಗ ಡಾರ್ಕ್ ಮೋಡ್ ನಲ್ಲಿ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಡಾರ್ಕ್ ಮೋಡ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಟೈಟ್ ಫಿಟ್ ಡ್ರೆಸ್ ಧರಿಸಿ, ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಡಾರ್ಕ್ ಚಾಕ್ಲೇಟ್ ನಂತೆ ಹಾಟ್ ಪೋಸ್ ಕೊಟ್ಟಿದ್ದು, ಎಲ್ಲರೂ ಆಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇನ್ನೂ ನ.30 ರಂದು ಆಕೆಯ ಹುಟ್ಟುಹಬ್ಬವಿದ್ದು, ಮುಂಚಿತವಾಗಿಯೇ ಆಕೆಗೆ ಅನೇಕರು ಶುಭಾಷಗಳನ್ನು ಸಹ ಕೋರುತ್ತಾ, ಪೊಟೋಗಳನ್ನು ವೈರಲ್ ಮಾಡುವುದರ ಜೊತೆಗೆ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆಯನ್ನು ಸಹ ಸೂಚಿಸುತ್ತಿದ್ದಾರೆ.

ನಟಿ ರಾಶಿ ಖನ್ನಾಗೆ ಈ ವರ್ಷ ತುಂಬಾನೆ ಬ್ಯಾಡ್ ಎಂದು ಹೇಳಬಹುದಾಗಿದೆ. ಆಕೆ ನಟಿಸಿದ್ದಂತಹ ಪಕ್ಕಾ ಕಮರ್ಷಿಯಲ್, ಥ್ಯಾಂಕ್ಯೂ ಸಿನೆಮಾಗಳೆರಡು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಸಿನೆಮಾಗಳು ಆಕೆಗೆ ತುಂಬಾನೆ ನಿರಾಸೆಯನ್ನು ಮೂಡಿಸಿದೆ. ಸದ್ಯ ರಾಶಿ ಖನ್ನಾ ತಮಿಳಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದು, ಈ ಸಿನೆಮಾಗಳಾದರೂ ಆಕೆಗೆ ಹಿಟ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Previous articleಬ್ರಾ ತರಹದ ಡ್ರೆಸ್ ನಲ್ಲಿ ಅಷುರೆಡ್ಡಿ ಹಾಟ್ ಲುಕ್ಸ್, ಆ ಬಟ್ಟೆಯಾದರೂ ಏತಕ್ಕೆ ಎಂದು ಆಕ್ರೋಷಗೊಂಡ ನೆಟ್ಟಿಗರು…!
Next articleಪತಿಯನ್ನು ಹೊಗಳುತ್ತಾ, ಪೊಟೋ ಹಂಚಿಕೊಂಡು ಗುಡ್ ನ್ಯೂಸ್ ಹೇಳಿದ್ರಾ ಮಿಹಿಕಾ ಬಜಾಜ್?